ವಕ್ಫ್‌ ವಿವಾದ ಚುನಾವಣೆ ಮೇಲೆ ಪರಿಣಾಮ ಬೀರೋಕೆ ಸಾಧ್ಯವಿಲ್ಲ: ಬಿಜೆಪಿ ವಿರುದ್ಧ ಹರಿಹಾಯ್ದ ವಿನಯ್ ಕುಲಕರ್ಣಿ

ವಕ್ಫ್‌ ವಿವಾದ ಚುನಾವಣೆ ಮೇಲೆ ಪರಿಣಾಮ ಬೀರೋಕೆ ಸಾಧ್ಯವಿಲ್ಲ. ನೋಟಿಸ್ ಹಿಂಪಡೆಯುವ ಕೆಲಸ ಈಗಾಗಲೇ ಆಗಿದೆ. ನಾವೂ ರೈತರೇ, ರೈತರಿಗೆ ಅನ್ಯಾಯ ಆಗಲು ಬಿಡಲ್ಲ. ನಮ್ಮ ಪಕ್ಷ ಕೂಡಾ ಬಿಡಲ್ಲ ಎಂದ ಮಾಜಿ ಸಚಿವ ವಿನಯ್ ಕುಲಕರ್ಣಿ 
 

Former Minister Vinay Kulkarni Slams Karnataka BJP Leaders on Waqf dispute grg

ಹಾವೇರಿ(ನ.03):  ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನೇಹಾ ಹತ್ಯೆ ಕೇಸ್ ಬಳಸಿಕೊಂಡರು. ಈಗ ವಕ್ಫ್‌ ವಿಷಯ ಬಳಿಸಿಕೊಂಡು ಚುನಾವಣೆ ಎದುರಿಸ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಮಾಜಿ ಸಚಿವ ವಿನಯ್ ಕುಲಕರ್ಣಿ ಕಿಡಿ ಕಾರಿದ್ದಾರೆ. 

ಇಂದು(ಭಾನುವಾರ) ಜಿಲ್ಲೆಯ ಶಿಗ್ಗಾವಿ ತಾಲೂಕಿನ‌ ಬಂಕಾಪುರ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಚಿವ ವಿನಯ್ ಕುಲಕರ್ಣಿ, ವಕ್ಫ್‌ ವಿವಾದ ಚುನಾವಣೆ ಮೇಲೆ ಪರಿಣಾಮ ಬೀರೋಕೆ ಸಾಧ್ಯವಿಲ್ಲ. ನೋಟಿಸ್ಹಿಂ ಪಡೆಯುವ ಕೆಲಸ ಈಗಾಗಲೇ ಆಗಿದೆ. ನಾವೂ ರೈತರೇ, ರೈತರಿಗೆ ಅನ್ಯಾಯ ಆಗಲು ಬಿಡಲ್ಲ. ನಮ್ಮ ಪಕ್ಷ ಕೂಡಾ ಬಿಡಲ್ಲ ಎಂದು ತಿಳಿಸಿದ್ದಾರೆ. 

ಮುತ್ತಗಿ ತಪ್ಪೊಪ್ಪಿಗೆ ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿಗೆ ಸಂಕಷ್ಟ?: ಕುತೂಹಲ ಕೆರಳಿಸಿದ ಯೋಗೀಶಗೌಡ ಕೊಲೆ ಕೇಸ್‌!

ಬಿಜೆಪಿಯವರು ಪ್ರತಿಭಟನೆ ಮಾಡ್ತಾರೆ. ಯಾಕಂದ್ರೆ ಅವರಿಗೆ ಚುನಾವಣೆ ಬಂದ ಸಂದರ್ಭದಲ್ಲಿ ಯಾವುದೇ ಅಸ್ತ್ರ ಇರಲ್ಲ. ಅಭಿವೃದ್ಧಿ ಬಗ್ಗೆ ಹೇಳಿಕೊಳ್ಳಲು ಅವರಿಗೆ ಆಗಲ್ಲ. ಬಿಜೆಪಿಯವರಿಗೆ ಬೇರೆ ಏನೂ‌ ಇಲ್ಲ. ಕಳೆದ ಪಾರ್ಲಿಮೆಂಟ್ ಚುನಾವಣೆಯಲ್ಲಿ ನೇಹಾ ಹಿರೇಮಠ ಕೇಸ್ ಬಳಸಿಕೊಂಡರು. ಇಲ್ಲದಿದ್ದರೆ ನಮ್ಮ ಅಸೂಟಿ ಗೆದ್ದು ಎಂಪಿ ಆಗ್ತಿದ್ರು ಎಂದು ಬಿಜೆಪಿಗರ ವಿರುದ್ಧ ಹರಿಹಾಯ್ದಿದ್ದಾರೆ. 

ಈಗ ವಕ್ಫ್‌ ಅಂತ ನೋಟಿಸ್ ಬಂದಿದ್ದರೆ ಕ್ಲಿಯರ್ ಮಾಡಿಸೋ ಕೆಲಸ ಮಾಡಿಸ್ತೀವಿ. ಇದನ್ನು ನಮ್ಮ ಸರ್ಕಾರ ಮಾಡಿಲ್ಲ. ಅದು ಹಿಂದಿನ ಸರ್ಕಾರದ ಅವಧಿಯಲ್ಲಿ ಆಗಿರೋದು. ಗೆಜೆಟೆಡ್ ನೊಟಿಫಿಕೇಶನ್ ಕ್ಯಾನ್ಸಲ್ ಮಾಡೋದಾಗಿಯೂ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios