Asianet Suvarna News Asianet Suvarna News

ರಾಮಾಯಣದ ಜಟಾಯು ಕರ್ನಾಟಕದಲ್ಲಿ ಪ್ರತ್ಯಕ್ಷ : ಫೊಟೊ ವೈರಲ್?

ರಾಮಾಯಣ ಕಾಲದ ಜಟಾಯು ಪಕ್ಷಿ ಕರ್ನಾಟಕದಲ್ಲೇ ಕಂಡು ಬಂದಿದೆ ಎಂದು ಇದೀಗ ಎಲ್ಲೆಡೆ ಸುದ್ದಿಯೊಂದು ಹರಿದಾಡುತ್ತಿದೆ. ವಾಟ್ಸಾಪ್ ನಲ್ಲಿ ಈ ಫೊಟೊ ಮತ್ತು ಸುದ್ದಿ ವೈರಲ್ ಆಗುತ್ತಿದೆ. 

Whats App Video Saying Jatayu Bird Was Spotted In Karnataka
Author
Bengaluru, First Published Oct 4, 2018, 3:36 PM IST

ಬೆಂಗಳೂರು :  ವಿಶ್ವದ ಅತ್ಯಂತ  ಬೃಹತ್ ಗಾತ್ರದ ಪಕ್ಷಿ  ರಾಮಾಯಣದ ಜಟಾಯು ಕರ್ನಾಟಕದಲ್ಲಿ ಪ್ರತ್ಯಕ್ಷವಾಗಿದೆ ಎಂದು ಸುದ್ದಿಯೊಂದು ಹರಡಿದೆ. 

ಬೆಟ್ಟದ ಮೇಲೆ ಕುಳಿತಿರುವ ಪಕ್ಷಿಯ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.  ಅಲ್ಲದೇ ಅನೇಕ ಜನರು ಅದರ ಫೊಟೊ ಹಾಗೂ ವಿಡಿಯೋವನ್ನು ತೆಗೆದುಕೊಳ್ಳುತ್ತಿರುವುದು ವಾಟ್ಸಾಪ್ ನಲ್ಲಿ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗುತ್ತಿದೆ. 

ಆದರೆ ಇದರ ಸತ್ಯಾಸತ್ಯತೆಯನ್ನು ಪರೀಕ್ಷೆ ಮಾಡಿದಾಗ ಅರ್ಜೆಂಟೈನಾದಲ್ಲಿ 2012ರಲ್ಲಿ ಕಂಡಿದ್ದ ಗಿಡುಗವಾಗಿದ್ದು,  ಕರ್ನಾಟಕದಲ್ಲಿ ಜಟಾಯು ಕಂಡಿದೆ ಎನ್ನುವುದು ಸುಳ್ಳು ಸುದ್ದಿ ಎನ್ನುವುದು ತಿಳಿದು ಬಂದಿದೆ. 

 

Follow Us:
Download App:
  • android
  • ios