ನವದೆಹಲಿ(ಏ.16): ದೆಹಲಿ ಮೆಟ್ರೊ ರೈಲಿನ ಬಾಗಿಲಿಗೆ ಸೀರೆ ಸಿಕ್ಕಿಹಾಕಿಕೊಂಡ ಪರಿಣಾಮ, ಮಹಿಳೆಯೋರ್ವರನ್ನು ರೈಲು ತುಸು ದೂರ ಎಳೆದುಕೊಂಡು ಹೋದ ಘಟನೆ ದೆಹಲಿ ಮೆಟ್ರೋ ರೈಲು ನಿಲ್ದಾಣದಲ್ಲಿ ನಡೆದಿದೆ.

40 ವರ್ಷದ ಗೀತಾ ಎಂಬ ಮಹಿಳೆಯ ಸೀರೆ ರೈಲಿನ ಬಾಗಿಲಿಗೆ ಸಿಕ್ಕಿಹಾಕಿಕೊಂಡಿದೆ. ಇದೇ ವೇಳೆ ರೈಲು ಚಲಿಸಲು ಪ್ರಾರಂಭಿಸಿದ್ದು, ಪರಿಣಾಮ ಪ್ಲಾಟ್‌ಫಾರ್ಮ್‌ನಲ್ಲಿ ಬಿದ್ದು ಗೀತಾ ಗಾಯಗೊಂಡಿದ್ದಾರೆ.

ಗೀತಾ ತಮ್ಮ ಮಗಳೊಂದಿಗೆ ಮೋತಿ ನಗರ ಮೆಟ್ರೊ ನಿಲ್ದಾಣದಿಂದ ಬ್ಲೂ ಲೈನ್ ಮೆಟ್ರೊ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದರು ಎಂದು ಪತಿ ಜಗದೀಶ್ ಪ್ರಸಾದ್ ಮಾಹಿತಿ ನೀಡಿದ್ದಾರೆ.

ಕೂಡಲೇ ಎಚ್ಚೆತ್ತ ಚಾಲಕ ರೈಲನ್ನು ನಿಲ್ಲಿಸಿದ್ದು, ತಲೆಗೆ ಪೆಟ್ಟಾದ ಗೀತಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ದೆಹಲಿ ಮೆಟ್ರೊ ರೈಲು ನಿಗಮ ಸ್ಪಷ್ಟಪಡಿಸಿದೆ.

ದೇಶದಲ್ಲಿ ಏ.11ರಿಂದ ಮೇ.19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.