Asianet Suvarna News Asianet Suvarna News

ಶೌಚಾಲಯದ ಬಾಗಿಲು ಹಾಕಿ ಮಹಿಳೆ ಮೇಲೆ ಅತ್ಯಾಚಾರ

ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಬಾಗಿಲು ಹಾಕಿ ಅತ್ಯಾಚಾರ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

Women Raped In Toilet Accused Arrest
Author
Bengaluru, First Published Oct 20, 2018, 7:31 AM IST
  • Facebook
  • Twitter
  • Whatsapp

ಬೆಂಗಳೂರು :  ಶೌಚಾಲಯದ ಬಾಗಿಲು ಹಾಕಿ ಹೌಸ್‌ ಕೀಪಿಂಗ್‌ ಕೆಲಸ ಮಾಡುವ ಮಹಿಳೆ ಮೇಲೆ ಅತ್ಯಾಚಾರ ಮಾಡಿರುವ ಘಟನೆ ಮಾರತ್‌ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಈ ಸಂಬಂಧ ಸಂತ್ರಸ್ತ ಮಹಿಳೆ ನೀಡಿದ ದೂರಿನ ಮೇರೆಗೆ ಆರೋಪಿ ಮೋಹನ್‌ಬಾಬು (27) ಎಂಬಾತನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂಲತಃ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮೋಹನ್‌ಬಾಬು ಮಾರತ್‌ಹಳ್ಳಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದ. ದೇವರಬೀಸನಹಳ್ಳಿಯ ಎಂಬೆಸ್ಸಿ ಟೆಕ್‌ಪಾರ್ಕ್ನಲ್ಲಿರುವ ಖಾಸಗಿ ಕಂಪನಿಯಲ್ಲಿ ಹೌಸ್‌ ಕೀಪಿಂಗ್‌ ಮ್ಯಾನೇಜರ್‌ ಆಗಿದ್ದ. 

ಇದೇ ಕಂಪನಿಯಲ್ಲಿ ಒಂದೂವರೆ ವರ್ಷದಿಂದ ಸಂತ್ರಸ್ತ ಮಹಿಳೆ ಹೌಸ್‌ ಕೀಪಿಂಗ್‌ ಕೆಲಸ ಮಾಡುತ್ತಿದ್ದರು. ಅ.5ರಂದು ಮಧ್ಯಾಹ್ನ 1.30ರ ಸುಮಾರಿಗೆ ಆರೋಪಿ ಮೋಹನ್‌ ಬಾಬು, ಮಹಿಳೆಗೆ ಶೌಚಾಲಯ ಶುಚಿಗೊಳಿಸುವಂತೆ ಸೂಚಿಸಿದ್ದ. ಅದರಂತೆ ಸಂತ್ರಸ್ತ ಮಹಿಳೆ ಶೌಚಾಲಯಕ್ಕೆ ಶುಚಿಗೊಳಿಸಲು ಹೋಗಿದ್ದಾರೆ. ಈ ವೇಳೆ ಉದ್ಯೋಗಿಗಳು ಊಟಕ್ಕೆ ಹೋಗಿದ್ದರಿಂದ ಯಾರು ಇಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡು ಮಹಿಳಾ ಶೌಚಾಲಯಕ್ಕೆ ತೆರಳಿ ಬಾಗಿಲು ಹಾಕಿಕೊಂಡಿದ್ದ. ಬಳಿಕ ಮಹಿಳೆಯ ಬಾಯಿ ಮುಚ್ಚಿ ಅತ್ಯಾಚಾರ ಎಸಗಿದ್ದಾನೆ. ಘಟನೆ ಬಳಿಕ ಹೆದರಿದ ಮಹಿಳೆ ಯಾರಿಗೂ ಹೇಳದೆ ಮನೆಗೆ ಬಂದಿದ್ದರು.

ಅಲ್ಲದೆ, ಘಟನೆ ನಡೆದ ಬಳಿಕ ವಿವಾಹಿತ ಮಹಿಳೆ ಒಂದು ವಾರ ಕೆಲಸಕ್ಕೆ ಹೋಗಿಲ್ಲ. ಕೆಲಸಕ್ಕೆ ಹೋಗದೆ ಪತ್ನಿ ಮನೆಯಲ್ಲಿರುವ ಬಗ್ಗೆ ಪತಿ ಪ್ರಶ್ನೆ ಮಾಡಿದ್ದರು. ಈ ವೇಳೆ ನೊಂದ ಮಹಿಳೆ ನಡೆದ ಘಟನೆ ಬಗ್ಗೆ ಪತಿ ಬಳಿ ಹೇಳಿಕೊಂಡಿದ್ದರು. ನಂತರ ಪತಿಯೊಂದಿಗೆ ತೆರಳಿದ ಸಂತ್ರಸ್ತ ಮಹಿಳೆ ನೀಡಿದ ದೂರಿನ ಮೇರೆಗೆ ಆರೋಪಿಯ ವಿರುದ್ಧ ಅತ್ಯಾಚಾರ ಪ್ರಕರಣದ ಆರೋಪದ ಮೇಲೆ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಆರೋಪಿ ಈ ಹಿಂದೆ ಕೂಡ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದ. ಅಲ್ಲದೆ, ಇದೇ ರೀತಿ ಹಲವು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದು, ಯಾರು ದೂರು ನೀಡಿರಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಮಾರತ್ತಹಳ್ಳಿ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios