ಒಳ್ಳೇ ಕೆಲ್ಸ ಬೇಕಾ? ಫೇಸ್‌ಬುಕ್‌ನಲ್ಲಿ ಬಾಯಿಗೆ ಬಂದ ಹಾಗೆ ಬರೀಬೇಡಿ!

ಕಂಪನಿಗಳು ತಮ್ಮಲ್ಲಿ ಉದ್ಯೋಗ ಅಪೇಕ್ಷಿಸುವವರ ಬಯೋಡೇಟಾ ಜೊತೆಗೆ, ಅವರ ಜಾತಕ ತಿಳಿಯಲು ಸೋಶಿಯಲ್ ಸೈಟ್ಸ್ ಮೊರೆ ಹೋಗುತ್ತಿದ್ದಾರೆ. ಯುವಜನಾಂಗ  ಫೇಸ್‌ಬುಕ್, ಇನ್‌ಸ್ಟಗ್ರಾಮ್, ಟ್ವಿಟ್ಟರ್‌ಗಳಲ್ಲಿ ಹೆಚ್ಚು ಹೆಚ್ಚು ಎಕ್ಸ್‌ಪ್ರೆಸ್ಸಿವ್ ಆಗುತ್ತಿರುವುದು ಅದಕ್ಕೆ ಕಾರಣ.

If you want good job dont write extremely in Facebook

ಚೇತನ್ ಕಳೆದ ವಾರ ಬೆಂಗಳೂರಿನ ಮಲ್ಟಿನ್ಯಾಷನಲ್ ಕಂಪನಿಯ ಇಂಟರ್‌ವ್ಯೂಗೆ ಹೋಗಿದ್ದ. ಸಪ್ಪೆ ಮುಖ ಹೊತ್ತು ಹಿಂದಿರುಗಿದ ಅವನನ್ನು ವಿಚಾರಿಸಿದಾಗ ತಿಳಿದದ್ದು ಇಷ್ಟು. ಇಂಟರ್‌ವ್ಯೂ ಮಾಡುವವರು ಅವನ ಮುಂದೆ, ಅವನೇ ತಿಂಗಳ ಹಿಂದೆ ಫೇಸ್‌ಬುಕ್‌ನಲ್ಲಿ ಹಾಕಿದ್ದ ಒಂದು ಫೋಟೋವನ್ನು ಹಿಡಿದರಂತೆ. ಇದರರ್ಥ ಏನು ಅಂತ ಕೇಳಿದರಂತೆ. ರಾಜಕೀಯ ಪಕ್ಷದ ನಾಯಕನೊಬ್ಬನನ್ನು ಗೇಲಿ ಮಾಡಿದ ಮೀಮ್ ಅದರಲ್ಲಿತ್ತು. ಚೇತನ್ ಉತ್ತರಿಸಲಾಗದೆ ಜೋಲು ಮೋರೆ ಹಾಕಿದ್ದಾನೆ. ಅವಕಾಶ ಕಳೆದುಕೊಂಡ ಎಂದು ಬೇರೆ ಹೇಳಬೇಕಿಲ್ಲ.

ಉದ್ಯೋಗದಲ್ಲಿ ಹೊಸ ಸವಾಲಿಗೆ ‘ಎಸ್’ ಎನ್ನಲೇಕೆ ಹಿಂಜರಿಕೆ?

ಕಂಪನಿಗಳು ತಮ್ಮಲ್ಲಿ ಉದ್ಯೋಗ ಅಪೇಕ್ಷಿಸುವವರ ಬಯೋಡೇಟಾ ಜೊತೆಗೆ, ಅವರ ಜಾತಕ ತಿಳಿಯಲು ಸೋಶಿಯಲ್ ಸೈಟ್ಸ್ ಮೊರೆ ಹೋಗುತ್ತಿದ್ದಾರೆ. ಯುವಜನಾಂಗ  ಫೇಸ್‌ಬುಕ್, ಇನ್‌ಸ್ಟಗ್ರಾಮ್, ಟ್ವಿಟ್ಟರ್‌ಗಳಲ್ಲಿ ಹೆಚ್ಚು ಹೆಚ್ಚು ಎಕ್ಸ್‌ಪ್ರೆಸ್ಸಿವ್ ಆಗುತ್ತಿರುವುದು ಅದಕ್ಕೆ ಕಾರಣ. ಅವುಗಳನ್ನು ನೋಡಿದರೆ ವ್ಯಕ್ತಿಯ ಗುಣ ಸ್ವಭಾವ ನೀತಿ ನಿಲುವುಗಳನ್ನು ಸುಲಭವಾಗಿಯೇ ಪತ್ತೆ ಹಚ್ಚಬಹುದು. ಅತಿ ಎನಿಸುವ ಸಾಮಾಜಿಕ, ರಾಜಕೀಯ ನಿಲುವು ಹೊಂದಿರುವ, ತಂಟೆ ಮಾಡುವ, ಕುಡುಕರನ್ನು ಯಾರೂ ತಮ್ಮ ಕೆಲಸ ಮಾಡೆಂದು ಕರೆಯುವುದಿಲ್ಲ. ಕಂಪನಿಗಳು ದೂರವಿಡುವ ನಮೂನೆ ಜನ ಹೀಗಿರ್ತಾರಂತೆ:

1. ಸಿಕ್ಕಾಪಟ್ಟೆ ಕುಡೀತೀನಿ, ನಾನು ಆಲ್ಕೋಹಾಲ್ ಅಡಿಕ್ಟು ಅಂತ ಹಾಕಿಕೊಳ್ಳುವವರು. ನೀವು ಪ್ರಾಮಾಣಿಕವಾಗೇ ಅದನ್ನು ಬರೆದಿರಬಹುದು. ಆದರೆ ಕುಡುಕರ ತರ್ಲೆಗಳು ಕಂಪನಿಗೆ ಇಷ್ಟವಾಗುವುದಿಲ್ಲ.

2. ಎಕ್ಸ್‌ಟ್ರೀಮ್ ಅನ್ನಿಸುವ ರಾಜಕೀಯ ನಿಲುವು ಹೊಂದಿರೋರು. ಯಾವುದೋ ಒಂದು ಪಕ್ಷವನ್ನು, ಒಬ್ಬ ನಾಯಕನನ್ನು ಸದಾ ಕಾಲ ಕೆಟ್ಟ ಭಾಷೆಯಲ್ಲಿ ಟೀಕಿಸ್ತಾ ಇರುವವರು.

3. ತನ್ನ ಭಾಷೆಯನ್ನು ಹೊಗಳುವುದು ಪರವಾಗಿಲ್ಲ. ಆದರೆ ಬೇರೆ ರಾಜ್ಯದಿಂದ ಬರುವ ಉದ್ಯೋಗಿಗಳೆಲ್ಲ ನಮ್ಮ ಅನ್ನ ಕಸಿಯುವುದಕ್ಕಾಗಿಯೇ ಬರ್ತಿದಾರೆ ಅಂತ ಟೀಕಿಸುವುದು ಅಪಾಯ. ಈತ ಬೇರೆ ರಾಜ್ಯದ ಉದ್ಯೋಗಿಗಳ ಜೊತೆ ಹೊಂದಿಕೊಳ್ಳಲಾರ ಎಂಬ ಸಂದೇಶವನ್ನು ಇದು ರವಾನಿಸುತ್ತೆ.

4. ತನ್ನ ವಿರುದ್ಧ ನಿಲುವು ಹೊಂದಿರುವವರನ್ನು ಕೆಟ್ಟದಾಗಿ ಟೀಕಿಸಿ, ವೈಯಕ್ತಿಕ ನಿಂದನೆ ಮಾಡುವವನು. 

5. ಈಗ ತಾನಿರುವ ಕಚೇರಿ, ತನ್ನ ಸಹೋದ್ಯೋಗಿಗಳನ್ನು ಟೀಕಿಸುವವನು. ವ್ಯಕ್ತಿಯ ಹೊಂದಾಣಿಕೆಯ ಕೊರತೆಯನ್ನು ಇದು ತೋರಿಸುತ್ತದೆ. ಟೀಮ್‌ವರ್ಕ್‌ನಲ್ಲಿ ಆತನ ಅಸಾಮರ್ಥ್ಯ ಗೊತ್ತಾಗುತ್ತದೆ.

6. ಇನ್ನೊಂದು ಕೋಮು, ಧಾರ್ಮಿಕ ಸಮುದಾಯದವರನ್ನು ಹುಚ್ಚುಚ್ಚಾಗಿ ಟೀಕಿಸುವುದು, ಅವಹೇಳನ ಮಾಡುವುದು ಆ ವ್ಯಕ್ತಿಯ ಸೋಶಿಯಲ್ ಲೈಫ್ ಚೆನ್ನಾಗಿಲ್ಲ ಎಂಬುದರ ನಿದರ್ಶನ. ಅಂಥವರನ್ನು ಕಂಪೆನಿಗಳು ಎಂಟರ್‌ಟೇನ್ ಮಾಡಲ್ಲ.

7. ದಿನಕ್ಕೆ ಎರಡು, ಮೂರು, ನಾಲ್ಕಾರು ಬಾರಿ ಪೋಸ್ಟ್ ಹಾಕುವವನು. ಸದಾ ಫೇಸ್‌ಬುಕ್‌ನಲ್ಲೇ ಇದ್ದರೆ ಕಚೇರಿ ಕೆಲಸ ಯಾವಾಗ ಮಾಡ್ತೀರಿ ಅಂತ ಅವರಿಗೆ ಅನುಮಾನ ಬರೋದು ಸಹಜ ತಾನೆ?

 

ಗೆಳತಿಯರು ಬೆನ್ನಿಗಿದ್ರೆ ಉದ್ಯೋಗಸ್ಥೆ ಮಹಿಳೆಗೆ ಆನೆಬಲ

 

ಎಂಥವರನ್ನು ಆರಿಸುತ್ತವೆ?

 

1. ಇನ್ನೊಬ್ಬರನ್ನು ಪ್ರೋತ್ಸಾಹಿಸುವ ಮಾತುಗಳನ್ನು ಆಡುವವರು. ಕಚೇರಿಯ ತಮ್ಮ ಸಹೋದ್ಯೋಗಿಗಳ ಕೆಲಸವನ್ನು ಶ್ಲಾಘಿಸುವವರು. ಸಾಧನೆಯನ್ನು ಹಿತವಾಗಿ ಸಂಭ್ರಮಿಸುವವರು.

2. ಸುತ್ತಲಿನ ಸೋಶಿಯಲ್ ಲೈಫ್ ಉತ್ತಮಪಡಿಸಲು ಹೊಸ ಐಡಿಯಾಗಳನ್ನು ಹಂಚಿಕೊಳ್ಳುವವರು.

3. ಅತಿಯಾದ ಫ್ಯಾನ್ ಫಾಲೋಯಿಂಗ್ ಹೊಂದಿಲ್ಲದವರು. (ಹೌದು. ತುಂಬ ಜನಪ್ರಿಯರು ತಮಗೆ ಕಾಂಪಿಟಿಟರ್ ಎಂದೇ ಮೇಲಿನವರು ಭಾವಿಸುವ ಸಾಧ್ಯತೆ ಹೆಚ್ಚು.)

4. ರಾಜಕೀಯ ಚಿಂತನೆ ಹೊಂದಿಲ್ಲದೇ ಇದ್ದರೂ ಪರವಾಗಿಲ್ಲ; ತನ್ನ ಉದ್ಯೋಗದ ವಿಚಾರದಲ್ಲಿ ಸಾಕಷ್ಟು ತಿಳುವಳಿಕೆ, ಪರಿಣತಿ ಹೊಂದಿದ್ದೇನೆ ಎಂದು ಕಾಣಿಸುವವನು.

Latest Videos
Follow Us:
Download App:
  • android
  • ios