Asianet Suvarna News Asianet Suvarna News

ರಾಮನಗರ ಮರು ನಾಮಕರಣ ವಿವಾದಕ್ಕೆ 'ಕೊನೆ ಮೊಳೆ' ಹೊಡೆದ BSY

ರಾಮನಗರದ ಹೆಸರು ಬದಲಾವಣೆ ವಿಚಾರ ಸರ್ಕಾರ ಮತ್ತು ವಿಪಕ್ಷಗಳ ನಡುವೆ ರಾಜಕೀಯ ತಿಕ್ಕಾಟ ಬಿರುಸುಗೊಂಡಿದೆ. ಹೀಗಿರುವಾಗ ಈ ವಿವಾದ ಸಂಬಂಧ ಸಿಎಂ ಯಡಿಯೂರಪ್ಪ ಸ್ಪಷ್ಟನೆ ನೀಡುವ ಮೂಲಕ 'ಕೊನೆ ಮೊಳೆ' ಹೊಡೆದಿದ್ದಾರೆ. ಮಾಧ್ಯಮ ಪ್ರಕಟಣೆ ಮೂಲಕ ಬಿಎಸ್‌ವೈ ಸ್ಪಷ್ಟನೆ ಕೊಟ್ಟಿದ್ದಾರೆ. ಹಾಗಾದ್ರೆ ಮಾಧ್ಯಮ ಪ್ರಕಟಣೆಯಲ್ಲೇನಿದೆ..?

ramanagara renaming False News Yediyurappa clarification In Press release
Author
Bengaluru, First Published Jan 5, 2020, 8:54 PM IST

ಬೆಂಗಳೂರು/ರಾಮನಗರ, [ಜ.5]: ರಾಮನಗರ ಜಿಲ್ಲೆಗೆ ನವ ಬೆಂಗಳೂರು ಎಂದು ಮರುನಾಮಕರಣಕ್ಕೆ ಚಿಂತನೆ ನಡೆದಿದೆಯಂತೆ. ಇಂಥದ್ದೊಂದು ಸುದ್ದಿ ದೊಡ್ಡ ಮಟ್ಟದಲ್ಲೇ ಹರಿದಾಡುತ್ತಿದೆ. 

ಈ ಬಗ್ಗೆ ರಾಜ್ಯ ಸರ್ಕಾರ ಅಧಿಕೃತವಾಗಿ ಹೇಳಿಕೆ ನೀಡದಿದ್ದರೂ, ಹೂಡಿಕೆದಾರರ ಸೆಳೆಯಲು ಇಂಥದ್ದೊಂದು ಯೋಚನೆ ಮಾಡಿದೆ ಅನ್ನೋ ಸುದ್ದಿ ಬಲವಾಗಿ ಕೇಳಿ ಬಂದಿದೆ.  ಯಾವಾಗ ಇಂಥದ್ದೊಂದು ಸುದ್ದಿ ಹೊರ ಬಿತ್ತೋ ಈ ಬಗ್ಗೆ ರಾಜ್ಯ ರಾಜಕೀಯದಲ್ಲಿ ಪರ-ವಿರೋಧದ ಚರ್ಚೆ ತಾರಕಕ್ಕೇರಿದೆ.

'ಶಿವಮೊಗ್ಗ, ದಕ್ಷಿಣ ಕನ್ನಡಕ್ಕೆ ಬೆಂಗಳೂರು ಎಂದು ಹೆಸರಿಡಬಲ್ಲರೇ’?

ಇದರ ಬೆನ್ನಲ್ಲೇ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಮಾಧ್ಯಮ ಪ್ರಕಟಣೆ ಹೊರಡಿಸುವ ಮೂಲಕ ರಾಮನಗರ ಜಿಲ್ಲೆ ಮರು ನಾಮಕರಣ ಸುದ್ದಿ ವಿವಾದಕ್ಕೆ 'ಕೊನೆ ಮೊಳೆ' ಹೊಡೆದ್ದಾರೆ. 

ರಾಮನಗರವನ್ನು ನವ ಬೆಂಗಳೂರು ಬದಲಾವಣೆ ವಿವಾದಕ್ಕೆ ಬಿಗ್ ಟ್ವಿಸ್ಟ್ ಕೊಟ್ಟ ಸಿಎಂ

ಬಿಎಸ್ ವೈ ಮಾಧ್ಯಮ ಪ್ರಕಟಣೆ ಇಂತಿದೆ...
"ರಾಮನಗರ ಜಿಲ್ಲೆ ಮರುನಾಮಕರಣ ಬಗ್ಗೆ ಅನಾವಶ್ಯಕ ಚರ್ಚೆ ನಡೆಯುತ್ತಿದೆ. ಸರಕಾರದ ಮುಂದೆ ಆ ತರಹದ ಯಾವುದೇ ಯೋಚನೆ ಇಲ್ಲ.
 ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರುಗಳು ಯಾವುದೇ ಹುರುಳಿಲ್ಲದ ಚರ್ಚೆಯಲ್ಲಿ ತೊಡಗಿದ್ದಾರೆ. 

ಬಹುಶ: ಆ ಎರಡು ಪಕ್ಷಗಳ ನಾಯಕರುಗಳು ಸುದ್ದಿಯಲ್ಲಿರಲು ಮತ್ತು ಜನರಲ್ಲಿ ಗೊಂದಲ ಸೃಷ್ಟಿಸಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಸರಕಾರದ ಮುಂದೆ ಯಾವುದೇ ಆ ತರಹದ ವಿಷಯವಾಗಲೀ, ಅಥವಾ ಕಾರ್ಯಸೂಚಿಯಾಗಲಿ ಇಲ್ಲವೆಂದು ಸ್ಷಷ್ಠಪಡಿಸುತ್ತೇನೆ. ಶ್ರೀ ರಾಮನ ಬಗ್ಗೆ ನಮಗೆ ಇರುವ ಭಕ್ತಿಯಾಗಲೀ ಅಥವಾ ಅಭಿಮಾನವಾಗಲೀ ಯಾರು ಪ್ರಶ್ನಿಸಲು ಸಾಧ್ಯವಿಲ್ಲ.

ಬಪ್ಪರೇ..! ಬಿಜೆಪಿ ನಾಯಕರಿಗೆ ಸಿದ್ಧಾಂತದ ಅಸ್ತ್ರ ಬೀಸಿದ HDK 

 ನನಗೆ ಆಶ್ಚರ್ಯವೇನೆಂದರೆ ಕಾಂಗ್ರೆಸ್ ನವರಾಗಲೀ ಜೆಡಿಎಸ್ ನವರಿಗಾಗಲೀ ರಾಮನ ಬಗ್ಗೆ ಭಕ್ತಿ ಹುಟ್ಟಿದ್ದು. ಅವರ ಭಕ್ತಿ ನಿಜವಾಗಿದ್ದರೆ ಅದನ್ನು ಸ್ವಾಗತಿಸುತ್ತೇನೆ.
  ಕಾಂಗ್ರೆಸ್, ಜೆಡಿಎಸ್ ನಾಯಕರು ಇಲ್ಲದ ವಿಷಯದ ಬಗ್ಗೆ ಹೋರಾಟ ಮಾಡಲು ಹೊರಟಿರುವುದು ಹಾಸ್ಯಾಸ್ಪದವಾಗಿದೆ." ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದರು.

Follow Us:
Download App:
  • android
  • ios