ವನಕಲ್ಲು ಶ್ರೀಗಳ ವಿರುದ್ಧ ಲೈಂಗಿಕ ಕಿರಕುಳ ಆರೋಪ

Women  Accuses Valakallu Shri Of Sexual Harassment
Highlights

ತಾಲೂಕಿನ ಸೋಂಪುರ ಹೋಬಳಿಯ ಹೆಗ್ಗುಂದ ಬಳಿಯ ಶ್ರೀಕ್ಷೇತ್ರ ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನ ಮಠಾಧೀಶ ಡಾ.ಶ್ರೀಬಸವ ರಮಾನಂದ ಸ್ವಾಮೀಜಿ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಯತ್ನ, ಜೀವ ಬೆದರಿಕೆ ಆರೋಪ ಮಾಡಿದ್ದಾರೆ.

ನೆಲಮಂಗಲ : ತಾಲೂಕಿನ ಸೋಂಪುರ ಹೋಬಳಿಯ ಹೆಗ್ಗುಂದ ಬಳಿಯ ಶ್ರೀಕ್ಷೇತ್ರ ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನ ಮಠಾಧೀಶ ಡಾ.ಶ್ರೀಬಸವ ರಮಾನಂದ ಸ್ವಾಮೀಜಿ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಯತ್ನ, ಜೀವ ಬೆದರಿಕೆ ಆರೋಪ ಮಾಡಿದ್ದಾರೆ. ಸಂತ್ರಸ್ತೆ ಮಹಿಳೆ ಬೆಂಗಳೂರಿನ ಅಂಜನಾ ನಗರದ ನಿವಾಸಿಯಾಗಿದ್ದು ಮಾ.31 ರಂದು ಶ್ರೀ  ಮಲ್ಲೇಶ್ವರ ಮಠಕ್ಕೆ ವೈಯಕ್ತಿಕ ಸಮಸ್ಯೆ ಬಗೆಹರಿಸಿಕೊಳ್ಳಲು ಹೋಗಿದ್ದರು.

ಆಗ ಸ್ವಾಮೀಜಿ ಬಲತ್ಕಾರಕ್ಕೆ ಯತ್ನಿಸಿದ್ದು, ಜೀವ ಬೆದರಿಕೆ ಹಾಕಿದ್ದರು. ಈ ಕುರಿತು ತಡವಾಗಿ ಏ.10ರಂದು ಪೊಲೀಸರಿಗೆ ದೂರು ದಾಖಲಿಸಿರುವುದಾಗಿ ಸಂತ್ರಸ್ತೆ ತಿಳಿಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಡಾ.ಶ್ರೀಬಸವ ರಮಾನಂದ ಸ್ವಾಮೀಜಿ, ಅತ್ಯಾಚಾರ ಯತ್ನ ಹಾಗೂ ಜೀವ ಬೆದರಿಕೆ ಆರೋಪ ಮಾಡಿ ಪೊಲೀಸರಿಗೆ ದೂರು ನೀಡಲಾಗಿದೆ. ಶ್ರೀ ಮಠದ ಹಿಂದಿನ ಸ್ವಾಮೀಜಿ ಷಡ್ಯಂತ್ರ ಎಂದು ದೂರಿದ್ದಾರೆ.

loader