Asianet Suvarna News Asianet Suvarna News

ಗೆಳೆಯನ ತುಂಡಾಗಿ ಕತ್ತರಿಸಿ ಅಡುಗೆ ಮಾಡಿ ಹಾಕಿದಳು!

ಮಹಿಳೆಯೊಬ್ಬಳು ತನ್ನ ಮಾಜಿ ಗೆಳೆಯನನ್ನು ಹತ್ಯೆ ಮಾಡಿ, ಆತನ ದೇಹದ ಭಾಗಗಳಿಂದ ಮೊರೊಕನ್‌ ಖಾದ್ಯ ತಯಾರಿಸಿ ಮನೆಯ ಕೆಲಸಗಾರರಿಗೆ ತಿನ್ನಿಸಿರುವ ಭೀಕರ ಘಟನೆ ನಡೆದಿದೆ.

Woman cooks ex lover serves him to workers in UAE
Author
Abu Dhabi - United Arab Emirates, First Published Nov 23, 2018, 9:39 AM IST

ಅಲ್‌ ಅಲೀನ್‌[ನ.23]: ಅಬು ಧಾಬಿಯಲ್ಲಿ ಮಹಿಳೆಯೊಬ್ಬಳು ತನ್ನ ಮಾಜಿ ಗೆಳೆಯನನ್ನು ಹತ್ಯೆ ಮಾಡಿ, ಆತನ ದೇಹದ ಭಾಗಗಳಿಂದ ಮೊರೊಕನ್‌ ಖಾದ್ಯ ತಯಾರಿಸಿ ಮನೆಯ ಕೆಲಸಗಾರರಿಗೆ ತಿನ್ನಿಸಿರುವ ಭೀಕರ ಘಟನೆ ನಡೆದಿದೆ.

ವಿಚಾರಣೆಯ ವೇಳೆ, ತನಗೆ ಮೋಸ ಮಾಡಿದಕ್ಕೆ ಮಾಜಿ ಗೆಳೆಯನನ್ನು ಹತ್ಯೆ ಮಾಡಿ ತುಂಡು ತುಂಡಾಗಿ ಕತ್ತರಿಸಿ ಸೇಡು ತೀರಿಸಿಕೊಂಡಿದ್ದಾಗಿ ಮಹಿಳೆ ಒಪ್ಪಿಕೊಂಡಿದ್ದಾಳೆ. ಕೆಲವು ತಿಂಗಳ ಹಿಂದೆಯೇ ಈ ಘಟನೆ ನಡೆದಿದ್ದು, ಹತ್ಯೆಗೀಡಾದ ವ್ಯಕ್ತಿಯ ಸಹೋದರ ಮನೆಗೆ ಬಂದು ಶೋಧಿಸಿದ ಸಂದರ್ಭದಲ್ಲಿ ಘಟನೆ ಬೆಳಕಿಗೆ ಬಂದಿದೆ.

ಇನ್ನೊಬ್ಬಳ ಜೊತೆ ಸಂಬಂಧ ಇಟ್ಟುಕೊಂಡ ಕಾರಣಕ್ಕಾಗಿ ನಮ್ಮಿಬ್ಬರ ಸಂಬಂಧ ಮುರಿದು ಬಿದ್ದಿದೆ. ಆತನೊಂದಿಗೆ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಳು. ಆದರೆ, ಮಿಕ್ಸರ್‌ ಜಾರ್‌ನಲ್ಲಿ ಮಾನವನ ಹಲ್ಲು ಪತ್ತೆಯಾಗಿತ್ತು. ಈ ಸುಳಿವನ್ನು ಬೆನ್ನುಹತ್ತಿ ತನಿಖೆ ನಡೆಸಿದ ವೇಳೆ ಕೊಲೆ ಪ್ರಕರಣ ಬಯಲಾಗಿದ್ದು, ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

Follow Us:
Download App:
  • android
  • ios