Asianet Suvarna News Asianet Suvarna News

ನೇಹಾ ಹತ್ಯೆ ಪ್ರಕರಣ: ಸಿಎಂ, ಗೃಹ ಸಚಿವರ ಹೇಳಿಕೆ ಮುಸ್ಲಿಂ ತುಷ್ಟೀಕರಣದ ಪರಾಕಾಷ್ಠೆ -ಪ್ರಲ್ಹಾದ್ ಜೋಶಿ ವಾಗ್ದಾಳಿ

ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ದೇಶ ಎಲ್ಲ ಕ್ಷೇತ್ರಗಳಲ್ಲೂ ಬದಲಾವಣೆ ಆಗಿದೆ. ಪ್ರಧಾನಿ ಮೋದಿ ಆಡಳಿತಾವಧಿಯಲ್ಲಿ ಭಾರತ ಸುರಕ್ಷತೆ ಜೊತೆ ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಿದೆ ಎಂದು ಕೇಂದ್ರ ಸಚಿವ, ಧಾರವಾಡ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್ ಜೋಶಿ ನುಡಿದರು.

Dharwad Lok sabha constituency bjp candidate Pralhad Joshi speech at dharwad rav
Author
First Published Apr 21, 2024, 8:54 PM IST

ಹುಬ್ಬಳ್ಳಿ  (ಏ.21): ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ದೇಶ ಎಲ್ಲ ಕ್ಷೇತ್ರಗಳಲ್ಲೂ ಬದಲಾವಣೆ ಆಗಿದೆ. ಪ್ರಧಾನಿ ಮೋದಿ ಆಡಳಿತಾವಧಿಯಲ್ಲಿ ಭಾರತ ಸುರಕ್ಷತೆ ಜೊತೆ ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಿದೆ ಎಂದು ಕೇಂದ್ರ ಸಚಿವ, ಧಾರವಾಡ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್ ಜೋಶಿ ನುಡಿದರು.

ಇಂದು ಧಾರವಾಡದಲ್ಲಿ ನಡೆದ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಧ್ವಜ ಬಿಟ್ಟು ರಾಹುಲ್ ಗಾಂಧಿ(Rahul gandhi) ಮುಸ್ಲಿಂ ಲೀಗ್ ಧ್ವಜದ ಜೊತೆಗೆ ಹೋಗಿ ನಾಮಿನೇಷನ್ ಮಾಡಿದ್ರು ಇದು ಕಾಂಗ್ರೆಸ್ ಪಕ್ಷದ ಮುಸ್ಲಿಂ ತುಷ್ಟೀಕರಣ ಪರಾಕಾಷ್ಠೆ ತೋರಿಸಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮುಸ್ಲಿಂ ತುಷ್ಟೀಕರಣದ ಪರಿಣಾಮವಾಗಿ ರಾಜ್ಯಾದ್ಯಂತ ಹಿಂದೂಗಳ ಮೇಲೆ ಹಲ್ಲೆ, ಅತ್ಯಾಚಾರ, ಕೊಲೆಯಂತಹ ಪ್ರಕರಣಗಳು ಹೆಚ್ಚಾಗಿವೆ. ಇಂಥ ಪ್ರಕರಣದಲ್ಲಿ ಅಪರಾಧಿಗಳನ್ನು ಶಿಕ್ಷಿಸುವ ಬದಲು ಓಟುಬ್ಯಾಂಕ್‌ಗಾಗಿ ರಕ್ಷಿಸುವ ಕೆಲಸ ಮಾಡುತ್ತಿದೆ. ಇದು ರಾಜ್ಯವಷ್ಟೇ ದೇಶದ ಭದ್ರತೆಗೂ ಅಪಾಯಕಾರಿಯಾಗಿದೆ ಎಂದರು.

ಹುಬ್ಬಳ್ಳಿಯಲ್ಲಿ ಹಿಂದೂ ಯುವತಿ ಹತ್ಯೆ ಪ್ರಕರಣ; ಕಿಮ್ಸ್ ಶವಾಗಾರಕ್ಕೆ  ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭೇಟಿ

ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ, ಗೃಹಸಚಿವರು ನಡೆದುಕೊಂಡಿರುವ ರೀತಿ, ಅವರ ಹೇಳಿಕೆಗಳು ಆಕಸ್ಮಿಕವಲ್ಲ. ಮುಸ್ಲಿಂ ತುಷ್ಟೀಕರಣದ ಒಂದು ಭಾಗ. ಒಬ್ಬ ಹೆಣ್ಣು ಮಗಳು ಬರ್ಬರವಾಗಿ ಹಾಡುಹಗಲೇ ಹತ್ಯೆಯಾದ ಬಳಿಕ ರಾಜ್ಯದ ಗೃಹ ಸಚಿವ, ಮುಖ್ಯಮಂತ್ರಿಯಾದವರ ಹೇಳಿಕೆಗಳು ಅಸಹ್ಯ ಹುಟ್ಟಿಸುವಂತಿದೆ. ಇವರಿಂದ ನೇಹಾ ಹತ್ಯೆಗೆ ನ್ಯಾಯ ಸಿಗುತ್ತದೆ ಎಂಬುದು ದೂರದ ಮಾತು. ಮಹಿಳೆಯರು, ದೇಶದ ಭದ್ರತೆಗೆ ಬಿಜೆಪಿ ಗೆಲ್ಲಬೇಕು. ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ಅವಶ್ಯಕವಾಗಿದೆ. ನನ್ನ ಅಧಿಕಾರಾವಧಿಯಲ್ಲಿ ಧಾರವಾಡ ಕ್ಷೇತ್ರ ಸಾಕಾಷ್ಟು ಅಭಿವೃದ್ಧಿ ಹೊಂದಿದೆ. ಬರುವ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿ ಲೇವಲ್ ಮತ್ತೊಂದು ಹಂತಕ್ಕೆ ಒಯ್ಯುವೆ ಎಂದು ಭರವಸೆ ನೀಡಿದರು.

 

ಹತಾಶೆಗೊಂಡ ಕಾಂಗ್ರೆಸ್‌ನಿಂದ ಕೀಳುಮಟ್ಟದ ರಾಜಕಾರಣ: ಪ್ರಲ್ಹಾದ್‌ ಜೋಶಿ

ಹುಬ್ಬಳ್ಳಿಯ ಎಂ.ಆರ್. ಸಾಖರೆ ಶಾಲಾ ಆವರಣದಲ್ಲಿ ನಡೆದ ಸಮಾವೇಶದಲ್ಲಿ ಜೆಪಿ ನಡ್ಡಾ, ಶಾಸಕರಾದ ಅರವಿಂದ ಬೆಲ್ಲದ್, ಮಹೇಶ್ ಟೆಂಗಿನಕಾಯಿ, ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್, ಮೇಯರ್ ವೀಣಾ, ಸೀಮಾ ಮಸೂತಿ, ಅಮೃತ ದೇಸಾಯಿ ಉಪಸ್ಥಿತರಿದ್ದರು. ಸಮಾವೇಶ ಆರಂಭಕ್ಕೂ ಮುನ್ನ ಹತ್ಯೆಯಾದ ನೇಹಾ ಹಿರೇಮಠಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Follow Us:
Download App:
  • android
  • ios