Asianet Suvarna News Asianet Suvarna News

ದಿಲ್ಲೀಲೇ ಎಂಎಲ್ಸಿ ಅಭ್ಯರ್ಥಿಗಳ ಆಯ್ಕೆ ಮುಗಿಸಲು ಕಾಂಗ್ರೆಸ್‌ ತಂತ್ರ

ಜೂ.13ರಂದು ವಿಧಾನಸಭೆಯಿಂದ ವಿಧಾನಪರಿಷತ್ತಿನ 11 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಸ್ಥಾನ ಬಲದ ಆಧಾರದ ಮೇಲೆ ಕಾಂಗ್ರೆಸ್‌ ಪಕ್ಷ ಏಳು ಮಂದಿಯನ್ನು ಆಯ್ಕೆ ಮಾಡಲು ಅವಕಾಶವಿದೆ. ಆದರೆ, ಆಕಾಂಕ್ಷಿಗಳ ಸಂಖ್ಯೆ ಮಾತ್ರ ಹಲವು ಡಜನ್‌ ದಾಟಿದೆ.

Congress Strategy to final Selection of Karnataka MLC Candidates in Delhi grg
Author
First Published May 25, 2024, 4:22 AM IST

ಬೆಂಗಳೂರು(ಮೇ.25): ವಿಧಾನ ಸಭೆಯಿಂದ ವಿಧಾನಪರಿಷತ್ತಿನ ಚುನಾವಣೆಗೆ ಕಣಕ್ಕಿಳಿಯಲು ಆಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಕಾಂಗ್ರೆಸ್‌ ಹೈಕಮಾಂಡ್‌ ಸಮ್ಮುಖದಲ್ಲೇ ಅರ್ಹರ ಆಯ್ಕೆ ಮಾಡಲು ನಿರ್ಧರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮೇ 28 ಅಥವಾ 29ರಂದು ದೆಹಲಿಗೆ ತೆರಳಲಿದ್ದಾರೆ.

ಜೂ.13ರಂದು ವಿಧಾನಸಭೆಯಿಂದ ವಿಧಾನಪರಿಷತ್ತಿನ 11 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಸ್ಥಾನ ಬಲದ ಆಧಾರದ ಮೇಲೆ ಕಾಂಗ್ರೆಸ್‌ ಪಕ್ಷ ಏಳು ಮಂದಿಯನ್ನು ಆಯ್ಕೆ ಮಾಡಲು ಅವಕಾಶವಿದೆ. ಆದರೆ, ಆಕಾಂಕ್ಷಿಗಳ ಸಂಖ್ಯೆ ಮಾತ್ರ ಹಲವು ಡಜನ್‌ ದಾಟಿದೆ.

ಕನ್ನಡ ಓದಲೂ ಬಾರದ ಶಿಕ್ಷಣಮಂತ್ರಿಯಿಂದ ಅಭಿವೃದ್ಧಿ ಅಸಾಧ್ಯ : ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿ ಕಿಡಿ

ನಿತ್ಯ ಹತ್ತಾರು ಮಂದಿ ಆಕಾಂಕ್ಷಿಗಳು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ತೀವ್ರ ಒತ್ತಡ ನಿರ್ಮಾಣ ಮಾಡತೊಡಗಿದ್ದಾರೆ. ಹೀಗಾಗಿ, ಅರ್ಹರ ಆಯ್ಕೆ ತಲೆನೋವಾಗಿ ಪರಿಣಮಿಸಿರುವುದರಿಂದ ದೆಹಲಿಗೆ ತೆರಳಿ ಅಲ್ಲಿಯೇ ಹೈಕಮಾಂಡ್‌ ಸಮ್ಮುಖದಲ್ಲಿ ಅರ್ಹರ ಆಯ್ಕೆ ಮಾಡಲು ಉಭಯ ನಾಯಕರು ನಿರ್ಧರಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈ ನಡುವೆ ರಾಜ್ಯ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲಾ ಅವರು ಮೇ 27ರ ತಡರಾತ್ರಿ ಅಥವಾ 28ಕ್ಕೆ ಬೆಂಗಳೂರಿಗೆ ಆಗಮಿಸುವ ಸಾಧ್ಯತೆಯಿದೆ. ಆದರೆ, ಸುರ್ಜೇವಾಲಾ ಆಗಮಿಸುವುದು ಉತ್ತರ ಭಾರತದಲ್ಲಿ ನಡೆದಿರುವ ಕೊನೆಯ ಹಂತದ ಚುನಾವಣೆ (ಮೇ 25)ರ ನಂತರ ತೀರ್ಮಾನವಾಗಲಿದೆ.

ಒಂದು ವೇಳೆ ಅವರು ಪೂರ್ವ ನಿರ್ಧರಿಸಿದಂತೆ ಮೇ 27 ಅಥವಾ 28ಕ್ಕೆ ಆಗಮಿಸಿದರೂ ಅವರ ನೇತೃತ್ವದಲ್ಲಿ ಪೂರ್ವ ಭಾವಿಯಾಗಿ ಒಂದು ಸಭೆ ನಡೆಯುತ್ತದೆಯೇ ಹೊರತು ಯಾವುದೇ ನಿರ್ಧಾರವಾಗುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಮೇ 28 ಅಥವಾ 29 ರಂದು ದೆಹಲಿಗೆ ತೆರಳಿ ಹೈಕಮಾಂಡ್‌ನೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ.

ವಿಧಾನ ಪರಿಷತ್‌ ಚುನಾವಣೆ 2024: ಸಣ್ಣ ಜಾತಿಗೆ ಮೇಲ್ಮನೆ 3 ಸ್ಥಾನ, ಬಿಜೆಪಿ ಒಲವು

ಕೆಲ ಷರತ್ತುಗಳನ್ನು ವಿಧಿಸುವ ಸಾಧ್ಯತೆ!

ವಿಧಾನಸಭೆಯಿಂದ ವಿಧಾನಪರಿಷತ್ತಿನ ಚುನಾವಣೆಗೆ ಕಾಂಗ್ರೆಸ್ ಪಕ್ಷದಲ್ಲಿ ಆಕಾಂಕ್ಷಿಗಳ ಸಂಖ್ಯೆ ವಿಪರೀತ ಹೆಚ್ಚಳವಾಗಿರುವುದರಿಂದ ಜೊಳ್ಳು ಕಾಳುಗಳನ್ನು ಜರಡಿ ಹಿಡಿಯಲು ಕೆಲ ಷರತ್ತುಗಳನ್ನು ವಿಧಿಸುವ ದಿಸೆಯಲ್ಲಿ ಕಾಂಗ್ರೆಸ್‌ ನಾಯಕತ್ವ ಚಿಂತಿಸುತ್ತಿದೆ.

ಒಂದು ಮೂಲದ ಪ್ರಕಾರ ಕಾಂಗ್ರೆಸ್‌ ಆಯ್ಕೆ ಮಾಡಲು ಅವಕಾಶವಿರುವ ಏಳು ಸ್ಥಾನಗಳಿಗೆ ಸುಮಾರು 75 ಆಕಾಂಕ್ಷಿಗಳಿದ್ದಾರೆ. ಈ ಸಂಖ್ಯೆಯನ್ನು ಕೆಲ ಷರತ್ತುಗಳನ್ನು ರೂಪಿಸಿಕೊಂಡು ಕಡಿಮೆ ಮಾಡುವ ಉದ್ದೇಶ ನಾಯಕತ್ವದ್ದು.
ಈ ಪೈಕಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಜಿತರಾದವರಿಗೆ ವಿಧಾನಪರಿಷತ್ತಿಗೆ ಅವಕಾಶ ನೀಡಬಾರದು ಎಂಬುದು ಸೇರಿದಂತೆ. ಪಕ್ಷ ಅಧಿಕಾರದಲ್ಲಿ ಇರುವುದರಿಂದ ಹಲವಾರು ಮಂದಿ ಪರಾಜಿತ ಅಭ್ಯರ್ಥಿಗಳು ವಿಧಾನಪರಿಷತ್ತಿಗೆ ತಮ್ಮನ್ನು ಆಯ್ಕೆ ಮಾಡುವಂತೆ ತೀವ್ರ ಒತ್ತಡ ನಿರ್ಮಾಣ ಮಾಡುತ್ತಿದೆ. ಇಂತಹವರ ಸಂಖ್ಯೆ 15ಕ್ಕಿಂತ ಹೆಚ್ಚಿದೆ. ಹೀಗಾಗಿ ಈ ಷರತ್ತು ವಿಧಿಸುವ ಚಿಂತನೆ ನಡೆದಿದೆ ಎನ್ನುತ್ತವೆ ಮೂಲಗಳು. ಇದಲ್ಲದೆ, ಪಕ್ಷದ ಸ್ಥಾನ ಹೊಂದಿರುವವರು, ಇತ್ತೀಚೆಗಷ್ಟೇ ಪಕ್ಷ ಸೇರ್ಪಡೆಯಾದವರು ಸೇರಿದಂತೆ ಹಲವು ಷರತ್ತು ವಿಧಿಸುವ ಕುರಿತು ಚರ್ಚೆ ನಡೆದಿದೆ ಎಂದು ಮೂಲಗಳು ಹೇಳಿವೆ.

Latest Videos
Follow Us:
Download App:
  • android
  • ios