ಹುಬ್ಬಳ್ಳಿ[ಜ.20]: ರಾಷ್ಟ್ರೀಯ ಪಲ್ಸ್‌ ಪೋಲಿಯೋ ಲಸಿಕೆ ಹಾಕುವ ಅಭಿಯಾನಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹುಬ್ಬಳ್ಳಿಯಲ್ಲಿ ಭಾನುವಾರ ಚಾಲನೆ ನೀಡಿದರು.

ಭಾನುವಾರ ಬೆಳಗ್ಗೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಮನೆಗೆ ಉಪಾಹಾರಕ್ಕೆ ಆಗಮಿಸಿದ ವೇಳೆ, ಜೋಶಿ ಮನೆ ಎದುರು ಮೂವರು ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದರು. 2 ಗಂಡು ಹಾಗೂ ಒಂದು ಹೆಣ್ಣು ಮಗುವಿಗೆ ಪೋಲಿಯೋ ಲಸಿಕೆ ಹಾಕಿದ ಅಮಿತ್‌ ಶಾ, ಮಕ್ಕಳನ್ನು ಮುದ್ದು ಮಾಡಿದರು. ಶರೀಫಾ ಕಳ್ಳಿಭಾವಿ, ಶಕುಂತಲಾ ಸೊಂಳಕೆ, ಮರಿಯಮ್ಮ ಬಳ್ಳಾರಿ ಎನ್ನುವ ತಾಯಂದಿರ ಮಕ್ಕಳಿಗೆ ಅಮಿತ್‌ ಶಾ ಪೊಲಿಯೋ ಲಸಿಕೆ ಹಾಕಿದರು.

ಸಿಎಎ ವಿರುದ್ಧ ಕಾನೂನು ಸಮರಕ್ಕೆ 320 ಕ್ವಿಂಟಲ್‌ ಭತ್ತ ಕೊಟ್ಟ ರೈತರು!

ಉಪಾಹಾರ:

ಬಳಿಕ ಪ್ರಹ್ಲಾದ ಜೋಶಿ ಅವರ ಕುಟುಂಬಸ್ಥರು ಆರತಿ ಮಾಡಿ ಶಾ ಅವರನ್ನು ಮನೆಗೆ ಸ್ವಾಗತಿಸಿದರು. ಬಳಿಕ ಜೋಶಿ ಅವರ ಮನೆಯಲ್ಲಿ ಉಪಾಹಾರ ಸೇವಿಸಿದರು.

ಉಪಾಹಾರ ಮುಗಿಸಿ ಹೊರಬಂದ ಶಾ ನೋಡಲು ಸೇರಿದ್ದ ಜನರತ್ತ ಕೈ ಬೀಸಿ ಶುಭ ಹಾರೈಸಿದರು. ಅಲ್ಲದೇ, ಕಾರ್ಯಕರ್ತರನ್ನು ಭೇಟಿ ಮಾಡಿದರು. ಕಾರ್ಯಕರ್ತರು ಬಿಜೆಪಿ ಹಾಗೂ ಶಾ ಪರ ಜಯಘೋಷ ಮಾಡಿದರು. ಇದೇ ವೇಳೆ ರೈತಸಂಘ ಮತ್ತು ರೈತ ಸೇನೆಯ ಕಾರ್ಯಕರ್ತರು ಶಾ ಅವರನ್ನು ಸನ್ಮಾನಿಸಿದರು. ನಂತರ ಹೋಟೆಲ್‌ವೊಂದರ ಮಾಲೀಕ ವಿಜಯ್‌ ಬಾಕಳೆ ತಮ್ಮ ಮಕ್ಕಳೊಂದಿಗೆ ಆಗಮಿಸಿ ಅಮಿತ್‌ ಶಾ ಅವರಿಗೆ ಸಿದ್ಧಾರೂಢ ಸ್ವಾಮೀಜಿ ಭಾವಚಿತ್ರ ನೀಡಿ ಗೌರವಿಸಿದರು.

ರಾಜ್ಯಗಳು ಸಿಎಎ ಜಾರಿ ಮಾಡಲೇಬೇಕು: ಕಾಂಗ್ರೆಸ್ ನಾಯಕ

ಈ ವೇಳೆ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ ಕುಮಾರ ಕಟೀಲ, ಡಿಸಿಎಂ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ನಂದಕುಮಾರ, ಸುಧೀರ ಸರಾಫ್‌, ನಾಗೇಶ ಕಲಬುರ್ಗಿ, ಸಂತೋಷ ಚವ್ಹಾಣ, ಮಹೇಂದ್ರ ಕೌತಾಳ ಸೇರಿದಂತೆ ಸ್ಥಳೀಯ ಬಿಜೆಪಿ ನಾಯಕರು ಉಪಸ್ಥಿತರಿದ್ದರು. ಬಳಿಕ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ತೆರಳಿ, ಅಲ್ಲಿಂದ ದೆಹಲಿಗೆ ವಿಶೇಷ ವಿಮಾನದ ಮೂಲಕ ತೆರಳಿದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಾಥ್‌ ನೀಡಿದರು.