Asianet Suvarna News Asianet Suvarna News

ಶಿವಾಜಿ ಪುತ್ಥಳಿ ಪ್ರತಿಷ್ಠಾಪಿಸಿ ಮರಾಠಿಯಲ್ಲಿ ಘರ್ಜಿಸಿದ ಲಕ್ಷ್ಮೀ ಹೆಬ್ಬಾಳ್ಕರ್

ಮೊದಲೇ ಬೆಳಗಾವಿಯಲ್ಲಿ ಮರಾಠಿ ಹಾಗೂ ಕನ್ನಡಗರ ನಡುವೆ ಒಂದಿಲ್ಲೊಂದು ಗಲಾಟೆಗಳು ನಡೆಯುತ್ತಿವೆ. ಮರಾಠಿಗರು ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕಂತ್ತಿದ್ದಾರೆ. ಇದರ ಮಧ್ಯೆ ಕಾಂಗ್ರೆಸ್ ಶಾಸಕಿ ಬೆಳಗಾವಿ ಗ್ರಾಮೀಣ ಕನ್ನಡ-ಮರಾಠಿ ಭಾಷಿಕರ ಸಂಗಮ ಎಂದು ಬಣ್ಣಿಸಿದ್ದಾರೆ.

Congress MLA Lakshmi hebbalkar Speech In marathi In Belagavi
Author
Bengaluru, First Published Jan 27, 2020, 8:17 PM IST

ಬೆಳಗಾವಿ, [ಜ.27]: ಬೆಳಗಾವಿ ಜಿಲ್ಲೆಯ ಕೆಲ ರಾಜಕೀಯ ನಾಯಕರ ನಡೆಯೇ ತಿಳಿಯುತ್ತಿಲ್ಲ. ಬೆಳಗಾವಿ ಗ್ರಾಮೀಣ ಕ್ಷೇತ್ರ ಮರಾಠಿಗರ ಸ್ವತ್ತು ಎಂದು ರಮೇಶ್ ಜಾರಕಿಹೊಳಿ ಹೇಳಿದ್ರೆ.

 ಮತ್ತೊಂದೆಡೆ ಲಕ್ಷ್ಮೀ ಹೆಬ್ಬಾಳ್ಕರ್ ಈ ಕ್ಷೇತ್ರ ಕನ್ನಡ ಮತ್ತು ಮರಾಠಿ ಭಾಷಿಕರ ಸಂಗಮ ಎಂದು ಬಣ್ಣಿಸಿದ್ಧಾರೆ. ಈ ಮೂಲಕ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

ಮರಾಠಿ ಮಾತನಾಡಿದ್ದನ್ನು ಕೇಳಿದ್ದಕ್ಕೆ ಹೆಬ್ಬಾಳ್ಕರ್ ಪುತ್ರನಿಂದ ಯುವಕನಿಗೆ ಧಮ್ಕಿ!

ಇಂದು [ಸೋಮವಾರ] ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಶಿವಾಜಿ ಪುತ್ಥಳಿ ಪ್ರತಿಷ್ಠಾಪನೆ ಮಾಡಿ ಮರಾಠಿಯಲ್ಲಿ ಭಾಷಣ ಮಾಡಿದ್ದಾರೆ. ಈ ಮೂಲಕ  ಪರಭಾಷೆ ಅಭಿಮಾನ ತೋರ್ಪಡಿಸಿದ್ದಾರೆ. 

ರಾಜಕಾರಣಕ್ಕಾಗಿ ಶಿವಾಜಿ ಪುತ್ಥಳಿ ಸ್ಥಾಪಿಸುತ್ತಿಲ್ಲ. ಸಂಸ್ಕೃತಿ ಉಳಿವಿಗೆ ಮೂರ್ತಿ ಸ್ಥಾಪನೆ ಮಾಡುತ್ತಿದ್ದೇನೆ. ಕೇವಲ ಮೂರ್ತಿ ಪ್ರತಿಷ್ಠಾಪಿಸಿದರೆ ಸಾಲದು, ಸಂಪ್ರದಾಯ ಸಾರಬೇಕು ಎಂದರು.

ರಾಜಕಾರಣಿಗಳನ್ನು ಸ್ವಾರ್ಥಿಗಳೆನ್ನುತ್ತಾರೆ. ಆದರೆ, ಪ್ರತಿಯೊಂದು ಗ್ರಾಮದಲ್ಲೂ ಹಣ ಕೊಟ್ಟು ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿದ್ದೇನೆ. ಲಕ್ಷ್ಮೀ ಹೆಬ್ಬಾಳ್ಕರ್​ಗೆ ರಾಣಿ ಚೆನ್ನಮ್ಮ ಮತ್ತು ಜೀಜಾ ಮಾತಾ ಅಂತಾರೆ. ಇಚ್ಛಾಶಕ್ತಿ ಇಟ್ಟುಕೊಂಡು ರಾಜಕೀಯದಲ್ಲಿ ಕೆಲಸ ಮಾಡುತ್ತೇನೆ ಹೇಳಿದರು.

ಸರ್ಕಾರಕ್ಕೆ 15 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದ್ರೆ ಸರ್ಕಾರ  ಮೂರೂವರೆ ಕೋಟೆಯನ್ನು ಬಿಡುಗಡೆ ಮಾಡಿದೆ. ಸರ್ಕಾರ ಅಸ್ಥಿರವಾಗಿದ್ದಾಗಲೇ ಮೂರೂವರೆ ಕೋಟಿ‌ ಅನುದಾನ ತಂದಿದ್ದೇನೆ. ಶಾಸಕಿಯಾದ 18 ತಿಂಗಳಲ್ಲಿ 12 ಕೋಟಿ ರೂ ಅನುದಾನ ತಂದಿದ್ದೇನೆ ಎಂದು ತಮ್ ಕೆಲಸದ ಬಗ್ಗೆ ಹೇಳಿಕೊಂಡರು.

ಇಷ್ಟೆಲ್ಲಾ ಮರಾಠಿಯಲ್ಲಿ ಮಾತನಾಡಿರುವ ಲಕ್ಷ್ಮೀ ಹೆಬ್ಬಾಳ್ಕರ್, ಮರಾಠಿ ಭಾಷಿಕರ ಮತ ಓಲೈಕೆಗಾಗಿ ಮುಂದಾಗಿದಂತೂ ಸತ್ಯ. 

Follow Us:
Download App:
  • android
  • ios