Asianet Suvarna News Asianet Suvarna News

ಯತ್ನಾಳ್‌ಗೆ ನೋಟಿಸ್: ಪತ್ರದ ಮೂಲಕ ಮೋದಿಗೆ ಶ್ರೀಶೈಲ ಜಗದ್ಗುರು ಪರೋಕ್ಷ ಎಚ್ಚರಿಕೆ

ನೆರೆ ಪರಿಹಾರ ವಿಚಾರಕ್ಕೆ ಸಂಬಂಧಿಸಿದಂತೆ ಸ್ವಪಕ್ಷದ ಸಂಸದರ ವಿರುದ್ಧ ಕಿಡಿಕಾರಿ ಪಕ್ಷದ ಕೆಂಗಣ್ಣಿಗೆ ಗುರಿಯಾಗಿರುವ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಪರ ಶ್ರೀಶೈಲ ಜಗದ್ಗುರು ಬ್ಯಾಟಿಂಗ್ ಮಾಡಿದ್ದಾರೆ. ಯತ್ನಾಳ್ ಬೆಂಬಲಿಸಿ ಶ್ರೀಶೈಲ ಜಗದ್ಗುರುಗಳು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

Srisaila Jagadguru writes Modi over show cause notice to basanagowda patil yatnal
Author
Bengaluru, First Published Oct 13, 2019, 8:59 PM IST

ಬೆಂಗಳೂರು, [ಅ.13]: ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ನೀಡಿರುವ ಶೋಕಾಸ್ ನೋಟಿಸ್ ವಾಪಾಸ್ ಪಡೆಯುವಂತೆ ಶ್ರೀಶೈಲ ಪೀಠದ ಪಂಚಪೀಠಾಧ್ಯಕ್ಷರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ಪರೋಕ್ಷವಾಗಿ ಎಚ್ಚರಿಕೆ ರವಾನಿಸಿದ್ದಾರೆ.

ನೆರೆ ಪರಿಹಾರ ವಿಳಂಬ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಸಂಸದರನ್ನ ತರಾಟೆಗೆ ತೆಗೆದುಕೊಂಡಿದ್ದ ಯತ್ನಾಳ್‌ಗೆ ಕೇಂದ್ರ ಬಿಜೆಪಿ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿತ್ತು. ಈ ಪತ್ರವನ್ನು ವಾಪಸ್ ಪಡೆಯುವಂತೆ  ಶ್ರೀಶೈಲ ಪೀಠದ ಪಂಚಪೀಠಾಧ್ಯಕ್ಷರಾದ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಪತ್ರದ ಮೂಲಕ ಮೋದಿಗೆ ಮನವಿ ಮಾಡಿದ್ದಾರೆ.

ನೆರೆ ಪರಿಹಾರ ಬಿಡುಗಡೆ ಮಾಡಿಸಿ ಎಂದಿದ್ದಕ್ಕೆ ಯತ್ನಾಳ್​ಗೆ ಸಂಕಷ್ಟ

ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಪಕ್ಷದ ವಿರುದ್ಧ ಹಾಗೂ ನಾಯಕರ ವಿರುದ್ಧ ಸುಳ್ಳು ಸುದ್ದಿಯನ್ನು ಹರಡುವ ಮೂಲಕ ಪ್ರಚೋದನಾತ್ಮಕವಾಗಿ ವರ್ತನೆ ಮಾಡಿರುವುದು ಅಶಿಸ್ತು ಎಂದು ಪರಿಗಣಿಸಿದ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಈ ನೋಟಿಸ್ ಜಾರಿಗೊಳಿಸಿತ್ತು. 

ಪಕ್ಷದ ವಿರುದ್ಧ ಹೇಳಿಕೆ ಕೊಡುವ ಮೂಲಕ ಪಕ್ಷದ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿದ್ದೀರಿ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಿ 10 ದಿನಗಳ ಒಳಗಾಗಿ ಇದಕ್ಕೆ ಉತ್ತರ ನೀಡುವಂತೆ ಸೂಚಿಸಲಾಗಿತ್ತು.

ಭೇಷ್ ಪಾಟೀಲರೇ.. ಕೇಂದ್ರ ಸಚಿವರಿಗೆ ಸವಾಲೆಸೆದ ನಿಮ್ಮ ಒಂದೊಂದು ಮಾತು ಸಿಡಿಗುಂಡು

ಸ್ವಾಮೀಜಿ ಪತ್ರದಲ್ಲೇನಿದೆ?
 ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿರುವ ಶ್ರೀಶೈಲ ಪೀಠದ ಪಂಚಪೀಠಾಧ್ಯಕ್ಷರು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉತ್ತಮ ಮುಖಂಡನಾಗಿದ್ದು ಪ್ರವಾಹ ಪರಿಸ್ಥಿತಿಯಿಂದ ಸಂಕಷ್ಟ ಅನುಭವಿಸುತ್ತಿರುವ ರಾಜ್ಯದ ಜನರ ಬಗ್ಗೆ ಧ್ವನಿಎತ್ತಿದ್ದಾರೆ. ಯತ್ನಾಳ್ ನೇರ ವ್ಯಕ್ತಿತ್ವದ ನಾಯಕನಾಗಿದ್ದು ಅನ್ಯ ಉದ್ದೇಶದಿಂದ ಪಕ್ಷದ ವಿರುದ್ಧ ಧ್ವನಿ ಎತ್ತಿಲ್ಲ.

ನೋಟಿಸ್ ಗೆ ಯತ್ನಾಳ್ ಡೋಂಟ್ ಕೇರ್: ಕನ್ನಡಿಗರಿಗಾಗಿ ಧ್ವನಿ ಎತ್ತುತ್ತೇನೆ ಎಂದ ಬಹದ್ದೂರ್ ಗಂಡು

ಈ ಹಿನ್ನೆಲೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ನೋಟಿಸ್ ಜಾರಿಗೊಳಿಸಿರುವುದು ಸರಿಯಾದ ಕ್ರಮವಲ್ಲ. ಇದರಿಂದ ಪಕ್ಷಕ್ಕೆ ಹಾನಿಯಾಗುತ್ತದೆ ಹೊರತು ಯತ್ನಾಳ್ ಅವರಿಗಲ್ಲ ಎಂದು ಹೇಳಿರುವುದು ಪರೋಕ್ಷವಾಗಿ ಎಚ್ಚರಿಕೆ ನೀಡಿದಂತಿದೆ.

ಶ್ರೀಶೈಲ ಪೀಠ ಹಾಗೂ ಪ್ರವಾಹ ಪೀಡಿತ ಪ್ರದೇಶದ ಜನರು ಅವರ ಜತೆಗಿದ್ದಾರೆ. ನೋಟಿಸ್ ವಾಪಾಸ್ ಪಡೆದುಕೊಳ್ಳದೆ ಇದ್ದರೆ ಮುಂದಿನ ದಿನಗಳಲ್ಲಿ ಯತ್ನಾಳ್ ತೆಗೆದುಕೊಳ್ಳುವ ನಿರ್ಧಾರದ ಜತೆಗೆ ನಾವಿದ್ದೇವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕೇಂದ್ರದಿಂದ ಪರಿಹಾರ ಬಂದಿಲ್ಲ: ಸ್ವಪಕ್ಷೀಯ ಸಂಸದನ ವಿರುದ್ಧ ಯತ್ನಾಳ್ ಹಿಗ್ಗಾಮುಗ್ಗಾ ವಾಗ್ದಾಳಿ

ರಾಜ್ಯದ ಜನರು 25 ಬಿಜೆಪಿ ಸಂಸದರನ್ನು ಆಯ್ಕೆ ಮಾಡಿ ಕಳಿಸಿದ್ದಾರೆ. ಇಡೀ ದಕ್ಷಿಣ ಭಾರತದಲ್ಲಿ ಇಷ್ಟು ಸಂಖ್ಯೆಯ ಸಂಸದರು ಎಲ್ಲಿದ್ದಾರೆ ಎಂದು ಪ್ರಶ್ನಿಸಿದ್ದ ಅವರು ಹೀಗೆ ಮಾಡಿದರೆ ಜನರು ತಕ್ಕ ಪಾಠ ಕಲಿಸುತ್ತಾರೆ. ಎಂತೆಂಥವರನ್ನೋ ಜನ ಚುನಾವಣೆಯಲ್ಲಿ ಮನೆಗೆ ಕಳಿಸಿದ್ದಾರೆ. ಹೀಗಿರುವಾಗ ಇವರೆಲ್ಲಾ ಯಾವ ಲೆಕ್ಕ ಅಂತೆಲ್ಲ ಸ್ವಪಕ್ಷದ ನಾಯಕರನ್ನು ಹಿಗ್ಗಾಮುಗ್ಗಾ ಜಾಡಿಸಿದ್ದರು. ಯತ್ನಾಳ್ ಅವರ ಈ ಮಾತುಗಳು ಪಕ್ಷದ ನಾಯಕರಿಗೆ ಇರುಸುಮುರುಸು ಉಂಟು ಮಾಡಿತ್ತು.

Follow Us:
Download App:
  • android
  • ios