Asianet Suvarna News Asianet Suvarna News

ಬಿಜೆಪಿ ಜತೆ ಮೈತ್ರಿ ಇದ್ದರೂ ಜಾತ್ಯತೀತ ಜನತಾದಳ ಜಾತ್ಯತೀತವಾಗೇ ಇರಲಿದೆ: ಬಂಡೆಪ್ಪ ಕಾಶಂಪೂರ್

ಪಕ್ಷದ ಇತ್ತೀಚಿನ ವಿದ್ಯಮಾನಗಳ ಹಿನ್ನೆಲೆಯಲ್ಲಿ ಕೋರ್‌ಕಮಿಟಿ ಸದಸ್ಯರೂ ಆಗಿರುವ ಹಿರಿಯ ನಾಯಕ ಹಾಗೂ ಹಾಲಿ ಶಾಸಕ ಬಂಡೆಪ್ಪ ಕಾಶೆಂಪೂರ್‌ಅವರು 'ಕನ್ನಡಪ್ರಭ'ದೊಂದಿಗೆ 'ಮುಖಾಮುಖಿ'ಯಾಗಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

JDS Senior Leader Bandeppa Kashempur Exclusive Inetrview gvd
Author
First Published Oct 19, 2023, 9:04 AM IST

ಸಂದರ್ಶನ: ಪ್ರಭುಸ್ವಾಮಿ ನಟೇಕರ್

ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷಿತ ಸ್ಥಾನಗಳನ್ನು ಗಳಿಸದೇ ಇರುವುದರಿಂದ ಜೆಡಿಎಸ್ ಪಾಳೆಯದಲ್ಲಿ ಮಂಕು ಕವಿದಂತಾಗಿತ್ತು. ಪಕ್ಷದ ಶಾಸಕರನ್ನು, ಕಾರ್ಯಕರ್ತರನ್ನು ಉಳಿಸಿಕೊಳ್ಳುವುದು ಸವಾಲಾಗಿ ಎದುರಾಗಿತ್ತು. ಹೀಗಾಗಿಯೇ  ಇದಕ್ಕೆಲ್ಲ ಪರಿಹಾರ ಎಂಬಂತೆ ಪಕ್ಷದ ಮುಂದಿನ ಭವಿಷ್ಯದ ದೃಷ್ಟಿಯಿಂದ ಮುಂಬರುವ ಲೋಕಸಭಾ ಚುನಾವಣೆಯನ್ನು  ಗುರಿಯಾಗಿಸಿಕೊಂಡು ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದು ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಮತ್ತು ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರನ್ನು ದೂರವಿಟ್ಟು ತಾವೇ ಮುಂದೆ ಹೆಜ್ಜೆ ಇಟ್ಟರು. ಪರಿಣಾಮ ಪಕ್ಷದ ಇತರ ಮುಸ್ಲಿಂ ನಾಯಕರ ಜತೆಗೆ ಇಬ್ರಾಹಿಂ ಅವರೂ ಬಂಡಾಯದ ಬಾವುಟ ಹಾರಿಸಿದ್ದಾರೆ. ತಮ್ಮದೇ ಮೂಲ ಜೆಡಿಎಸ್ ಎಂದು ಘೋಷಿಸಿದ್ದಾರೆ. ಪಕ್ಷದ ಪಾಲಿಗೆ ಇದು ಮುಜುಗರ ಸೃಷ್ಟಿಸುವ ಸನ್ನಿವೇಶ. ಪಕ್ಷದ ಇತ್ತೀಚಿನ ವಿದ್ಯಮಾನಗಳ ಹಿನ್ನೆಲೆಯಲ್ಲಿ ಕೋರ್‌ಕಮಿಟಿ ಸದಸ್ಯರೂ ಆಗಿರುವ ಹಿರಿಯ ನಾಯಕ ಹಾಗೂ ಹಾಲಿ ಶಾಸಕ ಬಂಡೆಪ್ಪ ಕಾಶೆಂಪೂರ್‌ಅವರು 'ಕನ್ನಡಪ್ರಭ'ದೊಂದಿಗೆ 'ಮುಖಾಮುಖಿ'ಯಾಗಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

* ಇನ್ನು ಮುಂದೆ ನಿಮ್ಮ ಜಾತ್ಯತೀತ ಜನತಾದಳ ಪಕ್ಷ ‘ಜಾತ್ಯತೀತ’ ನಿಲುವಿನಿಂದ ಅಂತರ ಕಾಪಾಡಿಕೊಳ್ಳಲಿದೆಯಂತೆ?
ಯಾರು ಹೇಳಿದ್ದು ನಿಲುವಿನಲ್ಲಿ ಬದಲಾಗಿದ್ದೇವೆ ಅಂತ. ನಮ್ಮದು ಜಾತ್ಯತೀತ ಜನತಾದಳವಾಗಿಯೇ ಇರಲಿದೆ. ಬೆಂಗಳೂರಲ್ಲಿ ಕೆಲವು ಮುಸ್ಲಿಮರು ಪಕ್ಷದಿಂದ ದೂರ ಹೋಗಿರಬಹುದು. ಆದರೆ, ಬೀದರ್, ಕಲಬುರಗಿ ಸೇರಿದಂತೆ  ರಾಜ್ಯದ ಇತರೆ ಜಿಲ್ಲೆಗಳಲ್ಲಿ ಎಲ್ಲಿ ಹೋಗಿದ್ದಾರೆ? ನಮ್ಮ ಜಿಲ್ಲೆಯಲ್ಲಿ ಮುಸ್ಲಿಮರು ನಮ್ಮೊಂದಿಗೆ ಇದ್ದಾರಲ್ಲ? ಸುಮ್ಮನೆ ಏನೇನೋ ಸುದ್ದಿ ಹಬ್ಬಿಸುತ್ತಿದ್ದಾರೆ. ಮೈತ್ರಿ ಮಾಡಿಕೊಂಡ ತಕ್ಷಣ ನಿಲುವಿನಲ್ಲಿ ಬದಲಾಗಿದ್ದೇವೆ ಎಂದು ತಿಳಿದುಕೊಳ್ಳುವುದು ತಪ್ಪು. ಪಕ್ಷದ ವರಿಷ್ಠರು ಸಹ ಈಗಾಗಲೇ ಹೇಳಿದ್ದು, ಎಲ್ಲಾ ಸಮುದಾಯದವರ ರಕ್ಷಣೆಗೆ ನಾವು ಬದ್ಧವಾಗಿದ್ದೇವೆ.

ರಾಜ್ಯವನ್ನು ಉದ್ಧಾರ ಮಾಡಲು ಅಧಿಕಾರಕ್ಕೆ ಬಂದ ಕಾಂಗ್ರೆಸ್: ಕೆ.ಎಸ್.ಈಶ್ವರಪ್ಪ ಲೇವಡಿ

* ಲೋಕಸಭೆ ಚುನಾವಣೆಗೆ ಸಿದ್ಧತೆಯ ಭಾಗವಾಗಿ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್ ಮುಂದಾಗಿದೆಯೇ? 
ಸದ್ಯಕ್ಕೆ ಯಾವುದೇ ಚುನಾವಣೆಗಳೂ ಇಲ್ಲ. ಮುಂದಿನ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡೇ ಪಕ್ಷ ಸಂಘಟನೆಗೆ ಒತ್ತು ನೀಡಲಾಗುತ್ತಿದೆ. ಈಗಾಗಲೇ ಬಿಜೆಪಿ-ಜೆಡಿಎಸ್ ಮೈತ್ರಿ ನಿರ್ಧಾರವಾಗಿದೆ. ನಮಗೆ ಯಾವ ಸೀಟು ಬರುತ್ತದೆ ಎಂಬುದನ್ನು ನೋಡುತ್ತೇವೆ. ಬಿಜೆಪಿಗೆ ಯಾವ ಸೀಟು ಸಿಗಲಿದೆ ಎಂಬುದನ್ನು ಗಮನಿಸುತ್ತೇವೆ. 

* ಬಿಜೆಪಿ ಎಷ್ಟು ಸ್ಥಾನಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಲಿದೆ? ಕ್ಷೇತ್ರ ಹಂಚಿಕೆ ಅಂತಿಮಗೊಂಡಿದೆಯೇ?
ಅದು ದೊಡ್ಡವರಿಗೆ (ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ) ಬಿಟ್ಟ ವಿಚಾರ. ಒಂದಾದರೂ ತೆಗೆದುಕೊಳ್ಳಲಿ, ಎರಡಾದರೂ ಸರಿ. ನಾಲ್ಕಾದರೂ ಸರಿ. ನಾವೆಲ್ಲ ದೊಡ್ಡವರ ತೀರ್ಮಾನಕ್ಕೆ ಬದ್ಧವಾಗಿರುತ್ತೇವೆ. ಸದ್ಯಕ್ಕೆ ಮೈತ್ರಿ ಸೀಟು ಹಂಚಿಕೆಯಾಗದಿರುವ ಕಾರಣ ಪಕ್ಷದ ಸಂಘಟನೆ ಒಂದೇ ನಮ್ಮ ಉದ್ದೇಶವಾಗಿದೆ.

* ಬಿಜೆಪಿಯೊಂದಿಗಿನ ಮೈತ್ರಿಗೆ ನಿಮ್ಮ ಪಕ್ಷದಲ್ಲಿಯೇ ಪ್ರತಿರೋಧ ವ್ಯಕ್ತವಾಗಿದೆಯಲ್ಲ?
ಅದೆಲ್ಲ ಸುಳ್ಳು. ಬಿಜೆಪಿಯೊಂದಿಗಿನ ಮೈತ್ರಿಗೆ ವಿರೋಧ ಇಲ್ಲ. ಕೆಲವರು ತಮ್ಮ ಅಭಿಪ್ರಾಯಗಳನ್ನು ಹೇಳಿದ್ದಾರೆಯೇ ಹೊರತು ವಿರೋಧ ವ್ಯಕ್ತಪಡಿಸಿಲ್ಲ. ಅಭಿಪ್ರಾಯ ಹೇಳುವುದಕ್ಕೂ, ವಿರೋಧ ವ್ಯಕ್ತಪಡಿಸುವದಕ್ಕೂ ವ್ಯತ್ಯಾಸ ಇದೆ. ಶಾಸಕರು ಸ್ಥಳೀಯವಾಗಿ ಇರುವ ಪರಿಸ್ಥಿತಿ ಕುರಿತು ಪಕ್ಷದ ವರಿಷ್ಠರ ಗಮನಕ್ಕೆ ತಂದಿದ್ದಾರೆ. ಅದನ್ನು ಬಗೆಹರಿಸುವ ಭರವಸೆಯನ್ನು ವರಿಷ್ಠರು ನೀಡಿದ್ದಾರೆ. ಅಭಿಪ್ರಾಯಗಳನ್ನು ಅಸಮಾಧಾನ ಎಂದು ಹೇಳಲು ಬರುವುದಿಲ್ಲ. ಸುಮ್ಮನೆ ಸುಳ್ಳು ಸುದ್ದಿ ಹಬ್ಬಿಸಬಾರದು. 

* ಸ್ವತಃ ಪಕ್ಷದ ರಾಜ್ಯಾಧ್ಯಕ್ಷರೇ ಮೈತ್ರಿಗೆ ವಿರೋಧ ವ್ಯಕ್ತಪಡಿಸಿರುವುದು ಮುಜುಗರ ಉಂಟು ಮಾಡುವುದಿಲ್ಲವೇ?
ಅವರ ಸಮ್ಮುಖದಲ್ಲಿಯೇ ಮೈತ್ರಿ ಕುರಿತಂತೆ ಚರ್ಚೆ ನಡೆಸಲಾಗಿದೆ. ನಾವೆಲ್ಲ ಕುಳಿತು ಮೈತ್ರಿಯ ಬಗ್ಗೆ ಮಾತುಕತೆ ನಡೆಸಿದ್ದೇವೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೇ ಎನ್‌ಡಿಎ ಜತೆ ಮೈತ್ರಿ ಕುರಿತು ಮಾತುಕತೆ ನಡೆಸಿ ಅಭಿಪ್ರಾಯಗಳನ್ನು, ಸಲಹೆಗಳನ್ನು ಕೇಳಿದ್ದಾರೆ. ಇಷ್ಟಾದ ಮೇಲೂ ಅವರವರ ಹಿಡನ್ ಅಂಜೆಡಾಗಳು ಏನ್ ಇವೆಯೋ ಗೊತ್ತಿಲ್ಲ.

* ತಮ್ಮದೇ ಒರಿಜನಲ್ ಜೆಡಿಎಸ್ ಪಕ್ಷ ಎಂದು ರಾಜ್ಯಾಧ್ಯಕ್ಷ ಇಬ್ರಾಹಿಂ ಹೇಳಿದ್ದಾರಲ್ಲ? 
ನೋಡಿ, ನಾನು ಅವರ ಹೇಳಿಕೆಗಳ ಬಗ್ಗೆ ಟೀಕೆ ಮಾಡುವುದಿಲ್ಲ. ಅವರಿಗೂ ತಿಳುವಳಿಕೆ ಇದೆ. ರಾಜಕೀಯದಲ್ಲಿ ಹಿರಿಯರಿದ್ದಾರೆ. ಅವರ ಏನೇನು ಲೆಕ್ಕಾಚಾರ ಇದೆಯೋ ನಮಗೆ ಗೊತ್ತಿಲ್ಲ. 

* ಪಕ್ಷದ ರಾಜ್ಯಾಧ್ಯಕ್ಷರ ಹೇಳಿಕೆ ಗಮನಿಸಿದರೆ ಜೆಡಿಎಸ್ ಇಬ್ಭಾಗವಾಗುವತ್ತ ಸಾಗುತ್ತಿದೆಯೇ?
ಆ ಥರ ಏನೂ ಇಲ್ಲ. ಜೆಡಿಎಸ್ ಪಕ್ಷ ಯಾವುದೇ ಕಾರಣಕ್ಕೂ ಇಬ್ಭಾಗವಾಗುವುದಿಲ್ಲ. ನಮ್ಮ ಪಕ್ಷದಲ್ಲಿ ಯಾವುದೇ ಬಂಡಾಯ ಇಲ್ಲ. ಪಕ್ಷದ ರಾಜ್ಯಾಧ್ಯಕ್ಷರು ನಡೆಸಿದ ಚಿಂತನ-ಮಂಥನ ಸಭೆಯಲ್ಲಿ ಪಕ್ಷದ ಯಾವ ಶಾಸಕರು, ಹಿರಿಯ ಮುಖಂಡರು ಭಾಗಿಯಾಗಿದ್ದರು ಹೇಳಿ. ಯಾರೊಬ್ಬರೂ ಭಾಗಿಯಾಗಿರಲಿಲ್ಲ. ಕೆಲವು ಮುಖಂಡರು ಭಾಗಿಯಾದ ಮಾತ್ರಕ್ಕೆ ಇಬ್ಭಾಗುತ್ತದೆಯೇ? ಸಾಧ್ಯವೇ ಇಲ್ಲ.

* ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಸೋಲನುಭವಿಸಿದ ಬಳಿಕ ಪಕ್ಷದ ಬಲವರ್ಧನೆಗೆ ಕೋರ್ ಕಮಿಟಿ ರಚನೆ ಮಾಡಲಾಗಿದೆ. ಸಮಿತಿಯಲ್ಲಿ ನೀವು ಒಬ್ಬರು ಸದಸ್ಯರಾಗಿದ್ದೀರಿ. ಈವರೆಗೆ ನಡೆದ ಕೋರ್ ಕಮಿಟಿ ಸಭೆಯಲ್ಲಿ ಪಕ್ಷಕ್ಕೆ ಹೊಸ ಆಯಾಮ ನೀಡುವಲ್ಲಿ ಸಕಾರಾತ್ಮಕ ಚರ್ಚೆಗಳು ನಡೆದಿವೆಯೇ? 
ನಮ್ಮ ಪಕ್ಷದ ಹಿರಿಯ ನಾಯಕ ಜಿ.ಟಿ.ದೇವೇಗೌಡ ಅಧ್ಯಕ್ಷತೆಯಲ್ಲಿ ಕೋರ್ ಕಮಿಟಿ ರಚನೆ ಮಾಡಲಾಗಿದೆ. ಸಮಿತಿಯಲ್ಲಿ 21 ಸದಸ್ಯರಿದ್ದು, ಇಡೀ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದೇವೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ಸಭೆಗಳನ್ನು ನಡೆಸುತ್ತಿದ್ದೇವೆ. ಈಗಾಗಲೇ ಕಲಬುರಗಿ, ಕೊಪ್ಪಳ, ಬೆಳಗಾವಿ, ಹುಬ್ಬಳ್ಳಿಯಲ್ಲಿ ಸಭೆ ನಡೆಸಿದ್ದೇವೆ. ಉತ್ತರ ಕರ್ನಾಟಕ ಭಾಗದ ಸಭೆ ಮುಗಿಸಿದ್ದೇವೆ. ನಂತರ ರಾಜ್ಯದ ಇತರೆ ಭಾಗಗಳ ಸಭೆಗಳನ್ನುಶೀಘ್ರದಲ್ಲಿಯೇ ಕೈಗೊಳ್ಳುತ್ತೇವೆ.

* ನೀವು ಸದಸ್ಯರಾಗಿರುವ ಕೋರ್ ಕಮಿಟಿ ಸಭೆಯಲ್ಲಿ ಪಕ್ಷದ ಬಲವರ್ಧನೆ ಮಾಡುವ ನಿಟ್ಟಿನಲ್ಲಿ ಕ್ರಿಯಾತ್ಮಕವಾಗಿ ಚಿಂತನೆ ನಡೆದಿದೆಯೇ?
ಹೌದು, ಪಕ್ಷವನ್ನು ಹೊಸ ರೀತಿಯಲ್ಲಿ ಹೇಗೆ ಬಲಗೊಳಿಸಬೇಕು, ಕೇವಲ ಕಾರ್ಡ್‌ಗಾಗಿ ಪಕ್ಷಕ್ಕೆ ಬರುವವರನ್ನು ತಡೆಯುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮಗಳೇನು ಎಂಬಿತ್ಯಾದಿ ವಿಷಯಗಳ ಕುರಿತು ಚರ್ಚಿಸಲಾಗಿದೆ. ಹೀನಾಯವಾಗಿ ಹಿನ್ನೆಡೆಯಾಗಿ ಜಿಲ್ಲಾಮಟ್ಟದಲ್ಲಿ ಪಕ್ಷವನ್ನು ಬಲವರ್ಧನೆಗೊಳಿಸಬೇಕಿದೆ. ತಳಮಟ್ಟದಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿ ಹೊಸದಾಗಿ ಪಕ್ಷವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದೇವೆ. ಪಕ್ಷವನ್ನು ಬಲಗೊಳಿಸುವುದೇ ಕೋರ್‌ಕಮಿಟಿ ಕೆಲಸವಾಗಿದೆ. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. 

* ಪದಾಧಿಕಾರಿಗಳ ಬದಲಾವಣೆ ಮಾಡಲಾಗುವುದು ಎಂಬ ಹೇಳಿಕೆ ಆಗಾಗ ಕೇಳಿಬರುತ್ತಲೇ ಇರುತ್ತದೆ?
ಎರಡನೇ ಹಂತದಲ್ಲಿ ಕೋರ್‌ಕಮಿಟಿಯ ಪ್ರತಿ ಸದಸ್ಯರಿಗೆ 2-3 ಜಿಲ್ಲೆಗಳ ಉಸ್ತುವಾರಿ ನೀಡಲಾಗುತ್ತದೆ. 21 ಸದಸ್ಯರಿಗೆ ಜಿಲ್ಲೆಗಳನ್ನು ಹಂಚಿಕೆ ಮಾಡಲಾಗುತ್ತದೆ. ಜಿಲ್ಲಾವಾರು ಸಭೆಗಳನ್ನು ನಡೆಸಿದ ಬಳಿಕ ತಾಲೂಕುವಾರು ಸಭೆಗಳನ್ನು ನಡೆಸುತ್ತೇವೆ. ಅವರು ತಳಮಟ್ಟದ ಅಭಿಪ್ರಾಯಗಳನ್ನು ಪಡೆದುಕೊಳ್ಳಲಾಗುತ್ತದೆ. ನಂತರ ಅಭಿಪ್ರಾಯಗಳ ಆಧಾರದ ಮೇಲೆ ಪಕ್ಷದಲ್ಲಿ ಅಗತ್ಯ ಬದಲಾವಣೆಗಳನ್ನು ಬದಲಾವಣೆ ಮಾಡಲಾಗುತ್ತದೆ. ಅಲ್ಲದೇ, ಹೊಸ ಪದಾಧಿಕಾರಿಗಳು, ಜಿಲ್ಲಾ ಮತ್ತು ತಾಲೂಕು ಅಧ್ಯಕ್ಷರ ನೇಮಕ ಮಾಡಲಾಗುವುದು.

* ಸಕ್ರಿಯವಾಗಿರುವವರಿಗೆ ಈ ಬಾರಿ ಹೆಚ್ಚಿನ ಜವಾಬ್ದಾರಿ ನೀಡಲಾಗುತ್ತದೆಯೇ? 
ಕೆಲವರು ತಮ್ಮ ಹಿತಾಸಕ್ತಿಗಾಗಿ ಪಕ್ಷದ ಕಾರ್ಡ್ ಬಳಕೆ ಮಾಡಿಕೊಳ್ಳುತ್ತಾರೆ. ಅದು ಜೆಡಿಎಸ್ ಅಂತಾ ಮಾತ್ರವಲ್ಲ, ಎಲ್ಲ ಪಕ್ಷಗಳಲ್ಲಿಯೂ ಇರುತ್ತಾರೆ. ಆದರೆ, ಈ ಬಾರಿ ಪಕ್ಷಕ್ಕಾಗಿ ದುಡಿಯುವವರನ್ನು ಗುರುತಿಸುವ ಕೆಲಸ ಮಾಡಲಾಗುತ್ತಿದೆ. ಅಂತಹವರಿಗೆ ಹೆಚ್ಚಿನ ಜವಾಬ್ದಾರಿ ನೀಡಿದರೆ ಮತ್ತಷ್ಟು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಲಿದ್ದಾರೆ.ಹೀಗಾಗಿ ಅಂತಹವರನ್ನು ಗುರುತಿಸಿ ಹೊಣೆಗಾರಿಕೆ ನೀಡುವ ಕೆಲಸ  ಮಾಡಲಾಗುವುದು.

* ಜೆಡಿಎಸ್ ಬಗ್ಗೆ ಕುಟುಂಬ ರಾಜಕಾರಣ ಎಂಬ ಆರೋಪ ಸಹಜವಾಗಿಯೇ ಕೇಳಿ ಬರುತ್ತದೆಯಲ್ಲ? 
ನೋಡಿ, ಒಂದು ವಿಚಾರವನ್ನು ನೀವು ಗಮನಿಸಬೇಕು. ಅವರಿಗೆ ಲಾಭವಾಗುತ್ತದೆ ಎಂದಾಗ ಕುಟುಂಬ ನೆನಪಿಗೆ ಬರುವುದಿಲ್ಲ. ಯಾವಾಗ ತಮಗೆ ಯಾವುದೇ ಪ್ರಯೋಜನ ಇಲ್ಲ ಎಂದಾಗ ಕುಟುಂಬ ರಾಜಕಾರಣ ಎಂದು ಕಾರಣ ಮುಂದಿಟ್ಟು ಆರೋಪ ಮಾಡುತ್ತಾರೆ. ಪಕ್ಷದ ಬಿಟ್ಟವರೆಲ್ಲರನ್ನು ನೋಡಿದಾಗ ಜನತಾ ಪರಿವಾರದಲ್ಲಿ ಇದ್ದಾಗ ಯಾರಿಗೂ ಕುಟುಂಬ ನೆನಪಿಗೆ ಬರಲಿಲ್ಲ. ಪಕ್ಷ ಬಿಟ್ಟು ಹೋಗುವಾಗ ಕುಟುಂಬ ನೆನಪಿಗೆ ಬರುತ್ತದೆ. ಜೆಡಿಎಸ್‌ನಲ್ಲಿ ಮಾತ್ರನಾ ಕುಟುಂಬ ರಾಜಕಾರಣ ಇದೆಯಾ? ಬಿಜೆಪಿಯಲ್ಲಿ, ಕಾಂಗ್ರೆಸ್ನಲ್ಲಿ ಇಲ್ಲವೇ? ಆ ಎರಡು ಪಕ್ಷದಲ್ಲಿನ ಮುಖಂಡರ ಕುಟುಂಬದವರು ರಾಜಕಾರಣದಲ್ಲಿ ಇಲ್ಲವೇ? ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಆಡಳಿತದಲ್ಲಿ ನಾವೆಲ್ಲಾ ಸಚಿವರಾಗಿಲಿಲ್ಲವೇ? ಅವರ ಕುಟುಂಬದವರು ಮಾತ್ರ ಸಚಿವರಾಗಿದ್ದಾರಾ? ಬೇರೆ ಯಾವುದೇ ಆರೋಪಗಳು ಸಿಗದಿದ್ದಾಗ ಕುಟುಂಬ ರಾಜಕಾರಣ ಎಂಬ ಆರೋಪವನ್ನು ಮುಂದಿಡುತ್ತಾರೆ.

ಮೆಟ್ರೋ ಹ್ಯಾಂಡಲ್‌ ಹಿಡಿದು ಸರ್ಕಸ್‌ ಮಾಡಿದ ವಿದ್ಯಾರ್ಥಿಗೆ ₹500 ದಂಡ

* ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲು ಕಾಲ ಪಕ್ವವಾಗಿಲ್ಲ ಎಂಬ ಮಾತುಗಳು ಕೇಳಿಬಂದಿವೆ. ಇದು ಸಾಧ್ಯವೇ?
ಸಾಧ್ಯವೇ ಇಲ್ಲ. ಯಾವ ಆಧಾರದ ಮೇಲೆ ಉಚ್ಚಾಟನೆ ಮಾಡಲಾಗುತ್ತದೆ. ಸುಮ್ಮನೆ ಮಾತನಾಡಿದರೆ ಏನು ಪ್ರಯೋಜನ? ದೇವೇಗೌಡ ಅವರಿಗೆ ಇದೆಲ್ಲಾ ಹೊಸದಲ್ಲ. ಹಿಂದೆ ಜನತಾ ಪರಿವಾರ ವಿಭಜನೆಗಳಾದಾಗ ಎಷ್ಟು ದೊಡ್ಡ ಹೋರಾಟಗಳನ್ನು ಮಾಡಿ ಪಕ್ಷವನ್ನು ಉಳಿಸಿದ್ದಾರೆ. ಗಟ್ಟಿಯಾಗಿ ನೆಲೆಯೂರಲು ಶ್ರಮಿಸಿದ್ದಾರೆ. ರಾಜ್ಯದಲ್ಲಿ ಈಗ ಒಬ್ಬ ವ್ಯಕ್ತಿ ಹೇಳಿಕೆ ನೀಡಿದ್ದಾರೆ. ರಾಷ್ಟ್ರಮಟ್ಟದಲ್ಲಿ ಇಂತಹ ಹಲವು ನಿದರ್ಶನಗಳನ್ನು ಅವರು ಎದುರಿಸಿಕೊಂಡುಬಂದಿದ್ದಾರೆ.

Follow Us:
Download App:
  • android
  • ios