Asianet Suvarna News Asianet Suvarna News

ಬಹ್ರೇನ್‌ನಲ್ಲಿ ಪಸರಿಸಿದ ಕಸ್ತೂರಿ ಕನ್ನಡದ ಕಂಪು!

Oct 5, 2018, 10:21 AM IST

ಬೆಂಗಳೂರು(ಅ.5): ಇತಿಹಾಸದಲ್ಲೇ ಇದೇ ಪ್ರಥಮ ಬಾರಿಗೆ ಕನ್ನಡ ಸಾಹಿತ್ಯ ಪರಿಷತ್ ನಿಂದ ಹೊರದೇಶದಲ್ಲಿ ಅಂತರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನ ಏರ್ಪಡಿಸಲಾಗಿದೆ. ದ್ವೀಪ ರಾಷ್ಟ್ರ ಬಹ್ರೇನ್ ರಾಜಧಾನಿ ಮನಾಮದಲ್ಲಿರುವ ದಿ ಇಂಡಿಯನ್ ಕ್ಲಬ್ ನಲ್ಲಿ ಅಕ್ಟೋಬರ್ 5 ಹಾಗೂ 6 ಸಮ್ಮೇಳನ ಆಯೋಜಿಸಲಾಗಿದೆ. ಬಹ್ರೇನ್ ಕನ್ನಡ ಸಂಘದ ಸಹಕಾರದೊಂದಿಗೆ ಕನ್ನಡ ಸಾಹಿತ್ಯ ಪರಿಷತ್, ಹಂಪಿ ಕನ್ನಡ ವಿವಿ ಆಯೋಜಿಸಿರುವ ಸಮ್ಮೇಳನದಲ್ಲಿ ಕರ್ನಾಟಕದಿಂದ ಖ್ಯಾತ ಕವಿಗಳು, ಲೇಖಕರು ಭಾಗವಹಿಸುತ್ತಿದ್ದಾರೆ. ಕನ್ನಡ ಸಮ್ಮೇಳನಕ್ಕೆ ಗಲ್ಫ್ ದೇಶಗಳಲ್ಲಿ ನೆಲೆಸಿರೋ ಸಾವಿರಾರು ಅನಿವಾಸಿ ಕನ್ನಡಿಗರ ಸಾಕ್ಷಿಯಾಗಲಿದ್ದಾರೆ.

Video Top Stories