ಕೋಲ್ಕತ್ತಾ [ ಜ. 13] ಯುವತಿಯರ ಕನ್ಯತ್ವದ ಬಗ್ಗೆ ಅಶ್ಲೀಲವಾಗಿ ಪಶ್ಚಿಮ ಬಂಗಾಳದ ಪ್ರೊಫೆಸರ್ ಒಬ್ಬರು ಬರೆದಿದ್ದಾರೆ. ಜಾಧವ್‍ಪುರ ವಿಶ್ವವಿದ್ಯಾಲಯದ ಪ್ರೊಫೆಸರ್ ಕನಕ್ ಸರ್ಕಾರ್ ಕನ್ಯತ್ವವನ್ನು ತಂಪು ಪಾನೀಯಕ್ಕೆ ಹೋಲಿಸಿದ್ದಾರೆ.

ನೀವು ಸೀಲ್ ಒಡೆದಿರುವ ತಂಪು ಪಾನೀಯ ಖರೀದಿ ಮಾಡುತ್ತೀರಾ? ಕನ್ಯತ್ವ ಸಹ ಹಾಗೆ ಎಂದು ಬರೆದುಕೊಂಡು ಕಮೆಂಟ್‌ಗಳು ಬಂದ ನಂತರ ಡಿಲೀಟ್ ಮಾಡಿದ್ದಾರೆ.

ನೀವು ಸೀಲ್ ಆದ ಬಾಟಲ್ ಅಥವಾ ಬಿಸ್ಕೇಟ್ ಪೊಟ್ಟಣ ಖರೀದಿ ಮಾಡುತ್ತೀರಾ? ಆಧುನಿಕ ಸಮಾಜದ ಹುಡುಗರಿಗೆ ಕನ್ವತ್ವದ ಬಗ್ಗೆ ಗೊತ್ತೆ ಇಲ್ಲ ಎಂದು ಬರೆದುಕೊಂಡಿದ್ದಾರೆ. ಮಹಿಳೆಯರ ಬಗ್ಗೆ ಕಮೆಂಟ್ ಮಾಡಿದ್ದ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯಾ ಮತ್ತು ರಾಹುಲ್ ಶಿಕ್ಷೆಗೆ ಗುರಿಯಾಗಿದ್ದು ಬಿಸಿ ಬಿಸಿ ಸುದ್ದಿಯಾಗಿರುವ ಸಂದರ್ಭದಲ್ಲಿಯೇ ಈ ಪ್ರೋಫೆಸರ್ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.