Asianet Suvarna News Asianet Suvarna News

ದಕ್ಷಿಣ ಏಷ್ಯನ್‌ ಗೇಮ್ಸ್‌: ದ್ವಿಶ​ತ​ಕದತ್ತ ಭಾರತ ದಾಪು​ಗಾ​ಲು!

ದಕ್ಷಿಣ ಏಷ್ಯನ್ ಗೇಮ್ಸ್ ಕೂಟದಲ್ಲಿ ಭಾರತ ಇನ್ನೂರು ಪದಕಗಳತ್ತ ದಾಪುಗಳತ್ತ ದಾಪುಗಾಲು ಇಟ್ಟಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

South Asian Games India takes medal tally to 178
Author
Kathmandu, First Published Dec 7, 2019, 11:50 AM IST

ಕಾಠ್ಮಂಡು(ಡಿ.07): ದಕ್ಷಿಣ ಏಷ್ಯನ್‌ ಗೇಮ್ಸ್‌ನಲ್ಲಿ ಭಾರ​ತೀ​ಯ ಕ್ರೀಡಾ​ಪ​ಟು​ಗಳ ಅಬ್ಬರ ಮುಂದು​ವ​ರಿ​ದಿದೆ. ಕ್ರೀಡಾ​ಕೂ​ಟದ 5ನೇ ದಿನ​ವಾದ ಶುಕ್ರ​ವಾರ ಭಾರತ 28 ಚಿನ್ನಗಳೊಂದಿಗೆ ಬರೋ​ಬ್ಬರಿ 54 ಪದ​ಕ​ಗ​ಳನ್ನು ಗೆದ್ದು​ಕೊಂಡಿತು. 20 ಬೆಳ್ಳಿ, 6 ಕಂಚಿನ ಪದ​ಕ​ಗಳು ಸಹ ಭಾರ​ತದ ಖಾತೆಗೆ ಸೇರಿ​ಕೊಂಡವು. ಭಾರತ 200 ಪದಕಗಳತ್ತ ದಾಪು​ಗಾ​ಲಿ​ರಿ​ಸಿದೆ.

ದಕ್ಷಿಣ ಏಷ್ಯನ್‌ ಗೇಮ್ಸ್‌: 4ನೇ ದಿನ ಭಾರತ ಪದಕಗಳ ಫಿಫ್ಟಿ!

5ನೇ ದಿನದ ಮುಕ್ತಾ​ಯಕ್ಕೆ 90 ಚಿನ್ನ, 61 ಬೆಳ್ಳಿ ಹಾಗೂ 27 ಕಂಚಿನ ಪದ​ಕ​ಗ​ಳೊಂದಿಗೆ ಒಟ್ಟು 178 ಪದ​ಕ​ಗ​ಳನ್ನು ಜಯಿ​ಸಿ​ರುವ ಭಾರತ, ಪದ​ಕ ಪಟ್ಟಿ​ಯಲ್ಲಿ ಅಗ್ರ​ಸ್ಥಾ​ನ​ವನ್ನು ಭದ್ರ​ಪ​ಡಿ​ಸಿ​ಕೊಂಡಿದೆ. 116 ಪದ​ಕ​ಗ​ಳೊಂದಿಗೆ 2ನೇ ಸ್ಥಾನ​ದ​ಲ್ಲಿ​ರುವ ನೇಪಾಳ (41 ಚಿನ್ನ, 27 ಬೆಳ್ಳಿ, 48 ಕಂಚು) ವಿರುದ್ಧ ಭಾರ​ತ ಉತ್ತಮ ಅಂತರ ಕಾಯ್ದು​ಕೊಂಡಿದೆ. ಶ್ರೀಲಂಕಾ 138 ಪದ​ಕ​ಗ​ಳೊಂದಿಗೆ (23 ಚಿನ್ನ, 45 ಬೆಳ್ಳಿ, 69 ಕಂಚು) 3ನೇ ಸ್ಥಾನ​ದಲ್ಲಿ ಮುಂದು​ವ​ರಿ​ದಿದೆ.

ಭಾರ​ತೀಯ ಶಟ್ಲರ್‌ಗಳು ಶುಕ್ರ​ವಾರ 4 ಚಿನ್ನ, 2 ಬೆಳ್ಳಿ ಪದ​ಕ​ಗ​ಳನ್ನು ಗೆದ್ದರು. ಮೊದಲ ಮೂರು ದಿನ ಭರ್ಜರಿ ಪದಕ ಬೇಟೆ ನಡೆ​ಸಿದ ಅಥ್ಲೀಟ್‌ಗಳು ಶುಕ್ರ​ವಾರ 12 ಪದ​ಕ​ಗ​ಳನ್ನು ಜಯಿ​ಸಿ​ದರು. ಆದರೆ ಇದರಲ್ಲಿ ಕೇವಲ 2 ಮಾತ್ರ ಚಿನ್ನದ ಪದಕ. ಪುರು​ಷರ ಶಾಟ್‌ಪುಟ್‌ನಲ್ಲಿ ತೇಜಿಂದರ್‌ ಪಾಲ್‌ ಹಾಗೂ ಮಹಿಳೆಯರ ಶಾಟ್‌ಪುಟ್‌ನಲ್ಲಿ ಅಭಾ ಖಟುವಾ ಸ್ವರ್ಣಕ್ಕೆ ಮುತ್ತಿ​ಟ್ಟರು.

ಈಜು ಸ್ಪರ್ಧೆಯಲ್ಲಿ ಭಾರತ ಭರ್ಜರಿ ಪ್ರದ​ರ್ಶನ ಮುಂದು​ವ​ರಿ​ಸಿತು. ಕರ್ನಾ​ಟಕದ ಲಿಖಿತ್‌ ಎಸ್‌.ಪಿ. 2ನೇ ಚಿನ್ನದ ಪದ​ಕ ಗೆದ್ದರು. ರಾಜ್ಯದ ಮತ್ತೊಬ್ಬ ತಾರಾ ಈಜು​ಪಟು ಶ್ರೀಹರಿ ನಟ​ರಾಜ್‌ ಪುರು​ಷರ 200 ಮೀ. ಬ್ಯಾಕ್‌ಸ್ಟೊ್ರೕಕ್‌ನಲ್ಲಿ ಚಿನ್ನ ಜಯಿ​ಸಿ​ದರು. ಶ್ರೀಹರಿ, ಆಶಿಶ್‌ ವಿರಾಜ್‌, ಅನಿಲ್‌ ಕುಮಾರ್‌ ಹಾಗೂ ವೀರ್‌ಧವಳ್‌ ಖಾಡೆ ಅವ​ರ​ನ್ನೊ​ಳ​ಗೊಂಡ ತಂಡ 400 ಮೀ. ಫ್ರೀಸ್ಟೈಲ್‌ ರಿಲೇ ಸ್ಪರ್ಧೆ​ಯ​ಲ್ಲಿ ಬೆಳ್ಳಿ ಪದಕ ಗೆದ್ದು​ಕೊಂಡಿತು. ಈಜು ಸ್ಪರ್ಧೆಗಳಲ್ಲಿ ಭಾರತ 9 ಚಿನ್ನದೊಂದಿಗೆ ಒಟ್ಟು 21 ಪದ​ಕ​ಗ​ಳನ್ನು ಗೆದ್ದು ಮೊದಲ ಸ್ಥಾನ ಪಡೆ​ಯಿತು.

ಫೆನ್ಸಿಂಗ್‌ನಲ್ಲಿ ಭಾರತ 3 ಚಿನ್ನ ಗೆದ್ದರೆ, ಟೇಬಲ್‌ ಟೆನಿಸ್‌ನಲ್ಲಿ ತಲಾ ಒಂದು ಚಿನ್ನ ಹಾಗೂ ಬೆಳ್ಳಿ ದೊರೆ​ಯಿತು. ವೇಟ್‌ಲಿಫ್ಟಿಂಗ್‌ನಲ್ಲಿ ಭಾರತ 3 ಚಿನ್ನ ಹಾಗೂ 1 ಬೆಳ್ಳಿ ಪದಕ ಜಯಿ​ಸಿತು. ಶುಕ್ರ​ವಾರ ಸೈಕ್ಲಿಂಗ್‌ ಸ್ಪರ್ಧೆ​ಗಳು ಪ್ರಾರಂಭ​ಗೊಂಡವು. ಭಾರತ ಚಿನ್ನದ ಪದಕದೊಂದಿಗೆ ಖಾತೆ ತೆರೆ​ಯಿತು. ಒಟ್ಟು 2 ಚಿನ್ನ, 1 ಬೆಳ್ಳಿ ಪದ​ಕ​ವನ್ನು ಭಾರ​ತೀ​ಯ​ರು ಗೆದ್ದು​ಕೊಂಡರು. ಕ್ರೀಡಾ​ಕೂಟ ಇನ್ನು 4 ದಿನಗಳ ಕಾಲ ನಡೆ​ಯ​ಲಿದ್ದು, ಭಾರತ ಮತ್ತಷ್ಟು ಪದ​ಕ​ಗ​ಳನ್ನು ಗೆಲ್ಲುವ ಗುರಿ ಹೊಂದಿದೆ.
 

Follow Us:
Download App:
  • android
  • ios