ಭ್ರೂಣವನ್ನು ಚೀಲದಲ್ಲಿ ತಂದು ಅತ್ಯಾಚಾರದ ದೂರು ನೀಡಿದಳು

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 23, Jul 2018, 1:52 PM IST
With Foetus In Bag Woman Goes To Cops To File Rape Complaint
Highlights

ಮಹಿಳೆಯೋರ್ವರು ಗರ್ಭಪಾತವಾದ ಭ್ರೂಣವನ್ನು ಚೀಲದಲ್ಲಿ ಹಿಡಿದು ಪೊಲೀಸ್ ಠಾಣೆಗೆ ಬಂದು ಅತ್ಯಾಚಾರದ ದೂರು ದಾಖಲು ಮಾಡಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. 

ಲಖ್ನೋ :  ಅತ್ಯಾಚಾರಕ್ಕೊಳಗಾದ ಮಹಿಳೆಯೋರ್ವರು ಪೊಲೀಸ್ ಠಾಣೆಗೆ ದೂರು ನೀಡಲು  5 ತಿಂಗಳ ಭ್ರೂಣದೊಂದಿಗೆ  ಬಂದ ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶದ ಅಮ್ರೋಹಾದಲ್ಲಿ ನಡೆದಿದೆ. 

ಕಳೆದ 6 ತಿಂಗಳ ಹಿಂದೆ ಮಹಿಳೆ ಮೇಲೆ ಅತ್ಯಾಚಾರ ನಡೆದಿತ್ತು. ಬಳಿಕ ಆಕೆ ಗರ್ಭಿಣಿಯಾಗುತ್ತಿದ್ದಂತೆ ಗರ್ಭಪಾತವಾಗಲು ಮಾತ್ರೆಗಳನ್ನು ನೀಡಲಾಗಿತ್ತು. ಇದರಿಂದ ಆಕೆಗೆ ಗರ್ಭಪಾತವಾಗಿದ್ದು, ಆಕೆ ಭ್ರೂಣದೊಂದಿಗೆ ಪೊಲೀಸ್ ಠಾಣೆಗೆ ಬಂದಿದ್ದಾಳೆ. 

ಆಕೆಯೊಂದಿಗೆ ಸಂಬಂಧ ಇರಿಸಿಕೊಂಡಿದ್ದ ಯುವಕ ಮದುವೆಗೆ ಮಾತ್ರ ನಿರಾಕರಣೆ ಮಾಡುತ್ತಿದ್ದ. ಅತ್ಯಾಚಾರ ಪ್ರಕರಣದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಆತ ಮಾತ್ರೆಗಳನ್ನು ನೀಡಿ ಗರ್ಭಪಾತವಾಗುವಂತೆ ಮಾಡಿದ್ದ ಎಂದು ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. 

loader