ಸಿದ್ರಾಮುಲ್ಲಾ ಖಾನ್ ಬಂದ್ರೆ ಹಿಂದುಗಳ ಹತ್ಯೆ: ಸಿ.ಟಿ.ರವಿ
ಸಿದ್ರಾಮುಲ್ಲಾ ಖಾನ್ ಬಂದರೆ ಹಿಂದೂಗಳ ಹತ್ಯೆಯಾಗುತ್ತೆ. ಕಾಂಗ್ರೆಸ್ ನಾಯಕರು ಹಿಂದೂ ಎನ್ನುವುದು ಅಶ್ಲೀಲ ಪದ ಎನ್ನುತ್ತಿದ್ದಾರೆ. ಹಿಂದೂ ಶಬ್ದವನ್ನು ಅವಮಾನಿಸುವ ಕಾಂಗ್ರೆಸ್‌ನವರು ತಾಕತ್ತಿದ್ದರೆ ನಮಗೆ ಹಿಂದೂಗಳ ಓಟು ಬೇಡ ಎನ್ನಲಿ ಎಂದು ಶಾಸಕ ಸಿ.ಟಿ.ರವಿಯವರು ಸವಾಲು ಹಾಕಿದ್ದಾರೆ.
ಕೊಪ್ಪ (ನ.28): ಸಿದ್ರಾಮುಲ್ಲಾ ಖಾನ್ ಬಂದರೆ ಹಿಂದೂಗಳ ಹತ್ಯೆಯಾಗುತ್ತೆ. ಕಾಂಗ್ರೆಸ್ ನಾಯಕರು ಹಿಂದೂ ಎನ್ನುವುದು ಅಶ್ಲೀಲ ಪದ ಎನ್ನುತ್ತಿದ್ದಾರೆ. ಹಿಂದೂ ಶಬ್ದವನ್ನು ಅವಮಾನಿಸುವ ಕಾಂಗ್ರೆಸ್‌ನವರು ತಾಕತ್ತಿದ್ದರೆ ನಮಗೆ ಹಿಂದೂಗಳ ಓಟು ಬೇಡ ಎನ್ನಲಿ ಎಂದು ಶಾಸಕ ಸಿ.ಟಿ.ರವಿಯವರು ಸವಾಲು ಹಾಕಿದ್ದಾರೆ. ಅಲ್ಲದೆ, ಕಾಂಗ್ರೆಸ್‌ನವರು ಬಂದಾಗ ನಿಮ್ಮಂತಹ ಹಿಂದೂ ವಿರೋಧಿಗಳಿಗೆ ಮತ ಹಾಕುವುದಿಲ್ಲ ಎಂದು ಹೇಳಿ ಎಂದು ಜನತೆಗೆ ಮನವಿ ಮಾಡಿದ್ದಾರೆ.
ಬಿಜೆಪಿ ಸಂಕಲ್ಪ ಯಾತ್ರೆಯಲ್ಲಿ ಅವರು ಮಾತನಾಡಿ, ಬಾಂಬ್ ಹಾಕಿದ ಜನರಿಗೆ ಕಾಂಗ್ರೆಸ್ ಪಕ್ಷವು ಬಿರಿಯಾನಿ ನೀಡುವ ಕೆಲಸ ಮಾಡುತ್ತದೆ. ಆದರೆ, ಬಿಜೆಪಿ ಬಾಂಬ್ ಹಾಕಿದವರಿಗೆ ಏನು ಶಿಕ್ಷೆ ನೀಡಬೇಕೋ ಅದನ್ನು ನೀಡುತ್ತಾ ಬಂದಿದೆ ಎಂದರು. ಕೆಲವರು ಈ ಬಾರಿ ತಾವು ಅಧಿಕಾರಕ್ಕೆ ಬಂದರೆ ಮುಸ್ಲಿಂ ಸಮುದಾಯದವರನ್ನು ಸಿಎಂ ಮಾಡ್ತೀವಿ. ಟಿಪ್ಪು ಯೂನಿವರ್ಸಿಟಿ ಮಾಡ್ತೀವಿ ಎನ್ನುತ್ತಿದ್ದಾರೆ. ಅಪ್ಪರಪ್ಪನಾಣೆಗೂ ಅವರಿಗೆ ಬಹುಮತ ಬರುವುದಿಲ್ಲ ಎಂದರು. ಮುಖ್ಯಮಂತ್ರಿಯೂ ಆಗೋದಿಲ್ಲ.
Chikkamagaluru: ಮತ್ತೊಮ್ಮೆ ವಿಶೇಷ ಚೇತನರ ಆರೋಗ್ಯ ತಪಾಸಣೆ: ಸಿ.ಟಿ.ರವಿ
ಟಿಪ್ಪು ಯೂನಿವರ್ಸಿಟಿಗೆ ಶಂಕುಸ್ಥಾಪನೆ ಮಾಡುವುದಕ್ಕೂ ನಾವು ಬಿಡುವುದಿಲ್ಲ ಎಂದು ಜೆಡಿಎಸ್ ಪಕ್ಷದ ಹೆಸರನ್ನು ಉಲ್ಲೇಖಿಸದೆ ಟಾಂಗ್ ಕೊಟ್ಟರು. ದತ್ತ ಪೀಠಕ್ಕೆ ಸಮಿತಿ ರಚನೆ ಮಾಡಬೇಕು ಎಂಬ ಹಿಂದೂಗಳ ಬೇಡಿಕೆಗೆ ಸರ್ಕಾರವು ಸ್ಪಂದಿಸಿ ವ್ಯವಸ್ಥಾಪನಾ ಸಮಿತಿ ರಚನೆ ಮಾಡಿದೆ. ಹಿಂದೂ ಅರ್ಚಕರ ನೇಮಕ ಮಾಡಬೇಕು ಎಂಬ ಬೇಡಿಕೆಗೆ ಸರ್ಕಾರ ಸ್ಪಂದಿಸಿದ್ದು, ಮುಂದಿನ 2-3 ದಿನಗಳಲ್ಲಿ ಅರ್ಚಕರ ನೇಮಕವಾಗಲಿದೆ. ಈ ಬಾರಿಯ ದತ್ತ ಜಯಂತಿ ಹಿಂದೂ ಅರ್ಚಕರ ಪೂಜೆಯೊಂದಿಗೆ ನಡೆಯಲಿದೆ ಎಂದರು.
ಅಡಕೆಗೆ ನ್ಯಾಯ ಪ್ರಯತ್ನ ಸಾಗಿದೆ: ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಅಡಕೆ ವಿಷಕಾರಿ ಎಂದು ಕೋರ್ಚ್ ಮುಂದೆ ಹೇಳಲಾಗಿತ್ತು. ಈ ವಿಷಯದಲ್ಲಿ ಅಡಕೆ ಬೆಳೆಗಾರರಿಗೆ ಆಗುವ ಅನ್ಯಾಯವನ್ನು ತಟೆಗಟ್ಟುವ ನಿಟ್ಟಿನಲ್ಲಿ ರಾಜ್ಯದ ಬಿಜೆಪಿ ನಾಯಕರು ಈ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ತಂದು, ಕಾನೂನಾತ್ಮಕವಾಗಿ ನ್ಯಾಯ ಸಿಗುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ ಎಂದು ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಕೊಪ್ಪದ ಪಟ್ಟಣ ಪಂಚಾಯಿತಿಯ ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿ ಭಾನುವಾರ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಜನಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರ, ಚಿಕ್ಕಮಗಳೂರಿಗೆ ನರೇಂದ್ರ ಮೋದಿ ಅವರು 2014ರಲ್ಲಿ ಬಂದಿದ್ದ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗುತ್ತೆ ಎಂದು ಹೇಳಿದ್ದರು. ಯಾವುದೇ ರಕ್ತಪಾತ ಇಲ್ಲದೆ ರಾಮ ಮಂದಿರ ನಿರ್ಮಾಣ ಆಗುತ್ತಿದೆ. ಇದು, ನಮ್ಮ ಹೆಮ್ಮೆ ಎಂದ ಅವರು, ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಿ ಶಾಂತಿ ನೆಲೆಸುವ ಕೆಲಸ ಆಗಿದೆ. 370ನೇ ವಿಧಿ ರದ್ದುಪಡಿಸಿದೆ. ಹೇಳಿದಂತೆ ನಡೆದುಕೊಳ್ಳುವ ಪಕ್ಷ ಬಿಜೆಪಿ ಎಂದರು.
‘ಕಾಂತಾರ’ದಲ್ಲಿ ಪಾತ್ರಕ್ಕೆ ರಿಷಬ್ ಶೆಟ್ಟಿ ಜೀವ ತುಂಬಿದ್ದಾರೆ: ಸಿ.ಟಿ.ರವಿ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ರಾಜ್ಯ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್. ಜೀವರಾಜ್ ಮಾತನಾಡಿದರು. ಕಾರ್ಯಕ್ರಮದಲ್ಲಿ ತರೀಕೆರೆ ಶಾಸಕ ಡಿ.ಎಸ್. ಸುರೇಶ್, ವಿಧಾನ ಪರಿಷತ್ತು ಸದಸ್ಯ ಎಂ.ಕೆ. ಪ್ರಾಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ, ರಾಮಸ್ವಾಮಿ ಉಪಸ್ಥಿತರಿದ್ದರು.