ಆಫೀಸ್ ಪಾಲಿಟಿಕ್ಸ್‌ನಿಂದ ಬೇಸತ್ತಿದ್ದೀರಾ? ಹಾಗಿದ್ರೆ ಇದನ್ನೊಮ್ಮೆ ಓದಿ
ಕೆಲವೊಮ್ಮೆ ಆಫೀಸ್ ಪಾಲಿಟಿಕ್ಸ್ ನೆಮ್ಮದಿಯನ್ನೇ ಕಸಿದುಬಿಡುತ್ತೆ. ಅದರಿಂದ ತಪ್ಪಿಸಿಕೊಳ್ಳೋದು ಹೇಗೆ ಎಂಬುದೇ ದೊಡ್ಡ ಸವಾಲಾಗಿ ಕಾಡುತ್ತೆ. ಆದ್ರೆ ಕೆಲವೊಂದು ಎಚ್ಚರಿಕೆ ಕ್ರಮಗಳನ್ನು ಅನುಸರಿಸಿದ್ರೆ ಇಂಥ ಪಾಲಿಟಿಕ್ಸ್ಗೆ ಆಹಾರವಾಗೋದನ್ನು ತಪ್ಪಿಸಬಹುದು.
ಆಫೀಸ್ ಎಂದ ಮೇಲೆ ಅಲ್ಲೊಂದಿಷ್ಟು ಪಾಲಿಟಿಕ್ಸ್ ಇಲ್ಲವೆಂದ್ರೆ ಹೇಗೆ? ನಿಮಗೆ ಆಫೀಸ್‍ಗೆ ಹೋಗೋದು, ಅಲ್ಲಿನ ಕೆಲಸ, ತಿಂಗಳ ಕೊನೆಯಲ್ಲಿ ಕೈಗೆ ಬರುವ ಸಂಬಳ ಇಷ್ಟವೆಂದ ಮೇಲೆ ಅಲ್ಲಿನ ಪಾಲಿಟಿಕ್ಸ್ ಬಗ್ಗೆ ಹೆಚ್ಚು ತಲೆಕೆಡಿಸಿ
ಕೊಳ್ಳಬೇಕಾದ ಅಗತ್ಯವೇನೂ ಇಲ್ಲ. ಆದ್ರೆ ಆ ಪಾಲಿಟಿಕ್ಸ್ ಹ್ಯಾಂಡಲ್ ಮಾಡೋದು ಹೇಗೆ ಎಂಬುದನ್ನು ಕಲಿತುಕೊಂಡ್ರೆ ಪದೇಪದೆ ಮನಸ್ಸು ಕೆಡಿಸಿಕೊಳ್ಳಬೇಕಾದ ಅಗತ್ಯವಿರಲ್ಲ.
ಪ್ರಾರಂಭದಲ್ಲಿ ಎಲ್ಲವೂ ಸೂಪರ್
ಕೆಲಸಕ್ಕೆ ಸೇರಿದ ಪ್ರಾರಂಭದಲ್ಲಿ ಎಲ್ಲವೂ ಚೆನ್ನಾಗಿರುತ್ತೆ. ಹೊಸ ಆಫೀಸ್, ಹೊಸ ಜವಾಬ್ದಾರಿ, ಹೊಸ ಸಹೋದ್ಯೋಗಿಗಳು...ಎಲ್ಲವೂ ಸೂಪರ್. ಆದ್ರೆ 6 ತಿಂಗಳು ಇಲ್ಲವೆ ವರ್ಷ ಕಳೆದ ಮೇಲೆ ಆಫೀಸ್‍ನಲ್ಲಿ ಕೆಲಸ ಮಾಡುವ ಕಾಣದ ಕೈಗಳು, ಬಾಯಿಗಳ ಬಗ್ಗೆ ಸ್ವಲ್ಪಸ್ವಲ್ಪವೇ ಪರಿಚಯವಾಗುತ್ತ ಹೋಗುತ್ತೆ. ಕೆಲವರು ತಮ್ಮ ಅನುಭವ, ಆತ್ಮವಿಶ್ವಾಸ ಹಾಗೂ ಕೌಶಲದ ಮೂಲಕ ಆಫೀಸ್ ಪಾಲಿಟಿಕ್ಸ್ ಸಮರ್ಪಕವಾಗಿ ಹ್ಯಾಂಡಲ್ ಮಾಡುತ್ತಾರೆ. ಇನ್ನೂ ಕೆಲವರು ಈ ಬಗ್ಗೆ ತಲೆಕೆಡಿಸಿಕೊಳ್ಳೋಕೆ ಹೋಗಲ್ಲ. ತಮ್ಮ ಕೆಲಸವೆಷ್ಟು ಅಷ್ಟೇ ಮಾಡಿ ಮತ್ತೇನೂ ಗೊತ್ತಿಲ್ಲ ಎಂಬ ಜಾಣಕುರುಡು ಪ್ರದರ್ಶಿಸಿ ಸುಮ್ಮನಿದ್ದು ಬಿಡುತ್ತಾರೆ. ಆದ್ರೆ ಆತ್ಮವಿಶ್ವಾಸ ಹಾಗೂ ಅನುಭವ ಕಡಿಮೆಯಿರುವವರು ಈ ಪಾಲಿಟಿಕ್ಸ್‍ನ ಸಂತ್ರಸ್ಥರಾಗುತ್ತಾರೆ. ಕೆಲವರಂತೂ ಇದೇ ಕಾರಣಕ್ಕೆ ಕೆಲಸಕ್ಕೆ ರಾಜೀನಾಮೆ ನೀಡುವ ನಿರ್ಧಾರಕ್ಕೂ ಬರುತ್ತಾರೆ. ಆದ್ರೆ ಇಂಥ ಪಾಲಿಟಿಕ್ಸ್ ಎಲ್ಲ ಕಡೆಯೂ ಇರುತ್ತೆ. ಈ ಕಾರಣವನ್ನೇ ಮುಂದಿಟ್ಟುಕೊಂಡು ಉದ್ಯೋಗ ತ್ಯಜಿಸುವ ಬದಲು ಅದನ್ನು ಹೇಗೆ ಮ್ಯಾನೇಜ್ ಮಾಡೋದು ಎಂಬುದನ್ನು ಕಲಿಯೋದು ಜಾಣತನ.
ಇಂಡಿಯಾದಲ್ಲಿ ವರ್ಕ್ ಆಗತ್ತಾ ವರ್ಕ್ ಫ್ರಂ ಹೋಂ?
ಐಡಿಯಾ, ಶ್ರಮ ಮಿಸ್‍ಯೂಸ್ ಆಗದಿರಲಿ
ಕೆಲಸದ ಸ್ಥಳದಲ್ಲಿ ನಿಮ್ಮ ಐಡಿಯಾಗಳನ್ನು ಬೇರೆಯವರ ಮುಂದೆ ಹೇಳಿಕೊಳ್ಳುವ ಅಭ್ಯಾಸ ನಿಮಗಿದ್ರೆ ತೊಂದ್ರೆ ಗ್ಯಾರಂಟಿ. ಬಾಸ್ ನನ್ನನ್ನು ಹೊಗಳಬೇಕು, ನಾನೇ ಬೆಸ್ಟ್ ಎಂಪ್ಲಾಯಿ ಅನಿಸಿಕೊಳ್ಳಬೇಕು ಎಂಬ ಬಯಕೆ ಎಲ್ಲರಿಗೂ ಇರುತ್ತೆ. ಇದೇ ಕಾರಣಕ್ಕೆ ಆಫೀಸ್‍ನಲ್ಲಿ ಸಹೋದ್ಯೋಗಿಗಳ ಮಧ್ಯೆ ಒಂದು ಸ್ಪರ್ಧೆಯಂತೂ ಇದ್ದೇಇರುತ್ತೆ. ಈ ಸ್ಪರ್ಧೆಯಲ್ಲಿ ಮುಂದಿರುವವರಿಗೆ ಮಾತ್ರ ಬಡ್ತಿ, ವೇತನ ಹೆಚ್ಚಳದ ಲಾಭ ಸಿಗೋದು. ಇದೇ ಕಾರಣಕ್ಕೆ ಕೆಲವರು ಇನ್ನೊಬ್ಬರ ಐಡಿಯಾಗಳನ್ನು ತಮ್ಮದೆಂದು ಬಿಂಬಿಸಿಕೊಳ್ಳುವ ಮೂಲಕ ಕ್ರೆಡಿಟ್ ಗಳಿಸಲು ಪ್ರಯತ್ನಿಸುತ್ತಾರೆ. ಇನ್ನು ನೀವು ಸಂಕೋಚ ಹಾಗೂ ಮೃದು ಸ್ವಭಾವದವರಾಗಿದ್ರೆ ನೀವು ಮಾಡಿದ ಕೆಲಸಗಳಿಗೂ ಅವರ ಹೆಸರನ್ನು ತಳುಕು ಹಾಕಿ ಕ್ರೆಡಿಟ್ ಪಡೆಯುತ್ತಾರೆ. ಹೀಗಾಗಿ ನಿಮ್ಮ ಯೋಚನೆಗಳನ್ನು ಇನ್ನೊಬ್ಬರು ಕದಿಯದ್ದಂತೆ ಎಚ್ಚರ ವಹಿಸಿ.
ಸೂಪರ್‍ವೈಸರ್ ಬಾಸಿಸ್‍ಂ ಬಗ್ಗೆ ಎಚ್ಚರ
ಉದ್ಯೋಗಿಗಳ ಮೇಲ್ವಿಚಾರಣೆಗಾಗಿ ಒಬ್ಬರು ಸೂಪರ್‍ವೈಸರ್ ಇರುತ್ತಾರೆ. ಹಾಗಂದ ಮಾತ್ರಕ್ಕೆ ಅವರು ನಿಮ್ಮನ್ನು ಮನಸ್ಸಿಗೆ ಬಂದಂತೆ ಬಳಸಿಕೊಳ್ಳಬಹುದು ಎಂದು ಭಾವಿಸಬೇಕಾಗಿಲ್ಲ. ನಿಮಗೆ ಕೆಲಸ ಹಂಚಿಕೆ ಮಾಡೋದು ಹಾಗೂ ಅದನ್ನು ನೀವು ಸಮರ್ಪಕವಾಗಿ ನಿಭಾಯಿಸುತ್ತೀರೋ ಇಲ್ಲವೋ ಎಂಬುದನ್ನು ಪರಿಶೀಲಿಸೋದಷ್ಟೆ ಅವರ ಕಾರ್ಯ. ಆದಕಾರಣ ಸೂಪರ್‍ವೈಸರ್ ನಿಮ್ಮ ಮೇಲೆ ವಿನಾಕಾರಣ ದರ್ಪ ತೋರಿದ್ರೆ ಅದನ್ನು ಸಹಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಇಂಥ ಸಂದರ್ಭಗಳಲ್ಲಿ ನೀವು ಸಹನೆ ತೋರಿದ್ರೆ ಅವರು ನಿಮ್ಮನ್ನು ಇನ್ನಷ್ಟು ಆಟವಾಡಿಸುವ ಸಾಧ್ಯತೆ ಇರುತ್ತದೆ. ಸೀನಿಯರ್ಸ್‍ಗೆ ಗೌರವ ತೋರಬೇಕು ನಿಜ, ಆದ್ರೆ ನಿಮ್ಮ ಮೇಲೆ ದೌರ್ಜನ್ಯವೆಸಗುತ್ತಿದ್ದರೂ ಸುಮ್ಮನಿದ್ದರೆ ಅದು ನಿಮ್ಮ ದೌರ್ಬಲ್ಯವಾಗುತ್ತೆ.
ಆಫೀಸ್ ಟೆನ್ಷನ್‍ಗೆ ದಾಂಪತ್ಯ ಬ್ರೇಕ್ ಅಪ್ ಆದೀತು, ಜೋಪಾನ!
ಪ್ರಮುಖ ಸಭೆ, ಕಾರ್ಯಕ್ರಮಗಳನ್ನು ತಪ್ಪಿಸೋದು
ಆಫೀಸ್‍ನಲ್ಲಿ ಮುಖ್ಯವಾದ ಮೀಟಿಂಗ್, ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶವನ್ನು ನಿಮ್ಮ ಸಹೋದ್ಯೋಗಿ ತಪ್ಪಿಸುತ್ತಿದ್ದಾರೆ ಅಂದ್ರೆ ಅವರು ನಿಮಗೆ ಪ್ರಬಲ ಪೈಪೋಟಿಯಾಗಿದ್ದಾರೆ ಎಂದೇ ಅರ್ಥ. ಒಂದು ಸಂಸ್ಥೆಯಲ್ಲಿ ನಿಮ್ಮ ಸ್ಥಾನವನ್ನು ಸುಭದ್ರಗೊಳಿಸುವಲ್ಲಿ ನಿಮ್ಮ ಅಭಿಪ್ರಾಯಗಳು ಹಾಗೂ ಐಡಿಯಾಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಹೀಗಾಗಿ ಪ್ರಮುಖ ಸಭೆಗಳು ಅಥವಾ ಕಾರ್ಯಕ್ರಮಗಳಿಂದ ಹೊರಗಿಟ್ಟರೆ ನಿಮಗೆ ನಿಮ್ಮ ಪ್ರತಿಭೆ ಹಾಗೂ ಕೌಶಲಗಳನ್ನು ತೋರ್ಪಡಿಸುವ ಅವಕಾಶ ಸಿಗೋದಿಲ್ಲ. ಇದನ್ನೇ ನಿಮ್ಮ ಪ್ರತಿಸ್ಪರ್ಧಿ ಕೂಡ ಬಯಸೋದು.
ಕುತಂತ್ರಕ್ಕೆ ಬಲಿಯಾಗಬೇಡಿ
ಕೆಲವರು ಆಫೀಸ್‍ನಲ್ಲಿ ಸುಳ್ಳು ಮಾಹಿತಿಗಳನ್ನು ನೀಡುವ ಮೂಲಕ ನಿಮ್ಮ ದಿಕ್ಕು ತಪ್ಪಿಸಬಹುದು. ಇಂಥ ವ್ಯಕ್ತಿಗಳ ಬಗ್ಗೆ ಎಚ್ಚರದಿಂದಿರಿ. ಇಂಥವರು ನಿಮಗೆ ಸುಳ್ಳು ಸುಳ್ಳೇ ಹೇಳಿ ಅದನ್ನೇ ಸತ್ಯವೆಂದು ನಂಬುವಂತೆ ಮಾಡುತ್ತಾರೆ. ಇದರಿಂದ ನೀವು ಅನೇಕ ಅವಕಾಶಗಳಿಂದ ವಂಚಿತರಾಗಬೇಕಾಗಿ ಬರಬಹುದು. ಆಫೀಸ್‍ನಲ್ಲಿ ಎಲ್ಲರೊಂದಿಗೂ ಉತ್ತಮ ಸಂಬಂಧ ಹೊಂದಿರೋದು ಒಳ್ಳೆಯದೇ. ಆದ್ರೆ ಇನ್ನೊಬ್ಬರನ್ನು ಅತಿಯಾಗಿ ಅವಲಂಬಿಸೋದು ನಿಮ್ಮ ವೃತ್ತಿ ಬದುಕಿಗೆ ಆರೋಗ್ಯಕರವಲ್ಲ.
ನಿದ್ರೆ ಕೊರತೆ ನಿಮ್ಮ ಕರಿಯರ್‌ಗೆ ಎರವಾಗುತ್ತದೆ, ಜೋಕೆ!
ಅನಗತ್ಯ ಮಾತುಕತೆ ಬೇಡ
ಆಫೀಸ್‍ನಲ್ಲಿ ಅನಗತ್ಯವಾಗಿ ಇನ್ನೊಬ್ಬರೊಂದಿಗೆ ಮಾತನಾಡೋದು, ಚರ್ಚೆ ಮಾಡೋದು ಬೇಡ. ಎಲ್ಲರೊಂದಿಗೂ ಮಾತನಾಡಿ ಆದ್ರೆ ಆಫೀಸ್‍ಗೆ ಸಂಬಂಧಿಸದ ಅಥವಾ ಆ ಪರಿಸ್ಥಿತಿಗೆ ಸರಿಹೊಂದದ ಮಾತುಗಳು ಬೇಡವೇ ಬೇಡ. ನೀವು ಚರ್ಚಿಸುವ ವಿಷಯ ನಿಮಗೇ ತಿರುಗುಬಾಣವಾಗುವ ಹೆಚ್ಚಿನ ಸಾಧ್ಯತೆಗಳಿರುತ್ತವೆ. ಇದು ತೊಂದರೆ ಜೊತೆಗೆ ನಿಮ್ಮ ಬಗ್ಗೆ ತಪ್ಪು ಕಲ್ಪನೆ ಮೂಡುವಂತೆಯೂ ಮಾಡಬಲ್ಲದು. ಆಫೀಸ್‍ನಲ್ಲಿ ಜನರನ್ನು ನಂಬೋದು ಸದಾ ಕಷ್ಟದ ಕೆಲಸ. ನಿಮ್ಮ ಮಾತು ಯಾವಾಗ ನಿಮಗೇ ತಿರುಗುಬಾಣವಾಗುತ್ತೆ ಎಂಬುದೇ ತಿಳಿಯೋದಿಲ್ಲ.