Asianet Suvarna News Asianet Suvarna News

ನಾಚಿಕೆಯಾಗ್ಬೇಕು...ವಿವಸ್ತ್ರಗೊಳಿಸಿ ವಿಧವೆ ಗುಪ್ತಾಂಗಕ್ಕೆ ಖಾರದ ಪುಡಿ ಎರಚಿದ್ರು!

ಮಕ್ಕಳ ಕಳ್ಳರು  ಎಂದು  ಮುಗ್ಧರನ್ನು ಹತ್ಯೆ ಮಾಡಿದ್ದ ಪ್ರಕರಣಗಳು ಮರೆಯಾಗುತ್ತಿದ್ದ ಸಂದರ್ಭದಲ್ಲಿ ವಿಧವೆಯೊಬ್ಬರನ್ನು ಕ್ಷುಲ್ಲಕ ಕಾರಣಕ್ಕೆ ಶಿಕ್ಷೆಗೆ ಗುರಿಪಡಿಸಿದ ಪ್ರಕರಣ ನಡೆದಿದೆ. ಮಾನವ ಕುಲವೆ ತಲೆ ತಗ್ಗಿಸುವಂಥಹ ಘಟನೆ ನಡೆದು ಹೋಗಿದೆ. 

Widow stripped sexually assaulted with chilli powder in Assam
Author
Bengaluru, First Published Sep 23, 2018, 6:04 PM IST
  • Facebook
  • Twitter
  • Whatsapp

ಗುಹವಾಟಿ[ಸೆ.23] ಅಸ್ಸಾಂನ ಕರೀಂಗಜ್ ಜಿಲ್ಲೆಯಲ್ಲಿ  ಅಮಾನವೀಯ ಕೃತ್ಯವೊಂದು ನಡೆದು ಹೋಗಿದೆ.  ವಿಧವೆ ಒಬ್ಬರನ್ನು ವಿವಸ್ತ್ರಗೊಳಿಸಿ ಆಕೆಯ ಗುಪ್ತಾಂಗಕ್ಕೆ ಖಾರದ ಪುಡಿ  ಹಾಕಿ ಹಿಂಸಿಸಲಾಗಿದೆ.

ಕಳ್ಳಭಟ್ಟಿ ಮಾರುತ್ತಿದ್ದಳು ಎಂಬ ಆರೋಪ ಹೊರಿಸಿ ಮಹಿಳೆಯನ್ನು ಕ್ರೂರವಾಗಿ ನಡೆಸಿಕೊಂಡ ಆರೋಪದ ಮೇಲೆ 19 ಜನರನ್ನು ಬಂಧಿಸಲಾಗಿದೆ. ಮಹಿಳೆಯರೇ ದುಷ್ಕೃತ್ಯದಲ್ಲಿ ಪಾಲ್ಗೊಂಡಿದ್ದಕ್ಕೆ ತಲೆ ತಗ್ಗಿಸಲೇಬೇಕಾಗಿದೆ.

ಸೆ.10ರಂದೆ ಪ್ರಕರಣ ನಡೆದಿದ್ದು ಸೋಶಿಯಲ್ ಮೀಡಿಯಾದಲ್ಲಿ ಈ ಅಮಾನವೀಯ ಕೃತ್ಯದ ವಿಡಿಯೋ ಹರಿದಾಡಿದ ನಂತರ ಪ್ರಕರಣದ ತೀವ್ರತೆ ಅರಿತ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Follow Us:
Download App:
  • android
  • ios