ಬೆಂಗಳೂರು(ನ.7): ದೀಪಾವಳಿಯಲ್ಲಿಯೇ ಮತ್ತೊಂದು ಸಂಕಷ್ಟವನ್ನು ಮಾಜಿ ಸಚಿವ ಹಾಗೂ ಗಣಿಧಣಿ ಗಾಲಿ ಜನಾರ್ದನ ರೆಡ್ಡಿ ಎದುರಿಸುತ್ತಿದ್ದಾರೆ. ಅವರು ಮತ್ತೆ ಜೈಲಿಗೆ ಹೋಗುವ ಪರಿಸ್ಥಿತಿ ಎದುರಾಗಿದೆ ಎಂದು ಹೇಳಲಾಗುತ್ತಿದೆ.

ಹಳೆಯ ಡೀಲ್ ಪ್ರಕರಣವೊಂದು ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಉರುಳಾಗುವ ಸಾಧ್ಯತೆ ಇದೆ. ಈ ಕಾರಣಕ್ಕಾಗಿ ರೆಡ್ಡಿಯನ್ನು ಬಂಧಿಸಲು ಸಿಸಿಬಿ ಪೊಲೀಸರು ಬಲೆ ಬೀಸಿದ್ದಾರೆ.

ರದ್ದಾದ ನೋಟುಗಳನ್ನು ಅಕ್ರಮವಾಗಿ ವರ್ಗಾಯಿಸಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದ್ದು.ಈ ಸಂಬಂಧ ಸದ್ಯದಲ್ಲಿಯೇ ಬೆಂಗಳೂರು ಸಿಸಿಬಿ ವಿಶೇಷ ತಂಡವು ಜನಾರ್ದನ ರೆಡ್ಡಿ ಬಂಧನಕ್ಕೆ ತೆರಳಲಿದೆ ಎಂದು ತಿಳಿದು ಬಂದಿದೆ,

ಸಾರ್ವಜನಿಕರಿಗೆ ವಂಚಿಸಿದ್ದ ಕಂಪೆನಿ ಜೊತೆಗೂಡಿ ಜನಾರ್ದನ ರೆಡ್ಡಿ ಅಮಾನ್ಯಗೊಂಡ ನೋಟುಗಳನ್ನು ವರ್ಗಾವಣೆ ಮಾಡಿಕೊಂಡಿದ್ದರು. ಈ ಪ್ರಕರಣದ ಪ್ರಮುಖ ಆರೋಪಿ ಜನಾರ್ದನ ರೆಡ್ಡಿ ಪಿಎ ಗಾಗಿ ಸಿಸಿಬಿ ತಂಡ ಬೆಂಗಳೂರಿನಲ್ಲಿ ತೀವ್ರ ಶೋಧ ನಡೆಸುತ್ತಿದೆ. 

ಜನಾರ್ದನ ರೆಡ್ಡಿ ಹಾಗೂ ಅವರ ಆಪ್ತ ಅಲಿಖಾನ್ ಪತ್ತೆಗಾಗಿ ಸಿಸಿಬಿ ತಂಡ ಚುರುಕು ಕಾರ್ಯಾಚರಣೆ ನಡೆಸಿದೆ. ಇತ್ತ ಜನಾರ್ದನ ರೆಡಿ ಮೊಬೈಲ್ ಕೂಡ ಸ್ವೀಜ್ ಆಫ್ ಆಗಿದ್ದು ರೆಡ್ಡಿ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಸಿಸಿಬಿ ಪೊಲೀಸರು ದೆಹಲಿ ಮತ್ತು ಹೈದರಾಬಾದ್ ಗೆ ತೆರಳಿ ಶೋಧ ನಡೆಸುವ ಸಾಧ್ಯತೆಯಿದೆ.