Asianet Suvarna News Asianet Suvarna News

ಆನ್‍ಲೈನ್‍ನಲ್ಲಿ ಮದುವೆ ಟಿಕೆಟ್ ಸೇಲ್ ಮಾಡಿ, ವಿದೇಶಿ ಅತಿಥಿಗಳನ್ನು ವಿವಾಹಕ್ಕೆ ಆಹ್ವಾನಿಸಿ

ಮೂವೀ ಟಿಕೆಟ್ ಮಾತ್ರವಲ್ಲ,ಮದುವೆ ಟಿಕೆಟ್‍ಗಳು ಕೂಡ ಈಗ ಆನ್‍ಲೈನ್‍ನಲ್ಲಿ ಲಭ್ಯವಿವೆ. ನೀವು ಕೂಡ ಕೆಲವೇ ದಿನಗಳಲ್ಲಿ ಹಸೆಮಣೆಯೇರುತ್ತಿದ್ರೆ,ನಿಮ್ಮ ಮದುವೆ ಟಿಕೆಟ್‍ಗಳನ್ನು ಆನ್‍ಲೈನ್‍ನಲ್ಲಿ ವಿದೇಶಿಗರಿಗೆ ಮಾರಾಟ ಮಾಡುವ ಮೂಲಕ ಅವರಿಗೆ ಮದುವೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಬಹುದು.

all about ticketed Indian wedding
Author
Bangalore, First Published Feb 23, 2020, 2:43 PM IST

ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗುತ್ತವೆ ಎನ್ನುತ್ತಾರೆ.ಆದರೆ,ಭಾರತದಲ್ಲಿ ನಡೆಯುವ ಕೆಲವು ಮದುವೆಗಳು ಸ್ವರ್ಗವನ್ನೇ ಭೂಮಿ ಮೇಲೆ ಸೃಷ್ಟಿಸಿರುತ್ತವೆ.ನಿಜ,ಭಾರತೀಯ ಸಂಸ್ಕತಿ,ಸಂಪ್ರದಾಯ ವಿಭಿನ್ನ,ಅನನ್ಯ. ಭೂಮಿ ಮೇಲೆ ಬೇರೆಲ್ಲೂ ಭಾರತದಷ್ಟು ಸಂಪ್ರದಾಯಬದ್ಧ,ವೈಭವಯುತ ಹಾಗೂ ಸಡಗರದ ಮದುವೆ ನೋಡಲು ಸಿಗೋದಿಲ್ಲ. ಅಷ್ಟೇ ಅಲ್ಲ,ಭಾರತದ ಮದುವೆ ನೋಡದೆ ಇಲ್ಲಿನ ಸಂಸ್ಕತಿ ಹಾಗೂ ಸಂಪ್ರದಾಯವನ್ನು ಪೂರ್ಣವಾಗಿ ಅರಿತುಕೊಳ್ಳುವುದು ಅಸಾಧ್ಯವೇ ಸರಿ.ಇದೇ ಕಾರಣಕ್ಕೆ ಭಾರತದ ಸಂಸ್ಕತಿ ಬಗ್ಗೆ ಆಸಕ್ತಿ ಹೊಂದಿರುವ ವಿದೇಶಿಗರಿಗೆ ಇಲ್ಲಿನ ವಿವಾಹದಲ್ಲಿ ಪಾಲ್ಗೊಳ್ಳಬೇಕು ಎಂಬ ಬಯಕೆಯಿರುತ್ತದೆ. ಆದರೆ,ಎಲ್ಲಿ,ಯಾವಾಗ,ಯಾರ ವಿವಾಹ ನಡೆಯುತ್ತದೆ ಎಂಬ ಮಾಹಿತಿ ಅವರಿಗೆ ಎಲ್ಲಿಂದ ಸಿಗಬೇಕು ಅಲ್ವಾ? ಇನ್ನು ನಮ್ಮ ಮದುವೆಯಲ್ಲಿ ಏನಾದರೊಂದು ವಿಶೇಷತೆಯಿರಬೇಕು ಎಂಬ ಬಯಕೆ ಹಸೆಮಣೆಯೇರಲು ಸಜ್ಜಾಗಿರುವ ಗಂಡು-ಹೆಣ್ಣಿಗೆ ಇದ್ದೇಇರುತ್ತದೆ.ವಿದೇಶಿ ಅತಿಥಿಗಳನ್ನು ಮದುವೆಗೆ ಆಹ್ವಾನಿಸುವ ಅವಕಾಶ ಸಿಕ್ಕರೆ ಬಿಟ್ಟಾರೆಯೇ? ಮದುವೆಗೆ ಆಹ್ವಾನಿಸುವವರಿಗೆ ಹಾಗೂ ಪಾಲ್ಗೊಳ್ಳಲು ಬಯಸುವ ವಿದೇಶಿ ಅತಿಥಿಗಳಿಗೆ ಇಬ್ಬರನ್ನೂ ಸಂಪರ್ಕಿಸುವ ವೇದಿಕೆಯೊಂದಿದೆ. ಅದೇ JoinMyWedding.com  ಎಂಬ ವೆಬ್‍ಸೈಟ್. ಆಸ್ಟ್ರೇಲಿಯಾ ಮೂಲದ ಈ ಸ್ಟಾರ್ಟ್‍ಅಪ್ ವಧು-ವರರಿಗೆ ತಮ್ಮ ಮದುವೆ ಟಿಕೆಟ್‍ಗಳನ್ನು ವಿದೇಶಿಗರಿಗೆ ಮಾರುವ ಅವಕಾಶ ಕಲ್ಪಿಸುವ ಮೂಲಕ ಇಬ್ಬರ ನಡುವೆ ಸಂಪರ್ಕ ಬೆಸೆದಿದೆ. 

ಗಂಡ ಊರಲ್ಲಿಲ್ಲ ಅಂದ್ರೆ ಹೆಂಡ್ತಿಗೆ ಹಾಲಿ ಡೇ, ಜಾಲಿ ಡೇ

ವೆಡ್ಡಿಂಗ್ ಟೂರಿಸ್‍ಂಗೆ ಸ್ಫೂರ್ತಿ: JoinMyWedding.com ಭಾರತೀಯ ವಿವಾಹದ ಟಿಕೆಟ್‍ಗಳನ್ನು ವಿದೇಶಿಗರಿಗೆ ಮಾರಾಟ ಮಾಡುತ್ತದೆ.2016ರಲ್ಲಿ ಒರ್ಸಿ ಪರ್ಕನಿ ಅವರಿಂದ ಸ್ಥಾಪಿಸಲ್ಪಟ್ಟ ಈ ಸ್ಟಾರ್ಟ್‍ಅಪ್ ಇಂದು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಭಾರಿ ಸದ್ದು ಮಾಡುತ್ತಿರುವ ಜೊತೆಗೆ ‘ವೆಡ್ಡಿಂಗ್ ಟೂರಿಸ್‍ಂ’ಎಂಬ ಪರಿಕಲ್ಪನೆಗೆ ಜೀವ ತುಂಬಿದೆ. ತಜ್ಞರ ಪ್ರಕಾರ ಟೂರಿಸ್‍ಂ ಇಂಡಸ್ಟ್ರಿ ಭವಿಷ್ಯದಲ್ಲಿ ವೆಡ್ಡಿಂಗ್ ಟೂರಿಸ್‍ಂ ಟ್ರೆಂಡ್ ಆಗಲಿದ್ದು,ದೊಡ್ಡ ಸದ್ದು ಮಾಡಲಿದೆ. 

ಮದುವೆ ಟಿಕೆಟ್ ಬಿಕರಿ ಮಾಡೋದು ಹೇಗೆ?: ತಮ್ಮ ವಿವಾಹ ಕಾರ್ಯಕ್ರಮದಲ್ಲಿ ವಿದೇಶಿ ಪ್ರವಾಸಿಗರು ಪಾಲ್ಗೊಳ್ಳಬೇಕು ಎಂಬ ಬಯಕೆ ಹೊಂದಿರುವ ಜೋಡಿಗಳು JoinMyWedding.com ನಲ್ಲಿ ನೋಂದಣಿ ಮಾಡಬೇಕು.ಮದುವೆ ಹಾಗೂ ಅದಕ್ಕೆ ಸಂಬಂಧಿಸಿದ ಎಲ್ಲ ಕಾರ್ಯಕ್ರಮಗಳ ವಿವರಗಳನ್ನು ನೀಡಬೇಕು.ಅಂದ್ರೆ ಮೆಹಂದಿ,ಅರಿಶಿಣ ಶಾಸ್ತ್ರ,ರಿಸೆಪ್ಷನ್,ಮದುವೆ ಸಮಾರಂಭ ಸೇರಿದಂತೆ ಎಲ್ಲ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನಮೂದಿಸಬೇಕು.ಮದುಮಕ್ಕಳು ಹಾಗೂ ಅವರ ಕುಟುಂಬಸ್ಥರೇ ಅತಿಥ್ಯದ ಜವಾಬ್ದಾರಿ ಹೊರಬೇಕು.ಅತಿಥಿಗಳಿಗೆ ವಸತಿ,ಆಹಾರದಿಂದ ಹಿಡಿದು ಅವರ ಅಗತ್ಯಗಳಿಗೆ ಸ್ಪಂದಿಸುವ, ಮಾಹಿತಿ ನೀಡುವ ಹಾಗೂ ಉಪಚರಿಸುವ ಕಾರ್ಯ ವಧು-ವರರ ಕುಟುಂಬಸ್ಥರದ್ದೇ ಆಗಿರುತ್ತದೆ.ಕುಟುಂಬದ ಒಬ್ಬ ಸದಸ್ಯ ವಿದೇಶಿಗರಿಗೆ ಗೈಡ್ ಆಗಿ ಕಾರ್ಯನಿರ್ವಹಿಸುವ ಮೂಲಕ ಮದುವೆ ಕುರಿತ ಎಲ್ಲ ಮಾಹಿತಿಯನ್ನು ನೀಡಬೇಕಾಗುತ್ತದೆ.ಹೀಗಾಗಿ ಇವೆಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವಿವಾಹದ ಟಿಕೆಟ್‍ಗೆ ದರ ನಿಗದಿಪಡಿಸಲಾಗುತ್ತದೆ. ವಿದೇಶಿ ಪ್ರವಾಸಿಗರು ಆನ್‍ಲೈನ್‍ನಲ್ಲಿ ಈ ಟಿಕೆಟ್‍ಗಳನ್ನು ಖರೀದಿಸಬಹುದು.ಟಿಕೆಟ್‍ಗಳ ಮಾರಾಟದಿಂದ ಬಂದ ಹಣದಲ್ಲಿ ಸ್ವಲ್ಪ ಪ್ರಮಾಣವನ್ನು ಸ್ಟಾಟ್‍ಅಪ್ ಕಂಪನಿ ಸೇವಾ ಶುಲ್ಕ ರೂಪದಲ್ಲಿ ಕಡಿತಗೊಳಿಸಿ ಉಳಿಕೆ ಮೊತ್ತವನ್ನು ವಧುವರರಿಗೆ ನೀಡುತ್ತದೆ.

ಮದುವೆಯಾದ್ರೆ ಹೆಣ್ಣಿಗೆ ಮಾತ್ರವಲ್ಲ, ಗಂಡಿಗೂ ತಪ್ಪೋಲ್ಲ ತಾಪತ್ರಯ

ಭಾರತೀಯರೂ ಟಿಕೆಟ್ ಖರೀದಿಸಬಹುದು: ಈ ವೆಬ್‍ಸೈಟ್‍ನ ಮೊದಲ ಆದ್ಯತೆ ವಿದೇಶಿ ಪ್ರವಾಸಿಗರಾದರೂ ಭಾರತೀಯರು ಕೂಡ ಟಿಕೆಟ್ ಖರೀದಿಸಬಹುದು.ಭಾರತದಲ್ಲಿ ನಡೆಯುವ ವಿವಾಹಗಳಲ್ಲಿ ಕೂಡ ವೈವಿಧ್ಯತೆಯಿದೆ.ಒಂದೇ ರಾಜ್ಯದಲ್ಲಿ ಬೇರೆ ಬೇರೆ ಸಮುದಾಯಗಳ ವಿವಾಹಗಳಲ್ಲಿ ಕೂಡ ವಿಭಿನ್ನ ಸಂಪ್ರದಾಯ,ಆಚರಣೆಗಳಿರುತ್ತವೆ.ಪಂಜಾಬಿ,ರಾಜಸ್ಥಾನಿ,ಗುಜರಾತಿ ವಿವಾಹ ನೋಡಬೇಕೆಂಬ ಬಯಕೆ ಕನ್ನಡಿಗರಿಗಿರಬಹುದು.ಅಂಥವರು ಕೂಡ ಟಿಕೆಟ್ ಖರೀದಿಸಬಹುದು.

ಗೆಸ್ಟ್ ಅಲ್ಲ, ಫ್ಯಾಮಿಲಿ ಮೆಂಬರ್: ಟಿಕೆಟ್ ಖರೀದಿಸಿ ಮದುವೆಯಲ್ಲಿ ಭಾಗವಹಿಸಲು ಬರುವ ಪ್ರವಾಸಿಗರನ್ನು ವಧು-ವರರ ಕುಟುಂಬದವರು ಅತಿಥಿಯಂತಲ್ಲ,ಬದಲಿಗೆ ಕುಟುಂಬ ಸದಸ್ಯರಂತೆ ಪರಿಗಣಿಸುತ್ತಾರೆ. ಪ್ರವಾಸಿಗರು ಖರೀದಿಸುವ ಟಿಕೆಟ್ ಮದುವೆಗೆ ಮಾತ್ರವಲ್ಲ,ಮೆಹಂದಿಯಿಂದ ಹಿಡಿದು ಮದುವೆಗೆ ಸಂಬಂಧಿಸಿದ ಎಲ್ಲ ಕಾರ್ಯಕ್ರಮಗಳಿಗೂ ಎಂಟ್ರಿ ಪಾಸ್ ಆಗಿದೆ.ಅವರು ವಧು ಹಾಗೂ ವರ ಇಬ್ಬರ ಕುಟುಂಬದಲ್ಲಿ ನಡೆಯುವ ಸಂಪ್ರದಾಯಗಳಲ್ಲಿ ಪಾಲ್ಗೊಳ್ಳಬಹುದು, ಇಲ್ಲವೆ ಇಬ್ಬರಲ್ಲಿ ಒಬ್ಬರ ಕಡೆಯವರಾಗಿ ಮದುವೆ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು.

ಅರಸಿಕ ಪತಿದೇವನ ರೊಮ್ಯಾಂಟಿಕ್ ಪತ್ರ!

ವೆಡ್ಡಿಂಗ್ ಟೂರಿಸ್‍ಂಗೆ ಭಾರತ ಬೆಸ್ಟ್ ಪ್ಲೇಸ್: ಭಾರತದ ಮದುವೆಗಳು ವಿಶ್ವ ವಿಖ್ಯಾತಿ ಗಳಿಸಿವೆ.ಇದೇ ಕಾರಣಕ್ಕೆ ಭಾರತೀಯ ವಿವಾಹಗಳಿಗೆ ಹೆಚ್ಚಿನ ಒತ್ತು ನೀಡಿದ್ದೇವೆ ಎನ್ನುತ್ತಾರೆ JoinMyWedding.com ಸಹಸಂಸ್ಥಾಪಕಿ ಒರ್ಸಿ ಪರ್ಕನಿ. ಈ ಸ್ಟಾರ್ಟ್‍ಅಪ್ ಮುಖಾಂತರ ಈ ತನಕ ಭಾರತದಲ್ಲಿ ಪ್ರವಾಸಿಗರು ನೂರಕ್ಕಿಂತಲೂ ಹೆಚ್ಚು ಮದುವೆಗಳಲ್ಲಿ ಪಾಲ್ಗೊಂಡಿದ್ದಾರೆ.ಭಾರತದಲ್ಲಿ ಪ್ರತಿವರ್ಷ ಸಾವಿರಾರು ಮದುವೆಗಳು ನಡೆಯುತ್ತವೆ ಮತ್ತು ಮದುವೆಗಿಂತ ಸಾಂಸ್ಕøತಿಕವಾದ ಸಂಗತಿ ಇನ್ನೊಂದಿಲ್ಲ. ಸ್ಥಳೀಯ ಜನರು, ಸ್ಥಳೀಯ ಆಹಾರ, ಸಂಪ್ರದಾಯ, ಉಡುಗೆ, ಸಂಗೀತ ಎಲ್ಲವೂ ಅಲ್ಲಿರುತ್ತದೆ.ಹೀಗಾಗಿ ವೆಡ್ಡಿಂಗ್ ಟೂರಿಸ್‍ಂಗೆ ಭಾರತ ಹೇಳಿ ಮಾಡಿಸಿದ ತಾಣ. ಆರೋಗ್ಯ ಕ್ಷೇತ್ರದಲ್ಲಿ ಹೇಗೆ ವೈದ್ಯಕೀಯ ಪ್ರವಾಸೋದ್ಯಮ ಸದ್ದು ಮಾಡುತ್ತಿದೆಯೋ ಹಾಗೆಯೇ ವಿವಾಹ ಪ್ರವಾಸೋದ್ಯಮಕ್ಕೆ ಭಾರತದಲ್ಲಿ ಉತ್ತಮ ಅವಕಾಶಗಳಿವೆ ಎನ್ನುತ್ತಾರೆ ತಜ್ಞರು. ಗ್ರ್ಯಾಂಡಾಗಿ ಸೆಲೆಬ್ರಿಟಿಗಳ ಸ್ಟೈಲ್‍ನಲ್ಲಿ ಮದುವೆ ಆಗಬೇಕೆಂಬುದು ನಿಮ್ಮ ಕನಸಾಗಿದ್ದರೆ, ಅದಕ್ಕೆ ವಿದೇಶಿ ಪ್ರವಾಸಿಗರು ಮತ್ತಷ್ಟು ಮೆರುಗು ನೀಡಬಲ್ಲರು. 

Follow Us:
Download App:
  • android
  • ios