Asianet Suvarna News Asianet Suvarna News

'ರೇಪ್ ಕೇಸ್​​ ಬಗ್ಗೆ ಮಾತಾಡದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೆಣ್ಣಲ್ಲವೇ?'

* ಮೈಸೂರು ಗ್ಯಾಂಗ್‌ರೇಪ್ ಪ್ರಕರಣ
* ಕೇಂದ್ರ ಸಚಿವೆ  ಶೋಭಾ ಕರಂದ್ಲಾಜೆ ವಿರುದ್ಧ ಕಾಂಗ್ರೆಸ್ ನಾಯಕ ಕಿಡಿ
* ರೇಪ್ ಕೇಸ್​​ ಬಗ್ಗೆ ಮಾತಾಡದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೆಣ್ಣಲ್ಲವೇ? ಎಂದು ಪ್ರಶ್ನೆ

Congress Leader HM Revanna Hits out at Shobha Karandlaje Over Mysuru gangrape Case rbj
Author
Bengaluru, First Published Aug 28, 2021, 6:27 PM IST
  • Facebook
  • Twitter
  • Whatsapp

ಬೆಂಗಳೂರು, (ಆ.28): ಮೈಸೂರು ಗ್ಯಾಂಗ್‌ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಲು ನಿರಾಕರಿಸಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಕಾಂಗ್ರೆಸ್ ಮುಖಂಡ ಎಚ್‌ಎಂ ರೇವಣ್ಣ ಕಿಡಿಕಾರಿದ್ದಾರೆ.

ಇಂದು (ಆ.28) ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಸತ್ಯಶೋಧನಾ ಸಮಿತಿ ಸದಸ್ಯ ಹಚ್.ಎಂ.ರೇವಣ್ಣ, ಬಿಜೆಪಿಗರು ಒಬ್ಬೊಬ್ಬರು ಒಂದೊಂದು ರೀತಿ ಮಾತಾಡ್ತಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಈಗ ಕೆಂದ್ರ ಸಚಿವರಾಗಿದ್ದು ಮಾತನಾಡಲು ಹಿಂದೆ ಮುಂದೆ ನೋಡ್ತಿದ್ದಾರೆ. ಶೋಭಾ ಕರಂದ್ಲಾಜೆ ನಾನು ಈ ಪ್ರಕರಣದ ಬಗ್ಗೆ ಮಾತಾಡಲ್ಲ ಅಂತಾರೆ ಅವರು ಸಚಿವೆಯಾದರೂ ಹೆಣ್ಣು ಹೆಣ್ಣೆ ಅಲ್ವಾ? ಎಂದು ಪ್ರಶ್ನಿಸಿದರು.

ಮೈಸೂರು ಗ್ಯಾಂಗ್‌ಪೇರ್ ಆರೋಪಿಗಳು ಅರೆಸ್ಟ್: ಡಿಕೆಶಿ ಹೇಳಿದ್ದು ಹೀಗೆ

 ಪ್ರಕರಣ ಕುರಿತಂತೆ ನಾವು ನಿನ್ನೆ ಮೈಸೂರಿಗೆ ತೆರಳಿ ಮಾಹಿತಿ ಕಲೆ ಹಾಕಿದ್ದು, ಅಧ್ಯಕ್ಷರಿಗೆ ವಿಸ್ತೃತ ವರದಿ ನೀಡಲಿದ್ದೇವೆ. ಪ್ರಕರಣದ ಮೇಲ್ನೋಟಕ್ಕೆ ಮೈಸೂರು ಪೊಲೀಸ್ ಕಮಿಷನರ್​ ಬೇಜವಾಬ್ದಾರಿ ಕಾಣ್ತಿದೆ ಎಂದು ಆರೋಪಿಸಿದ್ದಾರೆ.

ವೈದ್ಯರು ಅತ್ಯಾಚಾರ ನಡೆದಿದೆ ಅಂತಾರೆ. ಆದ್ರೆ, ಪೊಲೀಸರು ದರೋಡೆ ಪ್ರಕರಣ ದಾಖಲಿಸಲು ಪ್ರಯತ್ನ ಮಾಡಿದ್ದಾರೆ. ಆ ಯುವಕನದು ಒಂದು ಕೇಸ್ ಮಾಡಿದ್ರೆ, ಯುವತಿಯದ್ದೇ ಪ್ರತ್ಯೇಕ ಕೇಸ್​ ದಾಖಲಾಗಿದೆ. ತಮ್ಮ ಸರ್ಕಾರದ ಮೇಲೆ ಕೆಟ್ಟ ಹೆಸರು ಬರಬಾರದು ಎಂದು ಸರ್ಕಾರ ಪೊಲೀಸರ ಮೇಲೆ ಒತ್ತಡ ಹಾಕಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
 

Follow Us:
Download App:
  • android
  • ios