Asianet Suvarna News Asianet Suvarna News

ರಾಜ್ಯದ 9 ಜಿಲ್ಲೆಗಳ ಗ್ರಾಮ ಪಂಚಾಯ್ತಿ ಉಪಚುನಾವಣೆಗೆ ದಿನಾಂಕ ಘೋಷಣೆ

ರಾಜ್ಯದ 9 ಜಿಲ್ಲೆಗಳ ಗ್ರಾಮ ಪಂಚಾಯ್ತಿಗಳ ಉಪಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ರಾಜ್ಯ ಚುನಾವಣೆ ಆಯೋಗ ಇಂದು (ಬುಧವಾರ) ಆದೇಶ ಹೊರಡಿಸಿದೆ. ಹಾಗಾದ್ರೆ ಯಾವ-ಯಾವ ಜಿಲ್ಲೆಗಳಲ್ಲಿ ಉಪಚುನಾವಣೆ ನಡೆಯಲಿದೆ..? ಈ ಕೆಳಗಿನಂತಿದೆ ನೋಡಿ.

Karnataka election commission announces 41 GP 173 Seats By poll date
Author
Bengaluru, First Published Jan 22, 2020, 7:40 PM IST

ಬೆಂಗಳೂರು, (ಜ.22): ಕರ್ನಾಟಕದ 9 ಜಿಲ್ಲೆಗಳ ಗ್ರಾಮ ಮಂಚಾಯಿತಿಗಳ ಉಪಚುನಾವಣೆಗೆ ರಾಜ್ಯ ಚುನಾವಣೆಗೆ ಆಯೋಗ ದಿನಾಂಕ ಪ್ರಕಟಿಸಿದೆ.

ಒಟ್ಟು 9 ಜಿಲ್ಲೆ 41 ಗ್ರಾ. ಪಂ. 173 ಸ್ಥಾನಗಳಿಗೆ ಉಪಚುನಾವಣೆ ದಿನಾಂಕ ಘೋಷಣೆ ಮಾಡಿ ಇಂದು (ಬುಧವಾರ) ರಾಜ್ಯ ಚುನಾವಣೆ ಆಯೋಗ ಆದೇಶ ಹೊರಡಿಸಿದೆ.

ಏಪ್ರಿಲ್ 5, 9ಕ್ಕೆ ಗ್ರಾಪಂ ಚುನಾವಣೆ: ಇದು #FakeNews

28 -01- 2020 ನಾಮಪತ್ರ ಸಲ್ಲಿಸಲು ಕೊನೆ ದಿನಾಂಕವಾಗಿದ್ದು, ಫೆಬ್ರವರಿ 9  ರಂದು ಉಪಚುನಾವಣೆ ನಡೆಯಲಿದೆ. ಇನ್ನು 11-02-2020  ರಂದು ಮತ ಏಣಿಕೆ ನಡೆಯಲಿದೆ ಎಂದು ಚುನಾವಣೆ ಆಯೋಗ ಆದೇಶದಲ್ಲಿ ತಿಳಿಸಿದೆ.

ವಿವಿಧ ಕಾರಣಗಳಿಂದ ಖಾಲಿಯಾಗಿರುವ ಸ್ಥಾನಗಳಿಗೆ ಚುನಾವಣೆ ನಡೆಸಲು ಆಯೋಗ ದಿನಾಂಕ ನಿಗದಿ ಮಾಡಿದೆ. ಹಾಗಾದ್ರೆ, ಯಾವ-ಯಾವ ಜಿಲ್ಲೆಗಳಲ್ಲಿ ಗ್ರಾಮ ಪಂಚಾಯಿತಿಗೆ ಚುನಾವಣೆ ನಡೆಯಲಿದೆ ಎನ್ನುವ ಮಾಹಿತಿ ಇಂತಿದೆ.
 
1) ಬೆಂಗಳೂರು ನಗರ - 8 ಕ್ಷೇತ್ರ - 9 ಸ್ಥಾನ ಗಳಿಗೆ ಚುನಾವಣೆ
2) ಬೆಂಗಳೂರು ಗ್ರಾಮಾಂತರ - 5 ಕ್ಷೇತ್ರ - 6 ಸ್ಥಾನಗಳಿಗ ಚುನಾವಣೆ
3) ಚಿಕ್ಕಬಳ್ಳಾಪುರ - 9 ಕ್ಷೇತ್ರ - 9 ಸ್ಥಾನಗಳಿಗೆ ಚುನಾವಣೆ
4) ಮೈಸೂರು - 24 ಕ್ಷೇತ್ರ - 25 ಸ್ಥಾನಗಳಿಗೆ ಚುನಾವಣೆ
5) ಮಂಡ್ಯ - 8 ಕ್ಷೇತ್ರ - 8 ಸ್ಥಾನಗಳಿಗೆ ಚುನಾವಣೆ
6) ಬೆಳಗಾವಿ - 31 ಕ್ಷೇತ್ರ - 43 ,ಸ್ಥಾನ 
7) ಹಾವೇರಿ - 7 ಕ್ಷೇತ್ರ - 7 ಸ್ಥಾನ 
8 ) ಉತ್ತರ ಕನ್ನಡ - 33 ಕ್ಷೇತ್ರ - 43 ಸ್ಥಾನಗಳಿಗೆ ಚುನಾವಣೆ 
9 ) ಬಳ್ಳಾರಿ - 16 ಕ್ಷೇತ್ರ, 23 ಸ್ಥಾನಗಳಿಗೆ ಚುನಾವಣೆ 

Follow Us:
Download App:
  • android
  • ios