ನವದೆಹಲಿ(ಫೆ.26): ಭಾರತದ ಟೆನಿಸ್‌ ದಿಗ್ಗಜ ಲಿಯಾಂಡರ್‌ ಪೇಸ್‌ ಅವರನ್ನೊಳಗೊಂಡ ಐವರು ಆಟಗಾರರ ಭಾರತ ಡೇವಿಸ್‌ ಕಪ್‌ ತಂಡವನ್ನು ಆಲ್‌ ಇಂಡಿಯಾ ಟೆನಿಸ್‌ ಸಂಸ್ಥೆ(ಎಐಟಿಎ) ಆಯ್ಕೆ ಸಮಿತಿ ಮಂಗಳವಾರ ಪ್ರಕಟಿಸಿದೆ.

ವಿದಾಯದಲ್ಲೂ ಘರ್ಜಿಸಿದ ಲಿಯಾಂಡರ್ ಪೇಸ್; 30 ವರ್ಷ ಮಿನುಗಿತು ಭಾರತೀಯ ಟೆನಿಸ್

ಡೇವಿಸ್‌ ಕಪ್‌ ಹಣಾಹಣಿಯಲ್ಲಿ ಆಡಲಿರುವ ಐವರು ಸದಸ್ಯರ ಭಾರತ ತಂಡದಲ್ಲಿ ಹಿರಿಯ ಆಟಗಾರ ಲಿಯಾಂಡರ್‌ ಪೇಸ್‌ ಅವರನ್ನು ಉಳಿಸಿಕೊಳ್ಳಲು ಅಖಿಲ ಭಾರತ ಟೆನಿಸ್‌ ಸಂಸ್ಥೆ(ಎಐಟಿಎ) ಆಯ್ಕೆ ಸಮಿತಿ ಮಂಗಳವಾರ ತೀರ್ಮಾನಿಸಿದೆ. ಸುಮಿತ್‌ ನಗಾಲ್‌, ಪ್ರಜ್ಞೇಶ್‌ ಗುಣೇಶ್ವರನ್‌, ರಾಮ್‌ಕುಮಾರ್‌ ರಾಮನಾಥನ್‌ ಸಿಂಗಲ್ಸ್‌ ಆಟಗಾರರಾದರೆ, ಪೇಸ್‌ ಮತ್ತು ರೋಹನ್‌ ಬೋಪಣ್ಣ ಡಬಲ್ಸ್‌ ಆಟಗಾರರು. ದಿವಿಜ್‌ ಶರಣ್‌ ಮೀಸಲು ಆಟಗಾರರಾಗಿ ಸ್ಥಾನ ಪಡೆದಿದ್ದಾರೆ.

ಪೇಸ್‌ 2020ರಲ್ಲಿ ತಮ್ಮ ವೃತ್ತಿ ಜೀವನವನ್ನು ಕೊನೆಗೊಳಿಸುವುದಾಗಿ ಹೇಳಿದ್ದಾರೆ. ಹೀಗಾಗಿ ‘ಒನ್‌ ಲಾಸ್ಟ್‌ ರೋರ್‌’ ನಲ್ಲಿ ಪೇಸ್‌ ತಾವು ಆಯ್ಕೆ ಮಾಡಿಕೊಳ್ಳುವ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಎಐಟಿಎ ಭಾರತದ ಅಂತಿಮ ತಂಡವನ್ನು ಅಂತಾರಾಷ್ಟ್ರೀಯ ಟೆನಿಸ್‌ ಒಕ್ಕೂಟ(ಐಟಿಎಫ್‌ಗೆ)ಕ್ಕೆ ಕಳುಹಿಸಿದೆ.

ಲಿಯಾಂಡರ್ ಎನ್ನುವ ವಂಡರ್​ ಹುಡುಗ; ಟೆನಿಸ್ ಜಗತ್ತನ್ನೇ ತನ್ನತ್ತ ತಿರುಗಿಸಿದ ಸಲಗ!

ಮಾ. 6 ಮತ್ತು 7 ರಂದು ಕ್ರೋವೇಷಿಯಾದ ವಾಯವ್ಯ ರಾಜಧಾನಿ ಜಗ್ರೆಬ್‌ನಲ್ಲಿ ನಡೆಯಲಿರುವ ಅರ್ಹತಾ ಸುತ್ತಿನ ಹಣಾಹಣಿಗೆ ರಾಷ್ಟ್ರೀಯ ಒಕ್ಕೂಟ ಇದಕ್ಕೂ ಮೊದಲು ಆರು ಸದಸ್ಯರ ತಂಡವನ್ನು ಪ್ರಕಟಿಸಿತ್ತು. 24 ತಂಡಗಳ ಅರ್ಹತಾ ಸುತ್ತಲ್ಲಿ ಕ್ರೋವೇಷಿಯಾ ಅಗ್ರ ಶ್ರೇಯಾಂಕ ಹೊಂದಿದೆ. ವರ್ಷಾಂತ್ಯದಲ್ಲಿ ನಡೆಯಲಿರುವ ಡೇವಿಸ್‌ ಕಪ್‌ ಫೈನಲ್ಸ್‌ಗೆ 12 ವಿಜೇತ ತಂಡಗಳು ಅರ್ಹತೆ ಗಳಿಸಲಿದ್ದರೆ, ಸೋಲುವ ತಂಡಗಳು ವಿಶ್ವ ಗ್ರೂಪ್‌ 1ರ ಸಾಲಿಗೆ ಸೇರಲಿವೆ.