ಮಹಾರಾಷ್ಟ್ರ(ಮೇ.02): ಉದ್ಧವ್ ಠಾಕ್ರೆಯವರ ಮುಖ್ಯಮಂತ್ರಿ ಸದ್ಯ ಉಳಿದುಕೊಂಡಿದೆ. ಅವರ ಕುರ್ಚಗೆ ಎದುರಾಗಿದ್ದ ಕಂಟಕ ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲಿ ಎನ್‌ಸಿಪಿ ನಾಯಕ ಶರದ್ ಪವಾರ್ ಹಾಗೂ ಬಿಜೆಪಿ ಹಿರಿಯ ನಾಯಕ ಹಾಗೂ ಕೆಮದ್ರ ಸಚಿವ ನಿತಿನ್ ಗಡ್ಕರಿ ಬಹಳ ಮಹತ್ವದ ಪಾತ್ರ ವಹಿಸಿದ್ದಾರೆ. ಇವರಿಬ್ಬರ ಸಲಹೆ ಹಾಗೂ ಸಹಾಯದಿಂದ ಠಾಕ್ರೆ ಬಹುದೊಡ್ಡ ಸಾಂವಿಧಾನಿಕ ಹಾಗೂ ರಾಜಕೀಯ ಸಂಕಟ ಎದುರಿಇಸುವುದರಿಂದ ಬಚಾವಾಗಿದ್ದಾರೆ. 

 ಶರದ್ ಪವರ್ ಬಹಳ ಆತ್ಮೀರಲ್ಲೊಬ್ಬರು ಈ ಸಂಬಂಧ ಪ್ರತಿಕ್ರಿಯಿಸಿದ್ದು, ಪವಾರ್ ತಮ್ಮ ಐವತ್ತು ವರ್ಷಗಳ ಅನುಭವದಿಂದ ರಾಜ್ಯಪಾಲರು ಉದ್ಧವ್ ಠಾಕ್ರೆಯನ್ನು ವಿಧಾನ ಪರಿಷದ್‌ಗೆ ನಾಮ ನಿರ್ದೇಶನ ಮಾಡಲು ಒಪ್ಪುವುದಿಲ್ಲ ಎಂದು ತಿಳಿದಿತ್ತು. ಯಾಕೆಂದರೆ ರಾಜ್ಯಪಾಲರ ಬಳಿ ಇದಕ್ಕೆ ಕಾರಣಗಳಿದ್ದವು. ಅಲ್ಲದೇ ಈ ವಿಚಾರವಾಗಿ ರಾಜ್ಯಪಾಲರಿಗೆ ಒತ್ತಾಯಿಸುವುದು ಕೂಡಾ ಸಾಧ್ಯವಿಲ್ಲ ಎಂದು ಪವಾರ್‌ಗೆ ತಿಳಿದಿತ್ತು. ಹೀಗಿದ್ದರೂ ಮಹಾ ಅಘಾಡಿ ಒಗ್ಗಟ್ಟಿನಿಂದಿದದೆ ಎಂದು ಸಾಬೀತುಪಡಿಸಲು ಹಾಗೂ ಸಂಪೂರ್ಣ ಮಂತ್ರಿಮಂಡಲ ಠಾಕ್ರೆಯೊಂದಿಗಿದೆ ಎಂದು ಸಾಬೀತುಪಡಿಸಲು, ಪವಾರ್‌ ಮಾತಿನನ್ವಯ ಎರಡು ಬಾರಿ ಮಂತ್ರಿಮಂಡಲ ಉದ್ಧವ್‌ರನ್ನು ವಿಧಾನ ಪರಿಷತ್‌ಗೆ ನಾಮ ನಿರ್ದೇಶನ ಪ್ರಸ್ತಾವನೆ ಮಾಡಿದ್ದಲ್ಲದೇ, ಮಂತ್ರಿಗಳನ್ನು ರಾಜಭಾವನಕ್ಕೆ ಕಳುಹಿಸಿ ಈ ಬಗ್ಗೆ ಮನವಿಯನ್ನೂ ಮಾಡಿಸಿದರು. ಮತ್ತೊಂದೆಡೆ ಪವಾರ್ ಉದ್ಧವ್ ಠಾಕ್ರೆ ಜೊತೆ ಸೇರಿ ನಿತಿನ್ ಗಡ್ಕರಿ ಸಂಪರ್ಕದಲ್ಲಿದ್ದರು. ಇಬ್ಬರಿಗೂ ಗಡ್ಕರಿ ಮಾತಿಗೆ ಆರ್‌ಎಸ್‌ಎಸ್‌ ಹಾಗೂ ದೆಹಲಿಯಲ್ಲಿ ಎಷ್ಟು ಪ್ರಭಾವವಿದೆ ಎಂದು ತಿಳಿದಿದೆ ಎಂದು ಹೇಳಿದ್ದಾರೆ.

ಉದ್ಧವ್‌ ಮಾತೇ ಕೇಳೋರಿಲ್ಲ; ಮುಖ್ಯಮಂತ್ರಿ ಹುದ್ದೆ ಕಳೆದುಕೊಳ್ಳುವ ಭೀತಿಯಲ್ಲಿ ಠಾಕ್ರೆ?

ನಿತಿನ್ ಗಡ್ಕರಿ ಪ್ರಶಂಸೆ

26 ಏಪ್ರಿಲ್ ಅಕ್ಷಯ್ ತೃತೀಯದಂದು ಠಾಕ್ರೆ ಸೋಶಿಯಲ್ ಮೀಡಿಯಾದಲ್ಲಿ ನಡೆಸಿದ್ದ ಲೈವ್‌ ಸಂವಾದದಲ್ಲಿ ನಿತಿನ್ ಗಡ್ಕರಿಗೆ ಸಾರ್ವಜನಿಕವಾಗಿ ಧನ್ಯವಾದ ತಿಳಿಸಿದ್ದರು. ಉದ್ದೇಶಪೂರ್ವಕವಾಗಿ ಠಾಕ್ರೆ ಅಂದು ಮರಾಠಿ ಬಿಟ್ಟು ಹಿಂದಿಯಲ್ಲೂ ಮಾತನಾಡಿದರು. ಈ ಮೂಲಕ ಮೋದಿ ಹಾಗೂ ಅಮಿತ್ ಶಾಗೆ ಮಹಾರಾಷ್ಟ್ರದಲ್ಲಿ ಕೆಲ ನಾಯಕರು ಪರಿಸ್ಥಿತಿ ಹದಗೆಡಿಸುವ ಯತ್ನ ನಡೆಸುತ್ತಿದ್ದಾರೆಂಬ ಸಂದೇಶ ನೀಡಿದರು. ಬಳಿಕ ಪವಾರ್ ಹಾಗೂ ಗಡ್ಕರಿ ಸಹಮತಿಯಿಂದ ಪರಿಸ್ಥಿತಿ ಸರಿಹೋಯ್ತು.

ಮಹಾರಾಷ್ಟ್ರದಲ್ಲಿ ಎದುರಾದ ಸಮಸ್ಯೆ ಏನು?

ಮೇ 27ರ ಒಳಗಾಗಿ ಮಹಾರಾಷ್ಟ್ರ ವಿಧಾನಪರಿಷತ್ತಿಗೆ ಚುನಾವಣೆ ನಡೆಸಲು ಚುನಾವಣಾ ಆಯೋಗ ಅನುಮತಿ ನೀಡಿದೆ. ಈ ಮೂಲಕ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರಿಗೆ ವಿಧಾನ ಪರಿಷತ್ತಿಗೆ ಆಯ್ಕೆಯಾಗುವ ಅವಕಾಶ ಒದಗಿಬಂದಿದೆ. 

ಯಾವುದೇ ಶಾಸನ ಸಭೆಯ ಸದಸ್ಯರಲ್ಲದ ಅವರು ಕಳೆದ ವರ್ಷ ನ.28ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಹೀಗಾಗಿ ಮೇ 27ರ ಒಳಗಾಗಿ ಯಾವುದಾದರೊಂದು ಶಾಸನ ಸಭೆಗೆ ಆಯ್ಕೆಯಾಗದಿದ್ದರೆ ಹುದ್ದೆಯಿಂದ ಕೆಳಗಿಳಿಯಬೇಕಾಗಿತ್ತು. ಸದ್ಯ ಆಯೋಗ ಚುನಾವಣೆ ಘೋಷಿಸಿರುವುದರಿಂದ ಠಾಕ್ರೆ ನಿರಾಳರಾಗಿದ್ದಾರೆ. 

ಮೂಲಗಳ ಪ್ರಕಾರ ಮೇ.21ಕ್ಕೆ ಚುನಾವಣೆ ನಡೆಸಲು ಆಯೋಗ ನಿರ್ಧರಿಸಿದ್ದು, ಚುನಾವಣೆ ವೇಳೆ ಕೊರೋನಾ ವಿರುದ್ಧ ಅಗತ್ಯ ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಹೇಳಲಿದೆ.