ಮೊಟ್ಟೆ ಪದಾರ್ಥ ಮಾಡದ ಪತ್ನಿಯನ್ನು ಗುಂಡಿಕ್ಕಿ ಕೊಂದ ಪತಿ

https://static.asianetnews.com/images/authors/b348a094-0bef-5801-a1f6-61e57071185f.jpg
First Published 15, Jul 2018, 12:51 PM IST
Wife Shot Dead For Not Cooking Egg For Her Husband
Highlights

ಇಲ್ಲೊಬ್ಬ ಕುಡುಕ ಪತಿ, ಗುರುವಾರ ದಿನ ಮೊಟ್ಟೆ ಪದಾರ್ಥ ಮಾಡುವುದಿಲ್ಲ ಎಂದ ಪತ್ನಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ನಡೆದಿದೆ. 

ಬೆಂಗಳೂರು :  ಭಾರತದಲ್ಲಿ ಅಡುಗೆ ವಿಷಯದಲ್ಲೂ ಒಂದಷ್ಟು ನಂಬಿಕೆಗಳಿವೆ. ವಾರದ ಕೆಲವು ದಿನಗಳಲ್ಲಿ ಮಾಂಸಾಹಾರ ಸೇವಿಸುವುದಿಲ್ಲ ಎಂಬ ನಿರ್ಣಯ ಮನೆಗಳಲ್ಲಿ ಸಾಮಾನ್ಯ. ಆದರೆ, ಇಲ್ಲೊಬ್ಬ ಕುಡುಕ ಪತಿ, ಗುರುವಾರ ದಿನ ಮೊಟ್ಟೆ ಪದಾರ್ಥ ಮಾಡುವುದಿಲ್ಲ ಎಂದ ಪತ್ನಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ನಡೆದಿದೆ. 

ಉತ್ತರ  ಪ್ರದೇಶದ ಶಹಜಹಾನ್‌ಪುರದ ದೇವದಾಸ್ ಗ್ರಾಮದ ನವನೀತ್ (33) ಎಂಬಾತ ಮಧ್ಯಾಹ್ನ ಹೊತ್ತಿಗೆ ಮನೆಗೆ ಬಂದು ಪತ್ನಿ ಬಳಿ ಮೊಟ್ಟೆ  ಪದಾರ್ಥ ಮಾಡುವಂತೆ ತಿಳಿ ಸಿದ್ದ. ಆದರೆ ಆಕೆ ಅದಕ್ಕೆ ನಿರಾಕರಿಸಿದ್ದಳು. 

ಈ ಸಂದರ್ಭ ನಡೆದ ಮಾತಿನ ಚಕಮಕಿಯಿಂದ ಆಕ್ರೋಶಿತ ನಾದ ನವನೀತ್ ತನ್ನ ತಂದೆಯ ಪರವಾನಿಗೆಯ ಬಂದೂಕು ತೆಗೆದು ಪತ್ನಿಯ ಮೇಲೆ ಗುಂಡು ಹಾರಿಸಿದ ಎನ್ನಲಾಗಿದೆ.

loader