ಕೊಡಗು[ಆ.15]  ಮೈಸೂರು ಸಿಲ್ಕ್ ಸ್ಯಾರಿಯನ್ನು  ಆ. 21ರಂದ  ನೀಡಲಾಗುವುದು. ಈ ವರ್ಷ 10 ಸಾವಿರ ಸೀರೆಗಳ ವಿತರಣೆ  ಮಾಡಲಾಗುವುದು ಎಂದು  ಡಿಕೇರಿಯಲ್ಲಿ ಪ್ರವಾಸೋಧ್ಯಮ ಸಚಿವ ಸಾ ರಾ ಮಹೇಶ್ ಹೇಳಿಕೆ ನೀಡಿದ್ದಾರೆ. ಈ ಮೂಲಕ ಹಲವು ದಿನಗಳಿಂದ ಎದ್ದಿದ್ದ ಸೀರೆ ಅನುಮಾನಕ್ಕೆ ತೆರೆ ಎಳೆದಿದ್ದಾರೆ.

ಮುಂದಿನ ವರ್ಷವೂ ಇದೇ ರೀತಿ ಸೀರೆಗಳ ವಿತರಣೆ ಮಾಡಲಾಗುವುದು. ಪಡೆದವರೇ ಮತ್ತೆ ಪಡೆಯಬಾರದೆಂದು ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗುತ್ತಿದೆ.  ಮುಖ್ಯಮಂತ್ರಿ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ಪ್ರಯೋಜನ ಪಡೆಯುವವರು ಸೀರೆ ಖರೀದಿಗೂ ಮುನ್ನ ತಮ್ಮ ಆಧಾರ್‌ಕಾರ್ಡ್‌ ಪ್ರತಿ ನೀಡುವುದು ಕಡ್ಡಾಯ. ಮೊದಲು ಬಂದವರಿಗೆ ಆದ್ಯತೆ ನೀತಿಯಿಂದ ನಡೆಯಲಿದೆ. ಒಬ್ಬರಿಗೆ ಒಂದೇ ಸೀರೆ. ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದಲ್ಲಿ ಮೈಸೂರು ಸಿಲ್ಕ್‌ ಸ್ಯಾರಿ ದಾಸ್ತಾನು ಮುಗಿದ ಕೂಡಲೇ ಮಾರಾಟ ನಿಲ್ಲಿಸಲಾಗುವುದು.

ವರಮಹಾಲಕ್ಷ್ಮೀ ಹಬ್ಬಕ್ಕೆ ರಿಯಾಯಿತಿ ದರದಲ್ಲಿ ಸೀರೆ ನೀಡುತ್ತೇನೆ ಎಂದು ಹೇಳಿದ್ದ ಸರಕಾರದ ಮೇಲೆ ಆರೋಪಗಳು ಎದುರಾಗಿದ್ದವು. ಹಳೆಯ ದಾಸ್ತಾನು ಮಾರಾಟಕ್ಕೆ ಸರಕಾರ ಮುಂದಾಗಿದೆ ಎಂಬ ಆರೋಪವೂ ಕೇಳಿಬಂದಿತ್ತು.

  •