Asianet Suvarna News Asianet Suvarna News

ಪೌರತ್ವ ಕಿಚ್ಚಿನ ಮಧ್ಯೆ ರಾಜಕೀಯ ಪಕ್ಷದ ಬೆಂಬಲಿಗರಿಗೆ ಉಪ್ಪಿ 5 ಬಹಿರಂಗ ಪ್ರಶ್ನೆಗಳು

ನಟ ಉಪೇಂದ್ರ ರಾಜಕೀಯ ರಂಗದಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಸಾಮಾಜಿಕವಾಗಿ ಮತ್ತು ಪ್ರಸ್ತುತ ಚರ್ಚೆಗೆ ಒಳಪಡುವ ಎಲ್ಲ ವಿಷಯಗಳ ಬಗ್ಗೆಯೂ ಉಪೇಂದ್ರ ಅವರ ಅಭಿಪ್ರಾಯ ಇದ್ದೇ ಇರುತ್ತೆ.  ಅದು ಪರವಗಿ ಇರಬಹದು ಅಥವಾ ವಿರೋಧ ರೀತಿಯಲ್ಲಿ, ಇಲ್ಲ ಸಲಹೆ -ಸೂಚನೆಗಳಂತೆ ಇರಬಹುದು. ಒಟ್ನಲ್ಲಿ ರಿಯಲ್ ಸ್ಟಾರ್ ನ ಅಭಿಪ್ರಾಯಗಳ ಇದ್ದೇ ಇರುತ್ತವೆ. ಅದರಂತೆ ಇದೀಗ ಉಪ್ಪಿ ಎಲ್ಲಾ ರಾಜಕೀಯ ಪಕ್ಷದ ಸಪೋರ್ಟರ್ಸ್ ಗಳಿಗೆ ಬಹಿರಂಗವಾಗಿ 5 ಪ್ರಶ್ನೆಗಳನ್ನು ಹಾಕಿದ್ದಾರೆ. ಅವು ಈ ಕೆಳಗಿನಂತಿವೆ... 

Kannada Actor prajakiya Upendra Asks 5 questions To Political supporters
Author
Bengaluru, First Published Dec 23, 2019, 7:08 PM IST

ಬೆಂಗಳೂರು, [ಡಿ.23]: ಪ್ರಸಕ್ತ ವಿದ್ಯಾಮಾನಗಳ ಬಗ್ಗೆ ಅಭಿಪ್ರಾಯಗಳನ್ನ ವ್ಯಕ್ತಪಡಿಸುವುದರಲ್ಲಿ ಪ್ರಜಾಕೀಯ ಪಕ್ಷದ ಸ್ಥಾಪಕ ಉಪೇಂದ್ರ ಒಂದು ಹೆಜ್ಜೆ ಮುಂದು. ಕೆಲ ದಿನಗಳ ಹಿಂದೆಯಷ್ಟೇ ಹೈದರಾಬಾದ್ ಎನ್‌ಕೌಂಟರ್ ಬಗ್ಗೆ ಉಪೇಂದ್ರ ಮಾಡಿದ್ದ ಟ್ವೀಟ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಕೆಲವರು ಉಪೇಂದ್ರರನ್ನ ಬೆಂಬಲಿಸಿದ್ರೆ, ಇನ್ನು ಕೆಲವರು ಉಪ್ಪಿ ಟ್ವೀಟ್ ಗೆ ವಿರೋಧ ವ್ಯಕ್ತಪಡಿಸಿದ್ದರು.

ಇದೀಗ  ರಾಜ್ಯದಲ್ಲಿ ಮಾತ್ರವಲ್ಲದೇ ಇಡೀ ದೇಶದಲ್ಲಿ ಪೌರತ್ವ ತಿದ್ದುಪಡಿ ಕಿಚ್ಚು ಹೊತ್ತಿ ಉರಿಯುತ್ತಿದೆ. ಇದರ ಮಧ್ಯೆ ರಿಯಲ್ ಸ್ಟಾರ್ ಉಪೇಂದ್ರ  ಎಲ್ಲಾ ರಾಜಕೀಯ ಪಕ್ಷದ ಬೆಂಬಲಿಗರ ಮುಂದೆ 5 ಪ್ರಶ್ನೆಗಳನ್ನ ಇಟ್ಟಿದ್ದಾರೆ. 

ಪ್ರಭಾವಿಗಳಿಗೇಕಿಲ್ಲ? ಎನ್‌ಕೌಂಟರ್ ನಂತ್ರ ಉಪ್ಪಿ'ಸೂಪರ್' ಪ್ರಶ್ನೆ

ಉಪೇಂದ್ರ ಹೆಚ್ಚಾಗಿ ಮಾಧ್ಯಮಗಳ ಮುಂದೆ ರಾಜಕೀಯ ನಾಯಕರ ತರ ಮಾತನಾಡಲ್ಲ. ಏನಿದ್ರು ಅವರಿಗೆ ಸೋಶಿಯಲ್ ಮೀಡಿಯಾವೇ ಅವರಿಗೆ ಮಾಧ್ಯಮವಾಗಿದೆ. ಅದರಂತೆ 5 ಪ್ರಶ್ನೆಗಳನ್ನು  ಟ್ವೀಟ್ ಮಾಡಿದ್ದಾರೆ. 

ಉಪ್ಪಿಯ 5 ಪ್ರಶ್ನೆಗಳು
 1. ನಿಮ್ಮ ಪಕ್ಷ, ಮತ್ತು ಪಕ್ಷದ ನಾಯಕರು ಪ್ರಖ್ಯಾತರಾಗಿದ್ದರೂ ಪ್ರಚಾರಕ್ಕೆ ಕೋಟಿ ಕೋಟಿ ಹಣ ಖರ್ಚುಮಾಡುವುದೇಕೆ ?
2- ಉತ್ತಮ ಕೆಲಸ ಮಾಡಿದ್ದರೆ ಜನ ತಮ್ಮನ್ನು ಗೆಲ್ಲಿಸುತ್ತಾರೆ ಎಂಬ ನಂಬಿಕೆ ಇಲ್ಲವೇ ?
3- ಅಷ್ಟೊಂದು ಹಣ ಖರ್ಚುಮಾಡಿ ಗೆದ್ದವರು ಪ್ರಾಮಾಣಿಕರಾಗಿರುತ್ತಾರೆಯೆ ?
4- ಪ್ರಾಮಾಣಿಕತೆ,  ಭ್ರಷ್ಟತೆ  ಎಂಬುವುದು ಪಕ್ಷ ಬದಲಿಸುವುದರಿಂದ ಬದಲಾಗುವುದೇ ?
5- ಮರೆವು ಎಂಬುದು ಪ್ರಜೆಗಳಿಗೆ ಶಾಪವೇ? ರಾಜರುಗಳಿಗೆ ವರವೇ ?

ರಿಯಲ್ ಸ್ಟಾರ್ ಗೆ ಮರು ಪ್ರಶ್ನೆ
ಉಪ್ಪಿ ಟ್ವೀಟ್ ಪ್ರಶ್ನೆಗಳಿಗೆ  ಪರ-ವಿರೋಧಗಳ ಉತ್ತರಗಳು ಸಹ ಬಂದಿವೆ. ಅದರಲ್ಲಿ ಒಬ್ಬರು ನೀವು ನಿಮ್ಮ ಸಿನಿಮಾದ ಪ್ರಮೋಷನ್ ಯಾಕೇ ಮಾಡ್ತೀರಾ? ಒಳ್ಳೆ ಸಿನಿಮಾ ಮಾಡಿದ್ರೆ ಜನರೇ ಗೆಲ್ಲಿಸುತ್ತಾರೆ ಎಂದು ನಂಬಿಕೆ ಇಲ್ಲವೇ ಎಂದು ಉಪ್ಪಿಗೆ ಮರು ಪ್ರಶ್ನಿಸಿದ್ದಾರೆ.

ಉಪ್ಪಿ ಪ್ರಶ್ನೆಗೆ ಅಬೂಬಕರ್ ಉತ್ತರ
1- ಪಕ್ಷ ಮತ್ತು ಪಕ್ಷದ ನಾಯಕರು ಪ್ರಖ್ಯಾತರಾಗಿದ್ದರೂ ಮತದಾರರು ಹಣ ಹೆಂಡಕ್ಕೆ ಹಿಂದೆ ಬಿದ್ದಿದ್ದಾರೆ.
2- ಉತ್ತಮ ಕೆಲಸ ಮಾಡಿ, ಮತದಾರರ ಮೇಲೆ ನಂಬಿಕೆ ಇದ್ದರೂ ಕೆಲವರು ಜನ ಕೆಲಸ ತಮ್ಮ ವೈಯಕ್ತಿಕ ಕೆಲಸ ಮಾಡಿಲ್ಲ ಅಂತ ಅನ್ನುತ್ತಾರೆ. 
3- ಹಣ ಖರ್ಚುಮಾಡಿ ಗೆದ್ದವರು ಪ್ರಾಮಾಣಿಕರಾಗಿರುತ್ತಾರೆ. ಆದರೆ ಎಲ್ಲರೂ ಒಂದೇ ರೀತಿ ಇರಲ್ಲ.

Follow Us:
Download App:
  • android
  • ios