Asianet Suvarna News Asianet Suvarna News

ದೊಡ್ಡ ಹುದ್ದೆಗಳ ಬದಲಾವಣೆ ಸುಳಿವು ಕೊಟ್ಟ ಶೆಟ್ಟರ್

ದೇಶದ್ರೋಹಿ ಹೇಳಿಕೆ ನೀಡುವವರಿಗೆ ಕಾಂಗ್ರೆಸ್ ನವರೇ ಬೆಂಬಲ ನೀಡ್ತಿದ್ದಾರೆ/ ಮುಸಲ್ಮಾನರಲ್ಲಿ ಭೖ ಹುಟಟಿಸುವ ಕೆಲಸ ಮಾಡ್ತಿದ್ದಾರೆ/  ರಮೇಶ್ ಜಾರಕಿಹೋಳಿ ರಾಜೀನಾಮೆ ಹೇಳಿಕೆ ವಿಚಾರ ಗೊತ್ತಿಲ್ಲ/ ಹುಬ್ಬಳ್ಳೀಯಲ್ಲಿ ಸಚಿವ ಜಗದೀಶ ಶೆಟ್ಟರ್ ಹೇಳಿಕೆ

Karnataka minister jagadish shettar slams congress at dharwad
Author
Bengaluru, First Published Feb 22, 2020, 6:37 PM IST

ಧಾರವಾಡ [ಫೆ. 22]  ಕಾಂಗ್ರೆಸ್ ನಾಯಕರ ಬೆಂಬಲದಿಂದಾಗಿಯೇ ದೇಶದ್ರೋಹದ ಚಟುವಟಿಕೆಗೆ ಇಂಬು ಕೊಟ್ಟಂತಾಗಿದೆ. ಹೀಗಾಗಿ ನಾವು ಕಾಂಗ್ರೆಸ್ ನವರು ದೇಶದ್ರೋಹಿ ಕೆಲಸ ಮಾಡುತ್ತಾರೆ ಎನ್ನುತ್ತಿದ್ದೇವೆ ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದ್ದಾರೆ.

ಸಿಎಎ ಬಂದಿದೆ, ಅದು ನಿಜವಾಗಿ ಯಾರಿಗೂ ತೊಂದರೆ ಇಲ್ಲ. ಆದರೆ, ಕಾಂಗ್ರೆಸ್ ನವರು ಮುಸಲ್ಮಾನರಲ್ಲಿ ಭಯ ಹುಟ್ಟಿಸುವ‌ ಕೆಲಸ ಮಾಡುತ್ತಿದ್ದಾರೆ. ದೇಶದ ಸುರಕ್ಷತೆ, ದೇಶದ ರಕ್ಷಣೆಗೆ ಕಾಂಗ್ರೆಸ್ ಬೆಂಬಲಿಸಬೇಕು.

ಪಂಚಮಸಾಲಿ ಶಾಸಕರಿಂದ ಮಾಸ್ಟರ್ ಸ್ಟ್ರೋಕ್

ಕಾಂಗ್ರೆಸ್ ಸರ್ಕಾರ ಇದ್ದಾಗ ಅಕ್ರಮವಾಗಿ ಬಹಳ ಜನ ದೇಶದೊಳಗೆ ನುಸುಳಿದ್ದಾರೆ. ಬೆಂಗಳೂರಿನಲ್ಲಿ ಲಕ್ಷಾಂತರ ಜನ ಬಾಂಗ್ಲಾದವರಿದ್ದಾರೆ. ಅಂತಹನ್ನು‌ ಮೋದಿ ಸರ್ಕಾರ ಹೊರ ಹಾಕುವ ಕೆಲಸ ಮಾಡುತ್ತಿದೆ. ಪಾಕಿಸ್ತಾನ ಜಿಂದಾಬಾದ್ ಎನ್ನುವವರಿಗೆ ಡಿಕೆಶಿ ಪ್ರೋತ್ಸಾಹ ನೀಡುತ್ತಿರುವುದನ್ನು ಖಂಡಿಸಲೇಬೇಕು ಎಂದರು.

ಡಿಕೆಶಿ ಬಾಯಲ್ಲಿ ಪಾಕಿಸ್ತಾನದ ಜಿಂದಾಬಾದ್ ಬಂದರೆ ಅಚ್ಚರಿ ಪಡಬೇಕಿಲ್ಲ ಎಂದು ಡಿಕೆಶಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಜಗದೀಶ್ ಶೆಟ್ಟರ್ ರಾಜಕೀಯ ವಿಚಾರಗಳನ್ನು ಮಾತನಾಡಲು ಮರೆಯಲಿಲ್ಲ.

ಇನ್ನೊಂದು ಕಡೆ ತಮ್ಮದೇ ಸರ್ಕಾರದ ಸಚಿವ ರಮೇಶ್ ಜಾರಕಿಹೊಳಿಗೆ ಟಾಂಗ್ ಕೊಟ್ಟ ಶೆಟ್ಟರ್, ರಮೇಶ್ ರಾಜೀನಾಂಎ ಹೇಳಿಕೆ ವಿಚಾರ ನನ್ನ ಗಮನಕ್ಕೆ ಬಂದಿಲ್ಲ.  ಸರ್ಕಾರ ಭದ್ರತೆ, ಅಭದ್ರತೆ ಯಾರ ಹೇಳಿಕೆಗಳ ಮೇಲೆ ಇರೋದಿಲ್ಲ. ಸರ್ಕಾರ ನಡೆಸಲು ಮಾಧ್ಯಮದವರು ಬಿಡಬೇಕು ಎಂದು ಮನವಿ ಮಾಡಿಕೊಂಡರು.

ಮಹೇಶ ಕುಮಟಳ್ಳಿ ಕರೆದುಕೊಂಡು ಬಂದಿದ್ದು ರಮೇಶ ಜಾರಕಿಹೊಳಿ. ಹೀಗಾಗಿ‌ ಅವರಿಗೆ ಸೂಕ್ತ ಸ್ಥಾನಮಾನ ನೀಡಿ ಎನ್ನೋದು ಸಹಜ. ಸಚಿವ ನಿವಾಸಕ್ಕೆ ಮಾಧ್ಯಮಗಳ ನಿರ್ಬಂಧ ಸ್ಪೀಕರ್ ನಿರ್ಧಾರ ನಿಮಗೆ ಬಹಳ ತ್ರಾಸ್ ಆಗಿದ್ಯಾ ಎಂದು ಮುಗುಳುನಗೆ ಬೀರಿದರು.

ಯಾರಿಗೆ ಯಾವ ಜವಾಬ್ದಾರಿ ನೀಡಲಾಗಿದೆಯೋ ಅದನ್ನು ನಿಭಾಯಿಸುತ್ತಿದ್ದೇವೆ. ಪಕ್ಷ ಬದಲಾವಣೆ ಮಾಡಿದರೆ ನಮ್ಮ ತಕರಾರು ಇಲ್ಲ ಎನ್ನುವ ಮೂಲಕ ಬೆಳಗಾವಿ ಜಿಲ್ಲ ಉಸ್ತುವಾರಿ ಸ್ಥಾನ ಬೇರೆಯವರ ಪಾಲಾಗುವುದನ್ನು ಸೂಚ್ಯವಾಗಿ ಹೇಳಿದರು.

Follow Us:
Download App:
  • android
  • ios