Lok Sabha Election 2024: ಪಕ್ಷ, ಕ್ಷೇತ್ರ ನನ್ನ ಆಯ್ಕೆಯಲ್ಲ: ಡಾ|ಮಂಜುನಾಥ್
ನಾನು ನನ್ನನ್ನು ಆರೋಗ್ಯ ಕ್ಷೇತ್ರಕ್ಕೆ ಪೂರ್ಣ ಪ್ರಮಾಣದಲ್ಲಿ ಅರ್ಪಣೆ ಮಾಡಿಕೊಂಡಿದ್ದೆ. ಆದರೆ, ನಾನು ನಿವೃತ್ತಿ ಹೊಂದುವುದಕ್ಕೂ ಮತ್ತು ಲೋಕಸಭಾ ಚುನಾವಣೆ ಎದುರಾಗುವುದಕ್ಕೂ ಸರಿ ಹೋಯಿತು. ಜನರೂ ಬಿಡಲಿಲ್ಲ. ಬೇರೆ ಬೇರೆ ರಾಜ್ಯಗಳಿಂದ ಅನೇಕ ಸ್ನೇಹಿತರು ಮಾತನಾಡಿ ಜಯದೇವದ ಉದಾಹರಣೆ ಪ್ರಸ್ತಾಪಿಸಿ ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ತರಲು ನಿಮ್ಮಂಥವರು ರಾಜಕೀಯಕ್ಕೆ ಬರಬೇಕು ಎಂಬುದನ್ನು ಹೇಳತೊಡಗಿದರು. ಆರಂಭದಲ್ಲಿ ನನಗೂ ಮತ್ತು ಮನೆಯವರಿಗೂ ಹಿಂಜರಿಕೆ ಇತ್ತು. ನಂತರ ಒಪ್ಪಿದೆವು: ಡಾ|ಮಂಜುನಾಥ್
ವಿಜಯ್ ಮಲಗಿಹಾಳ
ಬೆಂಗಳೂರು(ಮಾ.21): ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೆಲವೊಂದು ಅಚ್ಚರಿಯ ವ್ಯಕ್ತಿಗಳು ಕಣಕ್ಕೆ ಇಳಿಯುತ್ತಿದ್ದಾರೆ. ಈ ಪೈಕಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಕೂಡ ಪ್ರಮುಖರು. ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಆಳಿಯ ಆಗಿರುವ ಖ್ಯಾತ ಹೃದ್ರೋಗ ತಜ್ಞರಾದ ಡಾ.ಮಂಜುನಾಥ್ ಅವರು ಚುನಾವಣಾ ರಾಜಕಾರಣಕ್ಕೆ ಪ್ರವೇಶಿಸುವ ಬಗ್ಗೆ ಯಾವ ನಿರೀಕ್ಷೆಯೂ ಇರಲಿಲ್ಲ. ದಿಢೀರನೆ ಅವರನ್ನು ರಾಜಕಾರಣಕ್ಕೆ ಎಳೆದು ತಂದು ಕಾಂಗ್ರೆಸ್ಸಿನ ಭದ್ರಕೋಟೆ ಎಂದೇ ಹೆಸರಾದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಡಲಾಗಿದೆ. ಸೂಕ್ಷ್ಮ ಮನಸ್ಸಿನ ಹಾಗೂ ರಾಜಕೀಯ ಕುಟುಂಬದಲ್ಲಿದ್ದರೂ ಅದರ ಸೋಂಕಿನಿಂದ ದೂರ ಉಳಿದಿದ್ದ ಡಾ.ಮಂಜುನಾಥ್ ಅವರು 'ಕನ್ನಡಪ್ರಭ' ದೊಂದಿಗೆ 'ಮುಖಾಮುಖಿ'ಯಾದಾಗ..
ನೀವು ಸಂಸದರಾಗಿ ಗೆದ್ದರೆ ಕ್ಷೇತ್ರದ ಅಭಿವೃದ್ಧಿಗಾಗಿ ಏನೆಲ್ಲ ಮಾಡಬೇಕು ಎಂದುಕೊಂಡಿದ್ದೀರಿ?
ಸ್ಥಳೀಯವಾಗಿ ರೇಷ್ಮೆ ಬೆಳೆಗಾರರಿಗೆ ಕನಿಷ್ಠ ಬೆಂಬಲ ಬೆಲೆ ಸಿಗಬೇಕು. ರಾಷ್ಟ್ರೀಯ ಹೆದ್ದಾರಿ ಗಳಲ್ಲಿ ಟ್ರಾಮಾ ಸೆಂಟರ್ ತೆರೆಯಬೇಕು. ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಹಲವಾರು ನ್ಯೂನತೆಗಳಿದ್ದು, ಅದನ್ನು ಸರಿಪಡಿಸಿ ಬಲಪಡಿಸಬೇಕಾಗಿದೆ. ಕುಡಿಯುವ ನೀರಿನ ಕೊರತೆಗೆ ಪರ್ಯಾಯ ಮಾರ್ಗೋಪಾಯ ಕಂಡುಕೊಳ್ಳಬೇಕು. ಹೀಗೆ ಹಲವು ಅಭಿವೃದ್ಧಿ ಕೆಲಸಗಳ ಬಗ್ಗೆ ಚಿಂತನೆ ಮಾಡಿದ್ದೇನೆ.
News Hour: ದೇಶ ತುಂಡು ಮಾಡುವ ಮಾತನಾಡಿದ್ದ ಡಿಕೆಸು ವಿರುದ್ಧ ಹೃದಯ ಒಂದು ಮಾಡುವ ಡಾ.ಸಿಎನ್ ಮಂಜುನಾಥ್ ಫೈಟ್
• ರಾಜಕೀಯ ಪ್ರವೇಶ ಮಾಡುವ ಬಗ್ಗೆ ನೀವು ಯಾವತ್ತಾದರೂ ನಿರೀಕ್ಷೆ ಮಾಡಿದ್ದಿರಾ?
ಇಲ್ಲ ಇಲ್ಲ. ಖಂಡಿತವಾಗಿಯೂ ಇಲ್ಲ, ನಾನು ರಾಜಕೀಯ ಪ್ರವೇಶ ಮಾಡಬೇಕು ಎಂಬುದು ನನ್ನ ಮನಸ್ಸಿನಲ್ಲಿ ಯಾವತ್ತೂ ಇರಲಿಲ್ಲ. ಜ.31ರಂದು ನಾನು ಜಯದೇವ ಆಸ್ಪತ್ರೆಯ ನಿರ್ದೇಶಕ ಹುದ್ದೆಯಿಂದ ನಿವೃತ್ತನಾದೆ. ಅದೇ ವೇಳೆ ಹಲವಾರು ಸಂಘ ಸಂಸ್ಥೆಗಳು ಸಮಾರಂಭಗಳನ್ನು ಆಯೋಜಿಸಿದ್ದವು. ಆ ಸಂದರ್ಭ ಕೆಲವರು ಮಾತನಾಡಿ ನೀವು ಆರೋಗ್ಯ ಕ್ಷೇತ್ರದಲ್ಲಿ ಹಲವಾರು ಬದಲಾವಣೆ ತಂದಿದ್ದೀರಿ. ಸರ್ಕಾರಿ ಆಸ್ಪತ್ರೆಯನ್ನು ಖಾಸಗಿ ಪಂಚತಾರಾ ಮಟ್ಟದ ಸೌಕರ್ಯಗಳೊಂದಿಗೆ ನಡೆಸಬಹುದು ಎಂಬುದನ್ನು ತೋರಿಸಿದ್ದೀರಿ. ಇದು ಕೇವಲ ರಾಜ್ಯಕ್ಕೆ ಮಾತ್ರ ಸೀಮಿತವಾಗಬಾರದು. ರಾಷ್ಟ್ರೀಯ ಮಟ್ಟದಲ್ಲೂ ನಿಮ್ಮ ಸೇವೆ ಅಗತ್ಯವಿದೆ ಎಂಬ ಮಾತುಗಳನ್ನು ಆಡಿದ್ದರು. ಆದರೆ, ಆ ವೇಳೆ ನಾನು ರಾಜಕೀಯ ಪ್ರವೇಶಿಸುವ ಬಗ್ಗೆ ಆಲೋಚನೆಯನ್ನೂ ಮಾಡಿರಲಿಲ್ಲ.
ರಾಜಕೀಯದಿಂದ ಸಮಾಜ ಸುಧಾರಣೆ ಮಾಡುವುದಕ್ಕೆ ಸಾಧ್ಯ ಎಂದು ನಿಮಗೆ ಅನಿಸಿದೆಯೇ?
ಖಂಡಿತಾ ಮಾಡಬಹುದು. ಆದರೆ, ವೈಯಕ್ತಿಕ ಹಿತಾಸಕ್ತಿ ಬದಿಗಿರಿಸಿ ಬದ್ಧತೆ ಇರಿಸಿಕೊಂಡರೆ ರಾಜಕೀಯದಿಂದ ಬದಲಾವಣೆ ಮಾಡಲು ಸಾಧ್ಯವಿದೆ. ಈಗಿನ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಪರಿಣತರಿಗೆ,ಸಾಧಕರಿಗೆ ಉತ್ಸಾಹಿಗಳಿಗೆ ಪ್ರೋತ್ಸಾಹ ಕೊಡುತ್ತಿದ್ದಾರೆ. ಕನಿಷ್ಠ ನಮ್ಮ ಆಲೋಚನೆ, ಅನಿಸಿಕೆಗಳನ್ನು ತಲುಪಿಸಬಹುದಾಗಿದೆ. ಹಲವಾರು ಬ್ರಿಟಿಷ್ ಕಾಲದ ಕಾನೂನುಗಳಿವೆ. ಅವುಗಳಲ್ಲಿ ಕೆಲವು ಉಸಿರುಗಟ್ಟಿಸುವಂತಿವೆ. ಜನಸಾ ಮಾನ್ಯರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಹಲವಾರು ಕಾನೂನುಗಳನ್ನು ಸರಳೀಕರಣಗೊಳಿಸುವ ಅಗತ್ಯವಿದೆ. ಹಲವು ಬದಲಾವಣೆಗಳನ್ನು ತರಬೇಕಾಗಿದೆ. ಆಡಳಿತದಲ್ಲಿ ಗಣಕೀಕರಣ, ಆಧುನೀಕರಣಕ್ಕಿಂತ ಸರಳೀಕರಣ ಅಗತ್ಯವಿದೆ. ವ್ಯವಸ್ಥೆಯಲ್ಲಿ ವಿಕೇಂದ್ರೀಕರಣ ಎಂದು ಬಾಯಲ್ಲಿ ಹೇಳಿದರೂ ಕೇಂದ್ರೀಕರಣವಾಗುತ್ತಿದೆ. ಆಡಳಿತದ ಆಯಕಟ್ಟಿನ ಸ್ಥಾನದಲ್ಲಿ ಪರಿಣತಿ ಜತೆಗೆ ಸಕಾರಾತ್ಮಕ ಮನೋಭಾವ ಹೊಂದಿದವರನ್ನು ನೇಮಿಸಬೇಕು.
• ನೀವು ದೊಡ್ಡ ರಾಜಕೀಯ ಕುಟುಂಬದಲ್ಲೇ ಇದ್ದರೂ ರಾಜಕೀಯದಿಂದ ಅಂತರ ಕಾಪಾಡಿಕೊಂಡಿದ್ದಿರಿ. ದಿಢೀರ್ ಬೆಳವಣಿಗೆ ಹೇಗಾಯಿತು?
ಹೌದು. ನಾನು ನನ್ನನ್ನು ಆರೋಗ್ಯ ಕ್ಷೇತ್ರಕ್ಕೆ ಪೂರ್ಣ ಪ್ರಮಾಣದಲ್ಲಿ ಅರ್ಪಣೆ ಮಾಡಿಕೊಂಡಿದ್ದೆ. ಆದರೆ, ನಾನು ನಿವೃತ್ತಿ ಹೊಂದುವುದಕ್ಕೂ ಮತ್ತು ಲೋಕಸಭಾ ಚುನಾವಣೆ ಎದುರಾಗುವುದಕ್ಕೂ ಸರಿ ಹೋಯಿತು. ಜನರೂ ಬಿಡಲಿಲ್ಲ. ಬೇರೆ ಬೇರೆ ರಾಜ್ಯಗಳಿಂದ ಅನೇಕ ಸ್ನೇಹಿತರು ಮಾತನಾಡಿ ಜಯದೇವದ ಉದಾಹರಣೆ ಪ್ರಸ್ತಾಪಿಸಿ ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ತರಲು ನಿಮ್ಮಂಥವರು ರಾಜಕೀಯಕ್ಕೆ ಬರಬೇಕು ಎಂಬುದನ್ನು ಹೇಳತೊಡಗಿದರು. ಆರಂಭದಲ್ಲಿ ನನಗೂ ಮತ್ತು ಮನೆಯವರಿಗೂ ಹಿಂಜರಿಕೆ ಇತ್ತು. ನಂತರ ಒಪ್ಪಿದೆವು.
• ನಿಮ್ಮ ಕುಟುಂಬದಲ್ಲೇ ದೊಡ್ಡ ದೊಡ್ಡ ರಾಜಕೀಯ ನಾಯಕರಿದ್ದಾರೆ. ಅವರು ಹಿಂದೆ ಯಾವತ್ತೂ ನಿಮ್ಮನ್ನು ರಾಜಕೀಯಕ್ಕೆ ಆಹ್ವಾನಿಸಿರಲಿಲ್ಲವೇ?
ಆಹ್ವಾನ ಮಾಡಿರಲಿಲ್ಲ. ನಾಮನಿರ್ದೇಶನ ಮಾಡಿದರೆ ನೀವು ರಾಜಕೀಯಕ್ಕೆ ಹೋಗಬಹುದು ಎಂಬುದನ್ನು ನನ್ನ ಪತ್ನಿ ಹೇಳಿದ್ದರು. ಸುಮ್ಮನೆ ಕುಳಿತುಕೊಳ್ಳಲು ರಾಜಕೀಯ ಬೇಡ. ಅಲ್ಲಿಯೂ ನಿಮಗೆ ಕೆಲಸ ಮಾಡಲು ಅವಕಾಶ ಸಿಕ್ಕರೆ ನೋಡಬಹುದು ಎಂದೇ ಹೇಳಿದ್ದರು. ಅಷ್ಟು ಬಿಟ್ಟರೆ ರಾಜಕೀಯದ ಬಗ್ಗೆ ಚರ್ಚೆಯೇ ನಡೆದಿರಲಿಲ್ಲ.
• ನೀವು ಸದಾ ನೀಟಾಗಿ ಪ್ಯಾಂಟ್ ಶರ್ಟ್, ಕೋಟು ಹಾಕುವವರು. ಈಗ ಅದನ್ನು ಬದಿಗಿರಿಸಿ ಖಾದಿ ಧರಿಸಲು ಸಿದ್ಧರಾಗಿದ್ದೀರಿ?
ನಾನು ರಾಜಕೀಯಕ್ಕಾಗಿನನ್ನತನಬದಲಾಯಿಸಿಕೊಳ್ಳುವುದಿಲ್ಲ. ನಾನು ಈಗಲೂ ಪ್ಯಾಂಟ್ ಶರ್ಟ್ ಅನ್ನೇ ಧರಿಸುತ್ತಿದ್ದೇನೆ. ಆದರೆ, ಕೋಟು ಹಾಕುವುದಿಲ್ಲ. ಅಧಿಕೃತ ಸಭೆಗಳಲ್ಲಿ ಕೋಟು ಹಾಕಬಹುದು ಅಷ್ಟೇ. ಬಿಳಿ ಬಣ್ಣದಖಾದಿಸ್ವಚ್ಛತೆಯಮನಸ್ಸಿನ ಸಂಕೇತ, ಬರಿ ಬಟ್ಟೆ ಬದಲಾಯಿಸುವುದರಿಂದಲೇ ಎಲ್ಲವೂ ಬದಲಾಗುತ್ತದೆ ಎಂದುಕೊಳ್ಳುವುದಿಲ್ಲ.
* ನೀವು ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಸ್ಥಾನದಿಂದ ನಿವೃತ್ತಿಗೊಂಡ ಬಳಿಕ ಬೇರೆ ಏನಾದರೂ ಮಾಡುವ ಉದ್ದೇಶ ಹೊಂದಿದ್ದಿರಾ?
ನಾನು ನನ್ನ ವೃತ್ತಿಯನ್ನು ಮುಂದುವರೆಸುವ ಆಲೋಚನೆ ಹೊಂದಿದ್ದೆ. ನಿವೃತ್ತಿ ಬೆನ್ನಲ್ಲೇ ಒಂದೆರಡುಖಾಸಗಿ ಆಸ್ಪತ್ರೆಗಳಲ್ಲಿ ನನ್ನ ಹೃದ್ರೋಗ ವೃತ್ತಿ ಮುಂದುವರೆಸಿದ್ದೆ. ಮುಂದೆಯೂ ಅಷ್ಟೇ. ನಾನು ವಾರಕ್ಕೆ ಎರಡು ಅಥವಾ ಮೂರು ದಿನ ಕೆಲವು ಗಂಟೆಗಳ ಕಾಲ ನನ್ನ ವೃತ್ತಿಗೆ ಸಮಯ ನೀಡುತ್ತೇನೆ.
• ನಿಮ್ಮನ್ನು ರಾಜಕೀಯಕ್ಕೆ ಎಳೆದು ತರುವುದಕ್ಕೆ ನಿಮ್ಮ ಪತ್ನಿ, ಪುತ್ರ ಒಪ್ಪಿರಲಿಲ್ಲ. ಹೇಗೆ ಅವರನ್ನು ಮನವೊಲಿಸಿದಿರಿ?
ನಾನು ಒಂದು ಪಕ್ಷದಿಂದ ರಾಜಕೀಯ ಪ್ರವೇಶಿಸಿದರೆ ಖಂಡಿತವಾಗಿಯೂ ನನ್ನ ಮೇಲೆ ಪ್ರೀತಿಯುಳ್ಳವರು ಪಕ್ಷ ರಾಜಕಾರಣಕ್ಕಾಗಿ ನನ್ನಿಂದ ದೂರವಾಗಬಹುದು ಎಂಬ ನೋವು ಮನಸ್ಸಲ್ಲಿತ್ತು. ನಾನು ಪ್ರೀತಿ ವಿಶ್ವಾಸಕ್ಕೆ ತುಂಬಾ ಬೆಲೆ ಕೊಡುತ್ತೇನೆ. ಹೀಗಾಗಿಯೇ ನನ್ನ ಪತ್ನಿ, ಪುತ್ರ ರಾಜಕೀಯ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿದರು. ನಂತರ ಎಲ್ಲರೂ ಸೇರಿ ಅವರನ್ನು ಮನವೊಲಿಸಿದರು.
ನೀವು ನಿಮ್ಮದೇ ಕುಟುಂಬದ ಜೆಡಿಎಸ್ ಪಕ್ಷದಿಂದಲೇ ಚುನಾವಣಾ ಕಣಕ್ಕೆ ಇಳಿಯಬಹುದಿತ್ತಲ್ಲವೇ? ಬಿಜೆಪಿ ಯಾಕೆ?
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಆಗಿರುವುದರಿಂದ ಎನ್‌ಡಿಎ ಅಭ್ಯರ್ಥಿಯಾಗಿ ನಾನು ಕಣಕ್ಕಿಳಿದಿದ್ದೇನೆ. ನಾನು ಯಾವ ಪಕ್ಷ ದಿಂದ ಸ್ಪರ್ಧಿಸಬೇಕು ಎಂಬುದನ್ನು ಉಭಯ ಪಕ್ಷಗಳ ನಾಯಕರು ತೀರ್ಮಾನಿಸಿದ್ದಾರೆ. ನನಗೆ ಆಯ್ಕೆಯ ಅವಕಾಶ ಇರಲಿಲ್ಲ.
* ಕುಟುಂಬ ರಾಜಕಾರಣದ ಆರೋಪ ಬರಬಾರದು ಎಂಬ ಕಾರಣಕ್ಕಾಗಿ ನಿಮ್ಮನ್ನು ಬಿಜೆಪಿಯಿಂದ ಸ್ಪರ್ಧಿಸುವಂತೆ ಜೆಡಿಎಸ್ ದೇವೇಗೌಡ ಮತ್ತು ಕುಮಾರಸ್ವಾಮಿ ತಂತ್ರ ರೂಪಿಸಿದರಂತೆ?
ಇರಬಹುದು. ಈಗ ಕುಟುಂಬ ರಾಜಕಾರಣ ಎನ್ನುವುದು ಸರ್ವೇ ಸಾಮಾನ್ಯವಾಗಿದೆ. ಯಾವ ಪಕ್ಷವೂ ಇದಕ್ಕೆ ಹೊರತಾಗಿಲ್ಲ. ಭಾರತೀಯ ರಾಜಕಾರಣದಲ್ಲಿ ಕುಟುಂಬ ರಾಜಕಾರಣ ಎನ್ನುವುದಕ್ಕೆ ಇವತ್ತು ಪ್ರಸ್ತುತತೆ ಉಳಿದಿಲ್ಲ. ಎಲ್ಲ ಪಕ್ಷಗಳಲ್ಲೂ ಇದು ಅಸ್ತಿತ್ವದಲ್ಲಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಅಪ್ಪ-ಮಗ ಅಣ್ಣ-ತಮ್ಮ,ಮಾವ-ಅಳಿಯ, ಪತಿ-ಪತ್ನಿ ಹೀಗೆ ಎಲ್ಲ ಪಕ್ಷಗಳಲ್ಲಿದೆ. ಆದರೆ, ಕುಟುಂಬ ರಾಜಕಾರಣಎಂದಕೂಡಲೇದೇವೇಗೌಡಕುಟುಂಬವೊಂದನ್ನೇ ಉದಾಹರಿಸಲಾಗುತ್ತದೆ.
• ಡಾ.ಮಂಜುನಾಥ್ ಅವರನ್ನು ಬಿಜೆಪಿಯಿಂದ ಕಣಕ್ಕಿಳಿಸಿದ್ದು ಜೆಡಿಎಸ್‌ನ ಮೊದಲ ಆತ್ಮಹತ್ಯೆ ಪ್ರಯತ್ನ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ" ಡಿ.ಕೆ.ಶಿವಕುಮಾರ್ ಹೇಳಿದ್ದಾರಲ್ಲ?
ಅವರು ಅವರ ಭಾವನೆಯನ್ನು ವ್ಯಕ್ತಪಡಿಸಿರಬಹುದು. ಇದಕ್ಕೆಲ್ಲ ಉತ್ತರ ಸಿಗುವುದು ಚುನಾವಣೆ ಮುಗಿದ ಮೇಲೆ. ನಾವು ಎಲ್ಲೇ ಹೋದರೂ ಜನರು ಬೆಂಬಲ ಸೂಚಿಸುತ್ತಿದ್ದಾರೆ. ಅವರಲ್ಲಿ ಉತ್ಸಾಹ ಉಕ್ಕಿ ಬರುತ್ತಿದೆ. ನೀವು ನಿಂತಿದ್ದು ಒಳ್ಳೆಯದಾಯಿತು ಎಂದು ಮಾತನಾಡುತ್ತಿದ್ದಾರೆ. ಅದು ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತಿದೆ.
• ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂದು ನಿರ್ಣಯ ಹೊರಬಿದ್ದಾಗ ಎಲ್ಲೋ ಒಂದು ಕಡೆ ಪ್ರಬಲ ಡಿಕೆ ಸಹೋದರರ ಕಾರಣಕ್ಕಾಗಿ ನಿಮಗೆ ಹಿಂಜರಿಕೆ ಉಂಟಾಗಲಿಲ್ಲವೇ? ಬೇರೆ ಕ್ಷೇತ್ರವಾಗಿದ್ದರೆ ಒಳ್ಳೆಯದಿತ್ತು ಎಂದು ಅನಿಸಲಿಲ್ಲವೇ?
ಇಲ್ಲ. ಹಾಗೇನೂ ಹಿಂಜರಿಕೆ ಉಂಟಾಗಲಿಲ್ಲ. ನನಗೆ ರಾಜಕಾರಣವೇ ಬೇಡ ಎಂದುಕೊಂಡಿದ್ದೆ, ಕ್ಷೇತ್ರದ ಬಗ್ಗೆ ನನ್ನ ಆಯ್ಕೆ ಏನೂ ಇರಲಿಲ್ಲ. ಚಿಹ್ನೆ ಮತ್ತು ಕ್ಷೇತ್ರ ಎರಡನ್ನೂ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ನಾಯಕರು ಸೇರಿ ನಿರ್ಧಾರ ಮಾಡಿದ್ದು.
• ರಾಜಕಾರಣಿಗಳ ಜತೆ ಜಾಸ್ತಿ ಮಾತನಾಡಿದರೆ ನಾವು ಓದಿದ್ದೆಲ್ಲ ವ್ಯರ್ಥ ಎಂದು ಅನಿಸುತ್ತದೆ ಎಂಬುದಾಗಿ ನೀವು ಹಿಂದೊಮ್ಮೆ ಉಪನ್ಯಾಸ ನೀಡುವಾಗ ಹೇಳಿದ್ದು ಹೌದು (ನಗುವಿನೊಂದಿಗೆ) ಇತ್ತೀಚೆಗೆ ರಾಜಕಾರಣ ದಲ್ಲಿ ಗುಣಮಟ್ಟ ಕುಸಿಯುತ್ತಿದೆ. ಸೇವಾ ಮನೋಭಾವ ಕಡಮೆಯಾಗುತ್ತಿದೆ. ಹೀಗಾಗಿಯೇ ರಾಜಕಾರಣಿಯಾಗುವವ ಬದಲು 'ರಾಷ್ಟ್ರಕಾರಣಿ' ಆಗಬೇಕು. ರಾಜಕಾರಣಿ ಎಂದರೆ ಚುನಾವಣೆ ಗೆಲ್ಲುವುದಷ್ಟೇ, ರಾಷ್ಟ್ರಕಾರಣಿ ಎಂದರೆ ರಾಷ್ಟ್ರ ಬಗ್ಗೆ ಚಿಂತನೆ ಮಾಡುತ್ತಾರೆ. ಮುಂದಿನ ಪೀಳಿಗೆ ಬಗ್ಗೆ, ದೇಶಕ ಏನು ಕೊಡುಗೆ ಕೊಡಬೇಕು ಎಂಬುದರ ಬಗ್ಗೆ ಚಿಂತನೆ ಮಾಡುತ್ತಾರೆ. ರಾಷ್ಟ್ರಕಾರಣಿಗಳಲ್ಲಿ ಸ್ವಾರ್ಥ ಇರುವುದಿಲ್ಲ. ನಾನು ರಾಜಕಾರಣಿ ಅಲ್ಲ, ರಾಷ್ಟ್ರಕಾರಣಿ ಆಗಬೇಕು
ಎಂದುಕೊಂಡಿದ್ದೇನೆ. * ಈಗ ದೇಶದಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವ ಮೋದಿ ಬ್ಯಾಂಡ್ ಬಗ್ಗೆ ಏನು ಹೇಳುತ್ತೀರಿ?
ಕಳೆದ ಹತ್ತು ವರ್ಷದಲ್ಲಿ ಭಾರತ ದೇಶ ಆದ್ಭುತವಾಗಿ ಬೆಳವಣಿಗೆ ಕಂಡಿದೆ. ಸದೃಢವಾಗಿ ಬೆಳೆದಿದೆ. ತಂತ್ರಜ್ಞಾನ, ರಕ್ಷಣೆ, ವಿವಿಧ ಕ್ಷೇತ್ರಗಳಲ್ಲಿನ ವಿದೇಶಿ ಹೂಡಿಕೆಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ. ಇವುಗಳೆಲ್ಲ ದೀರ್ಘಾವಧಿಯ ಆಸ್ತಿ ಸೃಷ್ಟಿಯ ಪ್ರಕ್ರಿಯೆ. ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ_ ಸ್ಕಿಲ್ ಇಂಡಿಯಾ ಮತ್ತಿತರ ಪರಿಕಲ್ಪನೆಗಳನ್ನು ಸಾಕಾರಗೊಳಿಸು ತ್ತಿದ್ದಾರೆ. ಮೋದಿ ಒಬ್ಬ ದೂರದೃಷ್ಟಿಯ ನಾಯಕ.
• ಸೋಮವಾರ ಶಿವಮೊಗ್ಗದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಂಡ ಅನುಭವ ?
ಚೆನ್ನಾಗಿತ್ತು. ನಾನು ನನ್ನ ಹೆಸರು ಹೇಳುವ ಮೊದಲೇ 'ಹೌ ಆರ್ಯೂಡಾಕ್ಟರ್' (ಹೇಗಿದ್ದೀರಿಡಾಕ್ಟರ್) ಎಂದು ಪ್ರಧಾನಿ ಮೋದಿ ಕೇಳಿದರು. 'ಗುಡ್‌ಕ್, ಆಲ್ ದಿ ಬೆಸ್ಟ್" ಎಂದೆಲ್ಲ ಹೇಳಿದರು. ಅದೇ ವೇಳೆ ಪಕ್ಷದ ನಾಯಕರೊಬ್ಬರು ನನ್ನ ಪರಿಚಯ ಮಾಡಿಕೊಡಲು ಮುಂದಾಗುತ್ತಿದ್ದಂತೆಯೇ 'ಐ ನೋ ಎವರಿಥಿಂಗ್ ಅಬೋಟ್ ಡಾ.ಮಂಜುನಾಥ್' (ಡಾ. ಮಂಜುನಾಥ್ ಬಗ್ಗೆನನಗೆ ಎಲ್ಲವೂ ಗೊತ್ತಿದೆ) ಎಂದುಮೋದಿ ಅವರು ಹೇಳಿದರು.
ಯಡಿಯೂರಪ್ಪ ಅವರನ್ನು ಭೇಟಿಯಾಗಿ ಬಿಜೆಪಿ ಸೇರ್ಪಡೆ, ಲೋಕಸಭೆ ಸ್ಪರ್ಧೆ ಖಚಿತಪಡಿಸಿದ ಡಾ.ಸಿ.ಎನ್.ಮಂಜುನಾಥ್!
* ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಜನರ ಬಳಿ ಹೇಗೆ ಮತ ಯಾಚಿಸುತ್ತಿದ್ದೀರಿ?
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮೂರನೇ ಬಾರಿ ಚುನಾವಣೆ ಎದುರಿಸುತ್ತಿದೆ. ಅವರಿಗೆ ಹ್ಯಾಟ್ರಿಕ್ ಗೆಲುವು ಕೊಡಬೇಕಾಗಿದೆ. ಇದುವರೆಗೆ ಹಲವಾರು ಉತ್ತಮ ನಿರ್ಣಯಗಳನ್ನು ಕೈಗೊಂಡಿದ್ದಾರೆ. ಇನ್ನೂ ಹಲವು ಅಪೂರ್ಣವಾದ ಅಜೆಂಡಾಗಳಿವೆ. ಅವುಗಳನ್ನು ಮಾಡಿ ಮುಗಿಸಬೇಕಾಗಿದೆ.ಈಗಾಗಲೇಎರಡು ಅವಧಿಯಲ್ಲಿ ಮೋದಿ ಅವರು ತಮ್ಮ ನಾಯಕತ್ವವನ್ನು ಸಾಬೀತುಪಡಿಸಿದ್ದಾರೆ. ಜತೆಗೆ ಸ್ಥಿರ ಮತ್ತು ಪ್ರಗತಿದಾಯಕ ಸರ್ಕಾರ ಮುಂದುವರೆಯಬೇಕು ಎಂದರೆ ಮತ್ತೊಮ್ಮೆ ಅವರನ್ನು ಬೆಂಬಲಿಸಬೇಕು. ಹೀಗಾಗಿ ನನ್ನನ್ನು ಗೆಲ್ಲಿಸಿ ಎಂದು ಮತಯಾಚಿಸುತ್ತೇನೆ.
ನಿಮ್ಮನ್ನು ಚುನಾವಣೆಯಲ್ಲಿ ಕಣಕ್ಕಿಳಿಸುವ ಮೂಲಕ ಹರಕೆಯ ಕುರಿಯನ್ನಾಗಿ ಮಾಡಲಾಗಿದೆ ಎಂಬ ಟೀಕೆ ಕಾಂಗ್ರೆಸ್ ನಾಯಕರಿಂದ ಕೇಳಿಬರುತ್ತಿದೆ? ಅಂತಿಮವಾಗಿ ಇದಕ್ಕೆ ಜನರು ಉತ್ತರ ನೀಡುತ್ತಾರೆ.