Asianet Suvarna News Asianet Suvarna News

ಕಾಂಗ್ರೆಸ್​ ಬಿಟ್ಟ ಬಳಿಕ ಇದೇ ಸಿಕ್ಕಿದ್ದೇ ಚಾನ್ಸ್ ಎಂದು ಸಿದ್ದು ಭೇಟಿಯಾದ ಹಳೇ ಶಿಷ್ಯಂದಿರು

ಕಾಂಗ್ರೆಸ್ ಬಿಟ್ಟು ಬೈ ಎಲೆಕ್ಷನ್ ಹೋಗಿ ಬಿಜೆಪಿಯಿಂದ ಗೆದ್ದು ಶಾಸಕರಾಗಿರುವ ಮಾಜಿ ಶಿಷ್ಯಂದಿರು ಇದೇ ಸಿಕ್ಕಿದ್ದೇ ಚಾನ್ಸ್ ಅಂತ ಆಸ್ಪತ್ರೆಗೆ ಹೋಗಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.  ಇದೇ ಸಿಕ್ಕದೇ  ಇದೇ ವೇಳೆ ಮಾಜಿ ಶಿಷ್ಯಂದಿರಿಗೆ ಸಿದ್ದು ನಗೆ ಚಟಾಕಿ ಹಾರಿಸಿದ್ದಾರೆ.

BJP MLAs  ST Somashekar,  Byrathi Basavaraj and Munirathna meets siddaramaiah In Hospital
Author
Bengaluru, First Published Dec 14, 2019, 5:46 PM IST

ಬೆಂಗಳೂರು,[ಡಿ.14]:  ಹೃದಯ ಸಂಬಂಧಿ ಚಿಕಿತ್ಸೆಗಾಗಿ ಬೆಂಗಳೂರಿನ ಕಾಸಗಿ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ನೂತನ ಶಾಸಕರು ಭೇಟಿ ಮಾಡಿದರು.

ಮಾಜಿ ಶಿಷ್ಯಂದಿರಾದ ಶಾಸಕ ಎಸ್​.ಟಿ ಸೋಮಶೇಖರ್, ಶಾಸಕ ಭೈರತಿ ಬಸವರಾಜ್ ಹಾಗೂ ಮುನಿರತ್ನ ಇಂದು [ಶನಿವಾರ] ವಿಚಾರಿಸಿದರು. ಕಾಂಗ್ರೆಸ್ ಶಾಸಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗಿನಿಂದ ಸಿದ್ದರಾಮಯ್ಯ ಅವರ ಜತೆ ಮಾತನಾಡಿರಲಿಲ್ಲ. ಅಷ್ಟೇ ಅಲ್ಲದೇ ಸಿದ್ದರಾಮಯ್ಯನವರಿಗೆ ಹೇಗೆ ಮುಖ ತೋರಿಸಬೇಕೆಂದು  ಹಳೆ ಶಿಷ್ಯಂದಿರು ಚಿಂತೆಯಲ್ಲಿದ್ದರು. 

ಸಿದ್ದು ಆರೋಗ್ಯ ವಿಚಾರಿಸಿದ ವಿವಿಧ ಮಠಾಧೀಶರು: ಮತ್ತೊಂದೆಡೆ ವಿಶೇಷ ಪೂಜೆ

ಆದ್ರೆ, ಇದೇ ಚಾನ್ಸ್ ಅಂತ ಆಸ್ಪತ್ರೆಗೆ ದೌಡಾಯಿಸಿ ತಮ್ಮ ನಾಯಕನ ಯೋಗ ಕ್ಷೇಮ ವಿಚಾರಿಸಿದರು. ಇದೇ ವೇಳೆಯಲ್ಲಿ ಸೋಮಶೇಖರ್, ಭೈರತಿ, ಮುನಿರತ್ನ ಅವರನ್ನು ನೋಡಿ ಮಾಜಿ ಸಿಎಂ ಆಶ್ಚರ್ಯ ವ್ಯಕ್ತಪಡಿಸಿದರು. 

ಅಲ್ಲದೇ,  ಏನರಯ್ಯಾ ಒಟ್ಟಿಗೆ ಬಂದುಬಿಟ್ಟಿದ್ದೀರಿಲ್ಲ ಎಂದು ಸಿದ್ದರಾಮಯ್ಯ ವಿಚಾರಿಸಿದರು. ಇದಕ್ಕೆ ನೀವೆ ನಮ್ಮ ನಾಯಕರು ಸಾರ್ ಎಂದು ಮುನಿರತ್ನ, ಸೋಮಶೇಖರ್ ನುಡಿದರು. ಬಳಿಕ ಮಾತನಾಡಿದ ಸಿದ್ದರಾಮಯ್ಯ, ಯಾವಾಗಂತೆ ನಿಮ್ಮನ್ನ ಮಂತ್ರಿ ಮಾಡುವುದು, ಸಿಎಂ ಯಡಿಯೂರಪ್ಪ ಮಂತ್ರಿ ಮಾಡುತ್ತಾರೆ ಬಿಡಿ ಎಂದು ನಗೆ ಚಟಾಕಿ ಹಾರಿಸಿದರು.

ಚಿತ್ರಗಳಲ್ಲಿ: ಪಕ್ಷಬೇಧ ಮರೆತು ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದ ಗಣ್ಯರು

ಇನ್ನು ಸಿದ್ದರಾಮಯ್ಯ ಭೇಟಿ ಬಳಿಕ ಬಿಜೆಪಿ ನೂತನ ಶಾಸಕ ಎಸ್.ಟಿ.ಸೋಮಶೇಖರ್ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿ, ಈ ಹಿಂದೆ ನಾವು ಮೂರು ಜನ ಸೇರಿ ಅವರ ಬಳಿ ಮಾತನಾಡಬೇಕು ಅಂದುಕೊಂಡಿದ್ದೇವು, ಇಷ್ಟು ದಿನ ಬಿಡುವಿರಲಿಲ್ಲ, ಇಂದು ಭೇಟಿ ಮಾಡಿ ಆರೋಗ್ಯ ವಿಚಾರಿಸಿದೇವು ಎಂದರು.

ಅಂತೆಯೇ, ನಮ್ಮ ನಾಯಕರಿಗೆ ಆಯಸ್ಸು, ಆರೋಗ್ಯ ಕೊಟ್ಟು ಭಗವಂತ ಕಾಪಾಡಲಿ. ಅವರು ಈ ಮೊದಲಿನಂತೆ 24×7 ಕೆಲಸ ಮಾಡಲಿ ಎಂದು ಪ್ರಾರ್ಥನೆ ಮಾಡಿದ್ದೇವೆ ಎಂದು ತಿಳಿಸಿದರು.

ಆಸ್ಪತ್ರೆಯಲ್ಲಿ ನಗೆ ಚಟಾಕೆ: ಈಶ್ವರಪ್ಪ ಡೈಲಾಗ್ ಸಕ್ಕತ್, ಸಿದ್ದು ಕೊಟ್ರು ಚಮಕ್ ವಿಡಿಯೋ

ಕಾಂಗ್ರೆಸ್​ ಪಕ್ಷ ಬಿಟ್ಟ ನಂತರ ಮೊದಲ ಬಾರಿ ಭೇಟಿ ಮಾಡಿದ ವಿಚಾರವಾಗಿ ಉತ್ತರಿಸಿ, ಇಷ್ಟು ದಿನ ಅವಕಾಶ ಸಿಕ್ಕಿರಲಿಲ್ಲ. ಮಾನವೀಯತೆ ದೃಷ್ಟಿಯಿಂದ ಬಂದು ಆರೋಗ್ಯ ವಿಚಾರಿಸಿದ್ದೇವೆ. ರಾಜಕೀಯವಾಗಿ ಚರ್ಚೆ ನಾವು ಮಾಡಿಲ್ಲ. ಅವರು ಮಾಡಿಲ್ಲ ಎಂದು ಎಸ್​.ಟಿ ಸೋಮಶೇಖರ್ ಸ್ಪಷ್ಟಪಡಿಸಿದರು.

ಇವರೆಲ್ಲ ಸಿದ್ದರಾಮಯ್ಯನವರ ಆಪ್ತವಲಯದಲ್ಲಿಯೇ ಗುರುತಿಸಿಕೊಂಡುವರು. ಆದ್ರೆ, ಬದಲಾದ ರಾಜಕೀಯ ವಿದ್ಯಮಾನಗಳಿಂದ ಕಾಂಗ್ರೆಸ್ ತಪರೆದು ಬಿಜೆಪಿ ಸೇರಿ ಬೈ ಎಲೆಕ್ಷನ್ ನಲ್ಲಿ ಗೆದ್ದು ಮತ್ತೆ ಶಾಸಕರಾಗಿದ್ದಾರೆ.

Follow Us:
Download App:
  • android
  • ios