ಬೆಂಗಳೂರು(ಡಿ. 04)  'ಮಹಿಳೆಯರು ತಮ್ಮ ಜೊತೆ ಕಾಂಡೋಮ್ ಇಟ್ಟುಕೊಂಡು ಅತ್ಯಾಚಾರಿಗಳಿಗೆ ಸಹಕರಿಸಬೇಕು'  ಇದು ನಿರ್ದೇಶಕನೊಬ್ಬ ಹೇಳಿದ ಮಾತು!

ಸಿನಿಮಾ ನಿರ್ದೇಶಕ ಡೇನಿಯಲ್ ಶ್ರವಣ್ ತನ್ನ ಫೇಸ್‍ಬುಕ್‍ನಲ್ಲಿ ರೀತಿಯ ಪೋಸ್ಟ್ ಹಾಕಿಕೊಂಡಿದ್ದು ಆಕ್ರೊಶಕ್ಕೆ ಗುರಿಯಾಗಿದೆ. ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಆತನನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಹೈದರಾಬಾದ್‍ನಲ್ಲಿ ನಡೆದ ಪಶುವೈದ್ಯೆಯ ಹತ್ಯೆಗೆ ಸಂಬಂಧಿಸಿದಂತೆ ಡೇನಿಯಲ್ ತನ್ನ ಫೇಸ್‍ಬುಕ್‍ನಲ್ಲಿ ಈ ರೀತಿಯ ಪೋಸ್ಟ್ ಹಾಕಿಕೊಂಡಿದ್ದು ಆಕ್ರೊಶ ಕೇಳಿಬರುತ್ತಲೇ ಇದು ತನ್ನ ಹೊಸ ಚಿತ್ರದ ಸಂಭಾಷಣೆ ಎಂಬ ಸಬೂಬು ನೀಡಲು ಮುಂದಾಗಿದ್ದಾನೆ.

ವೈದ್ಯೆ ಕಿರುಚದಂತೆ ವಿಸ್ಕಿ ಸುರಿದಿದ್ದ ರೇಪಿಸ್ಟ್‌ಗಳು: ಪ್ರಜ್ಞೆ ತಪ್ಪಿದಾಗ ಅತ್ಯಾಚಾರ!...

ಮಹಿಳೆಯರು ತಮ್ಮ ಜೊತೆ ಕಾಂಡೋಮ್ ಇಟ್ಟುಕೊಂಡು ಅತ್ಯಾಚಾರಿಗಳಿಗೆ ಸಹಕರಿಸಬೇಕು. ಅತ್ಯಾಚಾರಕ್ಕೆ ಒಳಗಾದವರ ಹತ್ಯೆಯನ್ನು ನಿಯಂತ್ರಿಸುವ ಏಕೈಕ ದಾರಿ ಏನೆಂದರೆ ‘ಹಿಂಸಾಚಾರವಿಲ್ಲದೆ ನಡೆದುಕೊಳ್ಳುವುದು. ಅತ್ಯಾಚಾರ ಸಮಯದಲ್ಲಿ ವಿರೋಧಿಸುವುದನ್ನು ಬಿಟ್ಟು ಸಹಕರಿಸಬೇಕು ಎಂಬ ಘನಂದಾರಿ ಪೋಸ್ಟ್ ಹಾಕಿದ್ದಾನೆ.

18 ವರ್ಷ ಮೇಲ್ಪಟ್ಟ ಯುವತಿಯರಿಗೆ ಅತ್ಯಾಚಾರದ ಬಗ್ಗೆ ಶಿಕ್ಷಣ ನೀಡಬೇಕು. ಹೀಗೆ ಮಾಡಿದರೆ ಮಾತ್ರ ಈ ರೀತಿ  ಪ್ರಕರಣಗಳು ನಡೆಯುವುದಿಲ್ಲ. ಪುರುಷರ ಲೈಂಗಿಕ ಕಾಮನೆ ನಿಯಂತ್ರಿಸಬಾರದು. ಅದನ್ನು ಪೂರೈಸಲು ಅವಾಕಾಶ ನೀಡಿದರೆ ಹತ್ಯೆಯಿಂದ ಪಾರಾಗಬಹುದು ಎಂಬ ಬಾಲಿಶ ಐಡಿಯಾ ನೀಡಲು ಈ ನಿರ್ದೇಶಕ ಹಿಂದೆ ಬಿದ್ದಿಲ್ಲ.

ದೇಶ ಕಟ್ಟಲು ಹೊರಟ ನಿತ್ಯಾನಂದ, ದೊರೆ ನಡೆ ಅದೆಷ್ಟು ಚೆಂದ: ಟಾಪ್ 10 ಸುದ್ದಿ!...

ಪುರುಷರ ಬಯಕೆ ಈಡೇರಿದರೆ ಅವರು ಮಹಿಳೆಯರನ್ನು ಕೊಲೆ ಮಾಡುವುದಿಲ್ಲ. ಸಮಾಜ, ಸರ್ಕಾರ ಹಾಗೂ ಮಹಿಳಾ ಸಂಘಟನೆ ನಿರ್ಭಯಾ ಕಾಯ್ದೆ, ಪೆಪ್ಪರ್ ಸ್ಪ್ರೇಯಿಂದ ಅತ್ಯಾಚಾರಿಗಳನ್ನು ಹೆದರಿಸುತ್ತಿದೆ. . ಮಹಿಳೆಯರು ಪುರುಷರ ಜೊತೆಗೆ ದೈಹಿಕ ಸಂಬಂಧ ಬೆಳೆಸುವುದು ಒಳ್ಳೆಯದು ಎಂದೆಲ್ಲಾ ಬೇಕು ಬೇಕಾದ ಹಾಗೆ ಬರೆದು ಶ್ರವಣ್ ಪೋಸ್ಟ್ ಹಾಕಿದ್ದನು.