Asianet Suvarna News Asianet Suvarna News

ಖಾತೆ ಆಯ್ತು ಈಗ ನೂತನ ಸಚಿವರಿಂದ ಮತ್ತೊಂದು ಕ್ಯಾತೆ

ಸಂಪುಟ ವಿಸ್ತರಣೆಯಾಗಿ ಒಂದು ವಾರವಾಯ್ತು.. ನೂತನ ಸಚಿವರಿಗೆ ಖಾತೆ ಹಂಚಿಕೆಯಾಗಿ ನಾಲ್ಕು ದಿನವಾಯ್ತು.. ಖಾತೆ ಹಂಚಿಕೆಯಾದ ಮರುದಿನವೇ ಕೆಲ ಸಚಿವರ ಖಾತೆಗಳಲ್ಲೂ  ಬದಲಾವಣೆಯಾಯ್ತು.. ಆದ್ರೂ, ಖಾತೆ ಕ್ಯಾತೆ ಮಾತ್ರ ನಿಲ್ಲುವಂತೆ ಕಾಣ್ತಿಲ್ಲ.. ಏನದು..? ಈ ಕೆಳಗಿಂನಂತಿದೆ ನೋಡಿ ನೂತನ ಸಚಿವ ಹೊಸ ಡಿಮ್ಯಾಂಡ್.

BS  Yediyurappa Cabinet  Ministers Demands New Cars
Author
Bengaluru, First Published Feb 14, 2020, 10:01 PM IST

ಬೆಂಗಳೂರು, [ಫೆ.14]: ಖಾತೆ ಹಂಚಿಕೆ ಬೆನ್ನಲ್ಲೇ ನೂತನ ಸಚಿವರು ಹೊಸ ಕಾರು ಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಸಚಿವರು ಮೌಖಿಕ ಬೇಡಿಕೆ ಸಲ್ಲಿಸಿದ್ದು, ಡಿಪಿಎಆರ್ಗೆ ಅಧಿಕೃತ ಪ್ರಸ್ತಾಪ ಸಲ್ಲಿಸಲು ಸಿದ್ಧತೆ ಮಾಡಿಕೊಳ್ತಿದ್ದಾರೆ. 

ಆದ್ರೆ, ಹೊಸ ಕಾರು ಖರೀದಿ ಬಗ್ಗೆ ಹಣಕಾಸು ಇಲಾಖೆಯಿಂದ ಪ್ರತಿಕ್ರಿಯೆ ಸಿಕ್ಕಿಲ್ಲ. ಈಗಾಗಲೇ 10 ನೂತನ ಸಚಿವರಿಗೆ ಹಳೆ ಕಾರುಗಳನ್ನು ಹಂಚಲಾಗಿದ್ದು, ಅವುಗಳನ್ನು ಬೇಡವೆಂದು ಕ್ಯಾತೆ ತೆಗೆದಿದ್ದಾರೆ.

ಸಂಪುಟ ವಿಸ್ತರಣೆಯ ಬ್ರೇಕಿಂಗ್: ಭಾವೀ ಸಚಿವರಿಗೆ ರೆಡಿಯಾಗಿ ನಿಂತಿವೆ ಕಾರುಗಳು

ಮತ್ತೊಂದೆಡೆ ವೆಚ್ಚ ಕಡಿತಕ್ಕೆ ಮುಂದಾಗಿರೋ ಹಣಕಾಸು ಇಲಾಖೆ, ಹೊಸ ಕಾರು ಖರೀದಿಗೆ ಅನುಮತಿ ನೀಡೋದು ಅನುಮಾನವಾಗಿದೆ. ಇನ್ನು, ಸಚಿವ ಶ್ರೀಮಂತ್ ಪಾಟೀಲ್ 2013ರ ಜಪಾನ್ ಮೇಡ್ ಮಾಡೆಲ್ ಇನ್ನೋವಾ ಕಾರು ಬೇಕೆಂದು ಪಟ್ಟು ಹಿಡಿದಿದ್ದಾರೆ.

ಶ್ರೀಮಂತ್ ಪಾಟೀಲ್ ಗೆ ಜಪಾನ್ ಕಾರು ಬೇಕಂತೆ
ಹೌದು....ಜವಳಿ ಮತ್ತು ಕೈಮಗ್ಗ ಸಚಿವ ಶ್ರೀಮಂತ್ ಪಾಟೀಲ್ ಅವರು ಜಪಾನ್ ಕಾರು ಬೇಕೆಂದು ಪಟ್ಟು ಹಿಡಿದಿದ್ದಾರೆ. ಮೊದಲು ಇಂಡಿಯನ್ ಮೇಡ್ ಇಂಜಿನ್ ಇನ್ನೋವಾ ಕಾರು ಕೊಡಲಾಗಿತ್ತು.

ಆದ್ರೆ, ಅದನ್ನು ತಿರಸ್ಕರಿಸಿರುವ ಶ್ರೀಮಂತ್ ಪಾಟೀಲ್, ಜಪಾನ್ ಮೇಡ್ ಎಂಜಿನ್ ಕಾರು ಬೇಕು ಎಂದು ಶ್ರೀಮಂತ್ ಹುಡುಕಾಟ ನಡೆಸಿದ್ದು, ಕೊನೆಗೂ 2013ರ ಮಾಡೆಲ್  ಜಪಾನ್ ಎಂಜಿನ್ ಇನ್ನೋವಾ ಕಾರು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

10 ನೂತನ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನವೇ ಅವರಿಗೆ ಕಾರುಗಳನ್ನು ಹಂಚಿಕೆ ಮಾಡಲಾಗಿತ್ತು.

Follow Us:
Download App:
  • android
  • ios