Asianet Suvarna News Asianet Suvarna News

ಪ್ರೇಮಿ ಜೊತೆ ಬೀಚ್ ಗೆ ತೆರಳಿದ್ದ ಯುವತಿ ಮೇಲೆ ಎರಗಿದ ಕಾಮುಕರು

ಮಂಗಳೂರಿನಲ್ಲಿ ಪ್ರೇಮಿಯ ಜೊತೆಗೆ ಬೀಚ್ ಗೆ ತೆರಳಿದ್ದ ಯುವತಿ ಮೇಲೆ ಗುಂಪೊಂದು ಎರಗಿ ಸಾಮೂಹಿಕ ಅತ್ಯಾಚಾರ ನಡೆಸಿದ್ದು, ಈ ಸಂಬಂಧ 6 ಯುವಕರನ್ನು ಬಂಧಿಸಲಾಗಿದೆ. 

Women Gang Raped By 7 Men In Mangalore Beach
Author
Bengaluru, First Published Nov 27, 2018, 12:06 PM IST

ಮಂಗಳೂರು : ನಗರದ ಹೊರವಲಯದ ತೋಟಬೆಂಗ್ರೆ ಕಡಲ ಕಿನಾರೆಯಲ್ಲಿ ಪ್ರೇಮಿಯೊಂದಿಗೆ ಸುತ್ತಾಡಲು ಹೋಗಿದ್ದ ಯುವತಿಯ ಮೇಲೆ ಏಳು ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ ಪೈಶಾಚಿಕ ಕೃತ್ಯ ವಾರದ ಹಿಂದೆ ನಡೆದಿದ್ದು ಸೋಮವಾರ ಬೆಳಕಿಗೆ ಬಂದಿದೆ.

ಯುವತಿಯನ್ನು ಬಂಟ್ವಾಳ ಮೂಲದವಳು ಎಂದು ಗುರುತಿಸಲಾಗಿದೆ. ಈಕೆ ಕಳೆದ ಭಾನುವಾರ (ನ.18)ದಂದು ತೋಟಬೆಂಗ್ರೆಯ ಬೀಚ್‌ಗೆ ಪ್ರೇಮಿಯೊಂದಿಗೆ ತೆರಳಿದ್ದಳು. ಈ ಸಂದರ್ಭ ನಿರ್ಜನ ಪ್ರದೇಶದಲ್ಲಿ ಇವರನ್ನು ನೋಡಿದ ಸ್ಥಳೀಯ ಏಳು ಮಂದಿ ದುಷ್ಕರ್ಮಿಗಳು, ಯುವಕನ ಮೇಲೆ ಮಾರ ಣಾಂತಿಕ ಹಲ್ಲೆ ಮಾಡಿ ಕಟ್ಟಿ ಹಾಕಿ ಯುವತಿಯ ಮೇಲೆ ಕ್ರೂರವಾಗಿ ಅತ್ಯಾಚಾರ ನಡೆಸಿದ್ದಾರೆ.

ಇದೀಗ ಈ ಕುರಿತು ಮಂಗಳೂರಿನ ಮಹಿಳಾ ಠಾಣೆಯಲ್ಲಿ ಸೆಕ್ಷನ್ 376 ಡಿ(ಅಸಹಜ ಲೈಂಗಿಕ ಕ್ರಿಯೆ), 323 , 504 ಮತ್ತು 506  ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು  ಸ್ಥಳೀಯ ತೋಟ ಬೆಂಗ್ರೆಯ ಆರು ಮಂದಿ ಯುವಕರನ್ನು ವಶಕ್ಕೆ ತೆಗೆದುಕೊಂಡಿದ್ದು ತೀವ್ರ ತನಿಖೆ ನಡೆಸುತ್ತಿದ್ದಾರೆ. 

ಮಾದಕ ವ್ಯಸನಿಗಳ ಕಾರ್ಯ?: ತೋಟಬೆಂಗ್ರೆ ಪ್ರದೇಶ ಸಮುದ್ರ ಮತ್ತು  ಫಲ್ಗುಣಿ ನಡುವೆ ಇರುವುದರಿಂದ ಪ್ರವಾಸಿಗರು ಹಾಗೂ ದೂರ ದೂರಿನವರು ಇಲ್ಲಿನ ಪರಿಸರ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಾರೆ. ತೋಟಬೆಂಗ್ರೆ ಪ್ರದೇಶದಲ್ಲಿ ಮಾದಕ ವ್ಯಸನ ಜಾಲ ಹರಡಿದ್ದು, ಹಲವು ಸಮಯದಿಂದ ಈ ಕುರಿತು ಆರೋಪಗಳು ಕೇಳಿ ಬರುತ್ತಿದ್ದವು. ಈಗ ಅತ್ಯಾಚಾರ ಎಸಗಿದ್ದಾರೆ ಎನ್ನಲಾದ ದುಷ್ಕ ರ್ಮಿಗಳು ಮಾದಕ ವಸ್ತು ಸೇವನೆ ಮಾಡಿದ್ದರೇ ಎಂಬ ಕುರಿತು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಪ್ರಕರಣದಿಂದ ಪ್ರವಾಸಿಗರಿಗೆ ಭದ್ರತೆಯ ಆತಂಕ ಎದುರಾಗಿದೆ.

Follow Us:
Download App:
  • android
  • ios