ಜಾಗ್ರೆಬ್‌(ಕ್ರೊವೇಷಿಯಾ): ಭಾರತದ ಟೆನಿಸ್‌ ದಿಗ್ಗಜ ಲಿಯಾಂಡರ್‌ ಪೇಸ್‌ ಈ ವರ್ಷ ವೃತ್ತಿಬದುಕಿಗೆ ಗುಡ್‌ಬೈ ಹೇಳಲಿದ್ದು, ಆಯ್ದ ಟೂರ್ನಿಗಳನ್ನಷ್ಟೇ ಆಡುತ್ತಿದ್ದಾರೆ.

‘ಒನ್‌ ಲಾಸ್ಟ್‌ ರೋರ್‌’ ಹೆಸರಿನಲ್ಲಿ ಟೂರ್ನಿಗಳಲ್ಲಿ ಪಾಲ್ಗೊಳ್ಳುತ್ತಿರುವ ಪೇಸ್‌, ಬುಧವಾರ ಇಲ್ಲಿ 17 ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿಗಳ ವಿಜೇತ, ಹಾಲಿ ವಿಶ್ವ ನಂ.1 ಸಿಂಗಲ್ಸ್‌ ಆಟಗಾರ ಸರ್ಬಿಯಾದ ನೋವಾಕ್‌ ಜೋಕೋವಿಚ್‌ರನ್ನು ಭೇಟಿಯಾದರು. 

IPL ಟೂರ್ನಿಗೆ ತಯಾರಿ ಆರಂಭಿಸಿದ 8 ತಂಡಕ್ಕೆ ಶಾಕ್, BCCI ವಿರುದ್ದ ಅಸಮಾಧಾನ!...

ಶುಕ್ರವಾರದಿಂದ ತಮ್ಮ ಅಂತಿಮ ಡೇವಿಸ್‌ ಕಪ್‌ ಪಂದ್ಯವನ್ನು ಆಡಲಿರುವ ಪೇಸ್‌ಗೆ ಜೋಕೋವಿಚ್‌ ಶುಭಕೋರಿದರು. ಜೋಕೋವಿಚ್‌ಗೆ ಪೇಸ್‌ ವಿಶೇಷ ಜೆರ್ಸಿಯೊಂದನ್ನು ಉಡುಗೊರೆಯಾಗಿ ನೀಡಿದರು.