ವಾಣಿಜ್ಯ ಸಚಿವ ಸುರೇಶ್ ಪ್ರಭು ಮೇಲೆ ಕಳೆದ ವಾರ ರಾಜ್ಯಸಭಾ ಸಂಸದ ಪ್ರಭಾಕರ ಕೋರೆ ಗರಂ ಆಗಿ ಕೂಗಾಡಿದರಂತೆ. ಪ್ರತಿ ಬಾರಿ ಭೇಟಿ ಆಗಲು ಹೋದಾಗಲೂ ಹಿರಿಯ ಸಂಸದರಾದ ಕೋರೆ ಅವರಿಗೆ ಸುರೇಶ ಪ್ರಭು ಕುಳಿತುಕೊಳ್ಳಿ ಎಂದು ಕೂಡ ಅನ್ನುತ್ತಿರಲಿಲ್ಲವಂತೆ.

ಇದರಿಂದ ನೊಂದುಕೊಂಡ ಕೋರೆ, ‘ಪ್ರಧಾನಿ ಮೋದಿ ಕೂಡ ಎಷ್ಟೊಂದು ಸೌಜನ್ಯದಿಂದ ಮಾತನಾಡಿಸುತ್ತಾರೆ. ಆದರೆ ನೀವು ಕೂರಿಸೋದೂ ಇಲ್ಲ, ಮಾತನಾಡಿಸೋದೂ ಇಲ್ಲ, ಕೆಲಸ ಮಾಡೋದೂ ಇಲ್ಲ. ಹೀಗಾದರೆ ಹೇಗೆ’ ಎಂದು ಮರಾಠಿಯಲ್ಲಿ ಜೋರಾಗಿ ಕೂಗಾಡಿದರಂತೆ.

ಅಷ್ಟೇ ಅಲ್ಲ, ನಾನು ಪ್ರಧಾನಿಗೆ ದೂರು ಕೊಡುತ್ತೇನೆ ಎಂದರಂತೆ. ರಾಜ್ಯಸಭೆಗೆ ನೇರ ಪ್ರವೇಶ ಪಡೆದು ಮೋದಿಯವರ ಮಾನಸ ಪುತ್ರರಂತೆ ಒಮ್ಮೆಲೇ ಕ್ಯಾಬಿನೆಟ್ ಮಂತ್ರಿಗಳಾಗಿರುವ ಪಿಯೂಷ್ ಗೋಯಲ್, ನಿರ್ಮಲಾ ಸೀತಾರಾಮನ್, ಸ್ಮತಿ ಇರಾನಿ ವಿರುದ್ಧ ಕೂಡ ಇಂಥದ್ದೇ ದೂರುಗಳಿವೆ.

[ಪ್ರಶಾಂತ್ ನಾತು ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ ]