ಬೆಂಗಳೂರು[ಆ.04]: ನಗರದದಲ್ಲಿ ಎಕ್ಸ್ಸೀಡ್ ಎಜುಕೇಷನ್ ಸಂಸ್ಥೆ ಹಮ್ಮಿಕೊಂಡಿದ್ದ ಎಕ್ಸ್ ಇಡಿ-2018 ವಿಡಿಯೋ ಕಾನ್ಫರೆನ್ಸ್ ಕಾರ್ಯಕ್ರಮದಲ್ಲಿ ವಿಶ್ವವಿಖ್ಯಾತ ಶಿಕ್ಷಣ ತಜ್ಞ ಡಾ.ಹೋವರ್ಡ್ ಗಾರ್ಡ್ನರ್ ಹಲವು ಶಿಕ್ಷಣ ತಜ್ಞರೊಂದಿಗೆ  ಸಂವಾದ ನಡೆಸಿದರು.

ಈ ಸಂದರ್ಭದಲ್ಲಿ ತಜ್ಞರೊಂದಿಗೆ ಸಂವಾದ ನಡೆಸಿದ ಗಾರ್ಡ್ನರ್, ಶಾಲಾ ಕಲಿಕೆಯಲ್ಲಿ ತಂತ್ರಜ್ಞಾನ ಅತ್ಯಗತ್ಯವಾಗಿದ್ದು ಮಕ್ಕಳ ಜ್ಞಾನದ ಮಟ್ಟ ಹೆಚ್ಚಿಸುವಲ್ಲಿ ಸಹಕಾರಿಯಾಗಲಿದೆ. ಭವಿಷ್ಯದ ದೃಷ್ಟಿಯಿಂದ ಮಕ್ಕಳಲ್ಲಿ ಸೃಜನಶೀಲತೆ ಹೆಚ್ಚಿಸುವಲ್ಲಿ ತಂತ್ರಜ್ಞಾನ ಪರಿಣಾಮಕಾರಿ ಎಂದು ಗಾರ್ಡ್ನರ್  ಅಭಿಪ್ರಾಯಪಟ್ಟರು. 

ಭವಿಷ್ಯದಲ್ಲಿ ಆಟೋಮೇಶನ್ ಮತ್ತು ಆರ್ಟಿಫಿಶಿಯಲ್  ಇಂಟಲಿಜೆನ್ಸ್ ನಲ್ಲಿ ತಂತ್ರಜ್ಞಾನದ ತೊಡಕುಗಳು ಎದುರಾಗುವ ಸಾಧ್ಯತೆಗಳಿರುವ ಹಿನ್ನಲೆಯಲ್ಲಿ ಆ ಬದಲಾವಣೆಗೆ ಈಗಿನಿಂದಲೇ ಅಣಿಯಾಗಬೇಕುತ್ತದೆ.ವಿದ್ಯಾರ್ಥಿಗಳು ಕೂಡ ಈ ರೀತಿಯ ಸವಾಲುಗಳನ್ನು ಎದುರಿಸಲು ಈಗಿನಿಂದಲೇ ಸಿದ್ದರಾಗಬೇಕು. ವಿದ್ಯಾರ್ಥಿಗಳನ್ನು ಉನ್ನತ ಹಂತದ ಜ್ಞಾನಾರ್ಜನೆಗೆ ಅಣಿಗೊಳಿಸಬೇಕಾದ ತುರ್ತು ಕೆಲಸ ಆಗಬೇಕಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಕ್ಕಳು, ಶಿಕ್ಷಕರು ಹಾಗೂ ಶಾಲಾ ಆಡಳಿತ ಮಂಡಳಿ ಸದಸ್ಯರು ತಂತ್ರಜ್ಞಾನ ಬಳಕೆಯಿಂದ ತಮಗಾದ ಅನುಕೂಲಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡರು. ಎಕ್ಸ್ಸೀಡ್ ಸಂಸ್ಥೆಯ ಸಂಸ್ಥಾಪಕ ಹಾಗೂ ಸಿಎಓ ಆಶಿಶ್ ರಾಜ್ಪಾಲ್ ,ಗಾರ್ಡ್ನರ್  ಜೊತೆ ಸಂವಾದ ನಡೆಸಿದರು. ಸಮ್ಮೇಳನದಲ್ಲಿ ದೇಶದ 400ಕ್ಕೂ ಹೆಚ್ಚು ಶಾಲೆಗಳ ಮುಖ್ಯಸ್ಥರು ಭಾಗವಹಿಸಿದ್ದರು.