Asianet Suvarna News Asianet Suvarna News

ಮೋದಿ-ರಾಹುಲ್‌ ಭವಿಷ್ಯ ಯುವ ಮತದಾರರ ಕೈಲಿ!

ಮೋದಿ-ರಾಹುಲ್‌ ಭವಿಷ್ಯ ಯುವ ಮತದಾರರ ಕೈಲಿ! ಪ್ರತಿವರ್ಷ 2 ಕೋಟಿ ಜನರು ಮತದಾನಕ್ಕೆ ಅರ್ಹರಾಗುತ್ತಾರೆ | ಬಿಜೆಪಿಯಿಂದ ಮೋದಿಗೆ ಮೊದಲ ಮತ ಅಭಿಯಾನ ಶುರು 

Youngsters will decide Modi and Rahul Gandhi future in Loksabha Election 2019
Author
Bengaluru, First Published Jan 20, 2019, 10:14 AM IST

ಬೆಂಗಳೂರು (ಜ. 20): ಬಿಜೆಪಿ ಯುವ ಘಟಕವು ‘ಮೋದಿಗೆ ಮೊದಲ ಮತ’ ಎಂಬ ಆಂದೋಲನ ಪ್ರಾರಂಭಿಸಿದೆ. ಕಾಂಗ್ರೆಸ್‌ ಕೂಡ ಯುವ ಮತದಾರರ ಓಲೈಕೆಗೆ ಮುಂದಾಗಿದೆ. ಭಾರತದಲ್ಲಿ ಪ್ರತಿ ವರ್ಷ 2 ಕೋಟಿ ಜನರು 18 ವರ್ಷ ತುಂಬಿ ಮತದಾನಕ್ಕೆ ಅರ್ಹತೆ ಪಡೆಯುತ್ತಾರೆ.

2011ರ ಜನಗಣತಿಯಲ್ಲಿ ಸುಮಾರು 3 ಕೋಟಿ ಭಾರತೀಯರು 10 ವರ್ಷದವರಾಗಿದ್ದರು. 2019ರಲ್ಲಿ ಅವರೆಲ್ಲಾ ಮತದಾನಕ್ಕೆ ಅರ್ಹತೆ ಪಡೆಯುತ್ತಾರೆ. ನಾಳೆ (ಜ.21) ಚುನಾವಣಾ ಆಯೋಗ ಅಧಿಕೃತ ಮತದಾರರ ಪಟ್ಟಿಬಿಡುಗಡೆ ಮಾಡಲಿದೆ.

13 ಕೋಟಿ ನೂತನ ಮತದಾರರು

2011ರ ಜನಗಣತಿ ಪ್ರಕಾರ ದೇಶದ ಒಟ್ಟು ಜನಸಂಖ್ಯೆಯಲ್ಲಿ 10-35 ವರ್ಷದವರ ಸಂಖ್ಯೆ 58.3 ಕೋಟಿ. ಯುವಜನರ (10-15) ಸಂಖ್ಯೆ 15.8 ಕೋಟಿ. ಒಟ್ಟು ಯುವಜನರ ಪೈಕಿ ಶೇ.70 ಜನರು ಗ್ರಾಮೀಣ ಪ್ರದೇಶದಲ್ಲಿದ್ದಾರೆ. ಅಂದರೆ

ಯಾರಿಗೆ ಎಷ್ಟುಯುವ ಮತ?

ವರ್ಷ    ಬಿಜೆಪಿ ಕಾಂಗ್ರೆಸ್‌

1999    26%    27%

2004    23%    27%

2009    20%    28%

2014    34%    19%

ಮೋದಿಯನ್ನು ಗೆಲ್ಲಿಸಿದ್ದು ಯುವಕರೇ!

2014ರ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯ ಗಳಿಸಲು ಮೂಲ ಕಾರಣ ಹೊಸತಾಗಿ ಮತದಾರರ ಪಟ್ಟಿಸೇರಿದ್ದ ಮತದಾರರು ಮತ್ತು ಯುವ ಮತದಾರರು. ಆ ವರ್ಷ ಸುಮಾರು 15 ಕೋಟಿ ಯುವಕರು ಮೊಟ್ಟಮೊದಲ ಬಾರಿ ಮತದಾನದ ಅರ್ಹತೆ ಪಡೆದಿದ್ದರು.

ಇಷ್ಟುಸಂಖ್ಯೆಯ ಜನರು ಒಟ್ಟಿಗೇ ಮತದಾನದ ಅರ್ಹತೆ ಪಡೆದಿದ್ದು ದೇಶದ ಇತಿಹಾಸದಲ್ಲಿಯೇ ಮೊದಲು. ಆ ವರ್ಷ ದೇಶದ ಇತಿಹಾಸದಲ್ಲಿಯೇ ಅತಿ ಹೆಚ್ಚು, ಅಂದರೆ, ಶೇ.66ರಷ್ಟುಮತದಾನವಾಗಿತ್ತು. ಶೇ.68 ಯುವ ಮತದಾರರು ಮತದಾನ ಮಾಡಿದ್ದರು.

ಯುವಕರ ಮತ ಏಕೆ ಮುಖ್ಯ?

ಮೊದಲ ಬಾರಿಗೆ ಮತ ಹಾಕುವವರ ಆಲೋಚನೆ ಹೇಗಿರುತ್ತದೆ ಎಂದು ಊಹಿಸುವುದು ಕಷ್ಟ. ಅವರೆಲ್ಲರೂ ವಿದ್ಯಾವಂತರು, ದೇಶದ ರಾಜಕೀಯದಲ್ಲಿ ಏನಾಗುತ್ತಿದೆ ಎಂಬ ಸ್ಪಷ್ಟಅರಿವು ಅವರಿಗಿದೆ. ಹಾಗಾಗಿ ಕುಟುಂಬದ ನಿರ್ಧಾರಗಳಿಗೆ ಕಟ್ಟುಬೀಳುವವರಲ್ಲ. ಕೆಲವೊಮ್ಮೆ ತಮ್ಮ ಕುಟುಂಬದ ಮತ ಯಾರಿಗೆ ಎಂದು ನಿರ್ಧಾರ ಮಾಡುವವರೂ ಅವರಾಗಿರುತ್ತಾರೆ. ಜೊತೆಗೆ ಸ್ಮಾರ್ಟ್‌ ಫೋನ್‌, 4ಜಿ ಇತ್ಯಾದಿ ತಂತ್ರಜ್ಞಾನವು ಯುವಕರ ಜ್ಞಾನವನ್ನು ಮತ್ತಷ್ಟುಹೆಚ್ಚಿಸುತ್ತಿವೆ. ಹೀಗಾಗಿ ಯುವ ಮತದಾರರೇ ಈ ಬಾರಿ ದೇಶದ ಭವಿಷ್ಯವನ್ನು ನಿರ್ಧರಿಸಲಿದ್ದಾರೆ ಎಂಬ ವಿಶ್ಲೇಷಣೆಗಳಿವೆ.

ಕರ್ನಾಟಕದಲ್ಲಿ 7 ಲಕ್ಷ ನೂತನ ಮತದಾರರು

ಮುಂದಿನ ಲೋಕಸಭಾ ಚುನಾವಣೆಗೆ ಕರ್ನಾಟದಲ್ಲಿ 5 ಕೋಟಿಗೂ ಹೆಚ್ಚು ಜನರು ಮತದಾನದ ಅರ್ಹತೆ ಪಡೆದಿದ್ದಾರೆ. 2014ರಲ್ಲಿ ಅದು 4.6 ಕೋಟಿ ಇತ್ತು. ಈಗ ಶೇ.9ರಷ್ಟುಏರಿಕೆಯಾಗಿದೆ. ರಾಜ್ಯದಲ್ಲಿ ಈ ಬಾರಿ 7 ಲಕ್ಷ ಜನರು ನೂತನವಾಗಿ ಮತದಾರರ ಪಟ್ಟಿಸೇರಿದ್ದಾರೆ.
 

Follow Us:
Download App:
  • android
  • ios