ಬೆಂಗಳೂರು, (ಅ.18):  ಸಿದ್ದರಾಮಯ್ಯ ಪರಮಾಪ್ತ ಹೆಬ್ಬಾಳ ಕಾಂಗ್ರೆಸ್ ಶಾಸಕ  ಭೈರತಿ ಸುರೇಶ್ ಅವರಿಗೆ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

"

ಹೊಸಕೋಟೆ ಚುನಾವಣೆ ಕಣಕ್ಕೆ ಕಾಂಗ್ರೆಸ್ ಅಭ್ಯರ್ಥಿ ಫಿಕ್ಸ್

ಕೆ ಆರ್ ಪುರಂನ ಭೈರತಿ ಗ್ರಾಮದಲ್ಲಿ ಇಂದು (ಶುಕ್ರವಾರ) ಸುರೇಶ್‌ಗೆ ದುಷ್ಕರ್ಮಿಯೊಬ್ಬ ಚಾಕುವಿನಿಂದ ಚುಚ್ಚಲು ಯತ್ನಿಸಿದ್ದಾನೆ. ಆದ್ರೆ, ಗನ್‌ಮ್ಯಾನ್ ಸಮಯಪ್ರಜ್ಞೆಯಿಂದ ಅನಾಹುತ ತಪ್ಪಿದೆ.

ಕೈ ಶಾಸಕನಿಂದ ಸಿದ್ದರಾಮಯ್ಯಗೆ ಕೋಟಿ ಮೌಲ್ಯದ ಕಾರು ಗಿಫ್ಟ್!

ಭೈರತಿ ಗ್ರಾಮದವನಾದ  ಶಿವು ಎಂಬ ಯುವಕ ಸುರೇಶ್‌ಗೆ ಚಾಕುವಿನಿಂದ ಚುಚ್ಚಿ ಹತ್ಯಗೆ ಯತ್ನಸಿದ್ದಾನೆ. ಶಿವು ಕಾರ್ಪೆಂಟರ್ ಕೆಲಸ ಮಾಡುತ್ತಿದ್ದು, ಬೈರತಿ ಸುರೇಶ್‌ಗೆ  ಪರಿಚಯಸ್ಥನಾಗಿದ್ದಾನೆ ಎಂದು ತಿಳಿದುಬಂದಿದೆ. ಆದ್ರೆ ಇದಕ್ಕೆ ಕಾರಣ ಏನು ಎನ್ನುವುದು ಮಾತ್ರ ಇನ್ನೂ ತಿಳಿದುಬಂದಿಲ್ಲ.

ಬೈರತಿ ಸುರೇಶ್​ ಅವರು ಮನೆಯಿಂದ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ. ಸ್ಥಳಕ್ಕೆ ಕೊತ್ತನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಸುವರ್ಣನ್ಯೂಸ್ ಗೆ ಭೈರತಿ ಸುರೇಶ್ ಪ್ರತಿಕ್ರಿಯಿಸಿದ್ದು,  ಇದು ರಾಜಕೀಯದ ವಿಚಾರಕ್ಕೆ ನಡೆದ ದಾಳಿಯಲ್ಲ. ಶಿವು ಎಂಬಾತ ನನ್ನ ಮೇಲೆ ದಾಳಿ ನಡೆಸಿದ್ದಾನೆ ಎಂದು ಸ್ಪಷ್ಟಪಡಿಸಿದರು.

ಶಾಸಕ ಭೈರತಿ ಸುರೇಶ್ ಹತ್ಯೆ ಯತ್ನ ನಡೆದಿದ್ದು ಹೇಗೆ..?

"

ಚಾಕು ಹಾಕಲು ಬಂದಿದ್ದ, ನಾನು ಎಸ್ಕೇಪ್ ಆದೆ. ಯಾರ ಮೇಲೂ ಅನುಮಾನವಿಲ್ಲ. ಯಾಕೆ ಹೀಗೆ ಮಾಡಿದನೋ ಗೊತ್ತಿಲ್ಲ. ತುಂಬಾ ದಿನದಿಂದ ನಮ್ಮ ಮನೆ ಬಳಿ ಓಡಾಡುತ್ತಿದ್ದ ಎಂದು ಹೇಳಿದರು.

ಹೊಸಕೋಟೆ ಉಪಚುನಾವಣೆಗೆ ಭೈರತಿ ಸುರೇಶ್ ಅವರ ತಮ್ಮ ಪತ್ನಿ ಪದ್ಮಾವತಿ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಿದ್ದು, ಈಗಾಗಲೇ ಕ್ಷೇತ್ರದಲ್ಲಿ ಕಚೇರಿ ತೆರೆದಿದ್ದಾರೆ.