Asianet Suvarna News Asianet Suvarna News

ಏಷ್ಯನ್‌ ಶೂಟಿಂಗ್‌: ಚಿಂಕಿಗೆ ಒಲಿಂಪಿಕ್ಸ್‌ ಟಿಕೆಟ್

ಮುಂಬರುವ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಚಿಂಕಿ ಯಾದವ್ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಈ ಮೂಲಕ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ 11ನೇ ಭಾರತೀಯ ಶೂಟರ್ ಎನ್ನುವ ಗೌರವಕ್ಕೆ ಚಿಂಕಿ ಭಾಜನರಾಗಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Chinki Yadav clinches India 11th shooting quota for Tokyo Olympics 2020
Author
Doha, First Published Nov 9, 2019, 5:31 PM IST

ದೋಹಾ (ನ.09): 14ನೇ ಏಷ್ಯನ್‌ ಶೂಟಿಂಗ್‌ ಚಾಂಪಿಯನ್‌ಶಿಪ್‌ನ ವನಿತೆಯರ 25 ಮೀ. ಪಿಸ್ತೂಲ್‌ ಸ್ಪರ್ಧೆ​ಯ​ ಫೈನಲ್‌ ಪ್ರವೇಶಿಸಿದ ಚಿಂಕಿ ಯಾದವ್‌, 2020ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಸಂಪಾದಿಸಿದ್ದಾರೆ. 

ಮನು ಭಾಕರ್‌ಗೆ ಏಷ್ಯನ್‌ ಶೂಟಿಂಗ್‌ ಚಿನ್ನ!

ಅರ್ಹತಾ ಸುತ್ತಿನಲ್ಲಿ 588 ಅಂಕಗಳನ್ನು ಪಡೆದ ಚಿಂಕಿ ಫೈನಲ್‌ಗೇರಿದ್ದರು. ಆದರೆ ಫೈನಲ್‌ನಲ್ಲಿ 6ನೇ ಸ್ಥಾನ ಪಡೆದು ಪದಕ ಗೆಲ್ಲು​ವಲ್ಲಿ ವಿಫ​ಲ​ರಾ​ದರು. ಟೋಕಿಯೊ ಒಲಿಂಪಿ​ಕ್ಸ್‌ಗೆ ಅರ್ಹತೆ ಪಡೆದ ಭಾರ​ತದ 11ನೇ ಶೂಟರ್‌ ಎನ್ನುವ ಹಿರಿಮೆಗೆ ಮಧ್ಯಪ್ರದೇ​ಶದ 21 ವರ್ಷದ ಚಿಂಕಿ ಪಾತ್ರರಾಗಿ​ದ್ದಾರೆ. 

ರಷ್ಯಾ ವಿರುದ್ದ ಭರ್ಜರಿ ಗೆಲುವು, ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಹಾಕಿ ಇಂಡಿಯಾ!

25 ಮೀ. ಪಿಸ್ತೂಲ್‌ ವಿಭಾ​ಗ​ದಲ್ಲಿ ಭಾರ​ತ​ಕ್ಕಿದು 2ನೇ ಕೋಟಾ ಆಗಿದೆ. ಇದೇ ವರ್ಷ ಜರ್ಮ​ನಿಯ ಮ್ಯೂನಿಕ್‌ನಲ್ಲಿ ನಡೆ​ದಿದ್ದ ವಿಶ್ವ​ಕಪ್‌ನಲ್ಲಿ ರಾಹಿ ಸರ್ನೊ​ಬತ್‌, ಟೋಕಿಯೋ ಗೇಮ್ಸ್‌ಗೆ ಅರ್ಹತೆ ಗಳಿ​ಸಿ​ದ್ದರು. ಇನ್ನು ಇದೇ ಕೂಟದಲ್ಲಿ ಮೊದಲ ದಿನ ಪುರುಷರ 10 ಮೀ. ಏರ್‌ ರೈಫಲ್‌ ವಿಭಾಗದಲ್ಲಿ  3ನೇ ಸ್ಥಾನ ಗಳಿಸುವ ಮೂಲಕ ದೀಪಕ್‌ ಕುಮಾರ್‌ 2020 ಒಲಿಂಪಿಕ್ಸ್’ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು.

Follow Us:
Download App:
  • android
  • ios