ನವದೆಹಲಿ : ಹಿರಿಯ ಬಿಜೆಪಿ ಮುಖಂಡ ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಅಲ್ಲದೇ  ರಾಷ್ಟ್ರಾದ್ಯಂತ ಪ್ರಜಾಪ್ರಭುತ್ವವನ್ನು ಉಳಿಸಿ ಆಂದೋಲನವನ್ನು ಮಾಡುವುದಾಗಿ ಅವರು ಹೇಳಿದ್ದಾರೆ. 

ಯಾವುದೇ ರೀತಿಯಾದ ಪಕ್ಷ ರಾಜಕಾರಣದಲ್ಲಿಯೂ ಪಾಲ್ಗೊಳ್ಳದೇ ರಾಜಕೀಯ ಸನ್ಯಾಸತ್ವ ಸ್ವೀಕಾರ ಮಾಡುವುದಾಗಿ ಪಾಟ್ನಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಇದೀಗ ಪಕ್ಷವನ್ನು ಬಿಡುತ್ತಿದ್ದು, ಇದಕ್ಕೆ ಬಿಜೆಪಿಯಲ್ಲಿರುವ ಕಂಡಿಶನ್’ಗಳೇ ಕಾರಣ.  ತಾವು ಯಾವುದೇ ಪಕ್ಷಕ್ಕೂ ಹೋಗುವುದಿಲ್ಲ. ನಾನು ಯಾವುದೇ ಹುದ್ದೆಯ ಆಕಾಂಕ್ಷಿಯೂ ಅಲ್ಲ ಎಂದು ಹೇಳಿದ್ದಾರೆ.