ಲಖಿಂಪುರ್ ಖೇರಿ (ಯುಪಿ), (ಸೆ.06): ಉತ್ತರ ಪ್ರದೇಶದ ಈ ಜಿಲ್ಲೆಯ ಪಾಲಿಯಾ ಪ್ರದೇಶದಲ್ಲಿ ಭಾನುವಾರ ವಿವಾದಿತ ಜಮೀನೊಂದರಲ್ಲಿ ನಡೆದ ಘರ್ಷಣೆಯಲ್ಲಿ ಮಾಜಿ ಶಾಸಕರೊಬ್ಬರು ಸಾವನ್ನಪ್ಪಿದ್ದಾರೆ.

ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ 75 ವರ್ಷದ ನರ್ವೇಂದ್ರ ಕುಮಾರ್ ಮಿಶ್ರಾ ಘರ್ಷಣೆಯಲ್ಲಿ ಸಾವನ್ನಪ್ಪಿದ್ದರೆ, ಅವರ ಪುತ್ರ ತೀವ್ರವಾಗಿ ಗಾಯಗೊಂಡಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಸಾವು-ಬದುಕಿನೊಂದಿಗೆ ಹೋರಾಡುತ್ತಿದ್ದಾರೆ.

ಮಾಜಿ ಶಾಸಕರ ಪುತ್ರ ಕೊರೋನಾ ಸೋಂಕಿಗೆ ಬಲಿ

ಸಂಪೂರ್ಣಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ತ್ರಿಕೋಲಿಯಾ ಪಧುವಾ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು, ಭೂಮಿಯನ್ನು ಕಬಳಿಸಲು ಕೆಲವರು ಮಾರಕಾಸ್ತ್ರಗಳೊಂದಿಗೆ ಬಂದಿದ್ದಾರೆ.

ಇದನ್ನು ವಿರೋಧಿಸಿದ ಮಾಜಿ ಶಾಸಕ ಮಿಶ್ರಾ, ಅವರ ಪುತ್ರ ಸಂಜೀವ್ ಮಿಶ್ರಾ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.