Asianet Suvarna News Asianet Suvarna News

ಅನರ್ಹ ಅರ್ಜಿ ವಿಚಾರಣೆ ಅಂತ್ಯ: ಇತ್ತ BSY ಆಪರೇಷನ್ ಆಡಿಯೋ ಕೇಸ್ ಏನಾಯ್ತು.?

ಇಂದು [ಶುಕ್ರವಾರ] ಒಂದು ಕಡೆ ಅನರ್ಹ ಶಾಸಕರ ಅರ್ಜಿ ವಿಚಾರಣೆ ಅಂತ್ಯವಾದ್ರೆ, ಮತ್ತೊಂದೆಡೆ ತಡೆ ಹಿಡಿಯಲಾಗಿದ್ದ ಸಿಎಂ ಬಿಎಸ್ ಯಡಿಯೂರಪ್ಪ ಅವರ ಆಪರೇಷನ್ ಆಡಿಯೋ ಕೇಸ್ ಕಲ್ಬುರ್ಗಿ ಹೈಕೋಕೋರ್ಟ್ ಪೀಠದಲ್ಲಿ ವಿಚಾರಣೆ ನಡೆದಿತ್ತು. ಇದೀಗ ಅದು ಏನಾಯ್ತು..?
 

Kalburgi Court adjourns BS Yediyurappa's Operation Kamala Audio case On Nov 7
Author
Bengaluru, First Published Oct 25, 2019, 6:09 PM IST

ಕಲಬುರಗಿ, [ಅ.25]: ಬಿಜೆಪಿಯ ಆಪರೇಷನ್ ಕಮಲ ಆಡಿಯೋ ಕೇಸ್ ತಡೆಯಾಜ್ಞೆ ತೆರವುಗೊಳಿಸುವಂತೆ ಗುರುಮಠಕಲ್ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ ಅವರ ಮಗ ಶರಣಗೌಡ ಕಂದಕೂರ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

ಈ ಪ್ರಕರಣ ಇಂದು [ಶುಕ್ರವಾರ] ಕಲಬುರಗಿ ಹೈಕೋರ್ಟ್ ನಲ್ಲಿ ವಿಚಾರಣೆಗೆ ಬಂದಿದ್ದು, ವಾದ-ಪ್ರತಿವಾದ ಆಲಿಸಿದ ಜಡ್ಜ್ ಮಹ್ಮದ್ ನವಾಜ್ ಅವರು ವಿಚಾರಣೆಯನ್ನು ನವೆಂಬರ್ 7ಕ್ಕೆ ಮುಂದೂಡಿದರು.  ಶರಣಗೌಡ ಪರ ವಕೀಲ ಪ್ರೋ. ರವಿವರ್ಮ ಕುಮಾರ್ ವಾದ ಮಂಡಿಸಿದ್ರೆ, ಬಿಎಸ್ ವೈ ಪರ  ಸಂಜಯ ಕುಲ್ಕರ್ಣಿ ವಾದ ಮಂಡನೆ ಮಾಡಿದರು.

ಆಡಿಯೋ ಹಗರಣ: ಯಡಿಯೂರಪ್ಪಗೆ ಅರ್ಧ ರಿಲಿಫ್!
 
ಎಚ್ ​.ಡಿ. ಕುಮಾರಸ್ವಾಮಿ ಅಧಿಕಾರಾವಧಿಯಲ್ಲಿ ಯಡಿಯೂರಪ್ಪ ಅವರು ಗುರುಮಿಟ್ಕಲ್  ಜೆಡಿಎಸ್ ಶಾಸಕ  ನಾಗನಗೌಡ ಕಂದಕೂರ ಪುತ್ರ ಶರಣಗೌಡ ಕಂದಕೂರ ಗೆ ಎಂಎಲ್​ಎ ಟಿಕೆಟ್ ನೀಡುವುದಾಗಿ ಆಮಿಷವೊಡ್ಡಿದ್ದರು, ಆ ಆಡಿಯೋ ಸ್ವತಃ ಶರಣಗೌಡ ಅವರೇ ಬಹಿರಂಗಪಡಿಸಿದ್ದು, ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ತನಗೆ ಎಂಎಲ್​ಎ ಟಿಕೆಟ್ ನೀಡುವುದಾಗಿ ಆಮಿಷವೊಡ್ಡಿದ ಬಿ.ಎಸ್. ಯಡಿಯೂರಪ್ಪನವರ ಆಡಿಯೋವನ್ನು ಶರಣಗೌಡ ಕಂದಕೂರ ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಿದ್ದರು. ಆದರೆ, ಬಿಎಸ್​ ಯಡಿಯೂರಪ್ಪ ಆಡಿಯೋ ಕೇಸ್​ ತನಿಖೆಗೆ ಕಲಬುರ್ಗಿ ಹೈಕೋರ್ಟ್​ ಪೀಠ ತಡೆಯಾಜ್ಞೆ ನೀಡಿತ್ತು.

ಆಡಿಯೋ ಪ್ರಕರಣ: ತೀರ್ಪು ಕಾಯ್ದಿರಿಸಿದ ‘ಹೈ’ ಪೀಠ

ಆಪರೇಷನ್ ಕಮಲ ನಡೆಸಲು ಹಣದ ಆಮಿಷವೊಡ್ಡಿದ ಕುರಿತು ರಾಯಚೂರಿನ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಶಂಕರಗೌಡ ಕಂದಕೂರ ದೂರು ದಾಖಲಿಸಿದ್ದರು. 

ಬಿ.ಎಸ್. ಯಡಿಯೂರಪ್ಪ ಹಾಗೂ ಶಾಸಕರಾದ ಶಿವನಗೌಡ ನಾಯಕ್, ಪ್ರೀತಂ ಗೌಡ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಆದ್ರೆ ಪ್ರಕರಣದ ತನಿಖೆಗೆ ಇದೇ ಕಲಬುರ್ಗಿ ಹೈಕೋರ್ಟ್ ಪೀಠ ತಡೆ ನೀಡಿತ್ತು.

Follow Us:
Download App:
  • android
  • ios