ವಾಷಿಂಗ್ಟನ್‌ :  ಪ್ರಧಾನಿಯಾಗಿ 2019ರಲ್ಲಿ ನರೇಂದ್ರ ಮೋದಿ ಅವರು ಪುನರಾಯ್ಕೆ ಆಗದೇ ಹೋದರೆ ಭಾರತದ ಬೆಳವಣಿಗೆಗೆ ಅಪಾಯ ಕಾದಿದೆ ಎಂದು ಅಮೆರಿಕದ ಖ್ಯಾತ ಉದ್ಯಮಿ ಜಾನ್‌ ಚೇಂಬರ್ಸ್‌ ಎಚ್ಚರಿಕೆ ನೀಡಿದ್ದಾರೆ.

‘ಭಾರತದ ಅತ್ಯಂತ ಪ್ರಭಾವಶಾಲಿ ಮತ್ತು ಸಮಗ್ರ ಬೆಳವಣಿಗೆ’ಯು ಮೋದಿ ಆಯ್ಕೆಯಾಗದೇ ಹೋದರೆ ಅಭಿವೃದ್ಧಿಯು ಅಪಾಯಕ್ಕೆ ಸಿಲುಕಲಿದೆ. ಮೋದಿ ಅವರು ದೇಶವನ್ನು ಸರಿದಾರಿಗೆ ಕರೆದೊಯ್ಯುತ್ತಿದ್ದಾರೆ. ಮೋದಿ ಅವರಿಗೆ ಆ ಶಕ್ತಿ ಇದೆ ಎನ್ನಿಸುತ್ತದೆ. ಭಾರತವು ಶಕ್ತಿಶಾಲಿ ಅಭಿವೃದ್ಧಿ ಹಾಗೂ ಸಮಗ್ರ ದೇಶವಾಗಿ ಹೊರಹೊಮ್ಮುವ ಅವಕಾಶವಿದ್ದು, ಇದಕ್ಕಾಗಿ ಮೋದಿ ಅವರಿಗೆ 10 ವರ್ಷ ಅವಕಾಶವಾದರೂ ಅವಕಾಶ ನೀಡಲೇಬೇಕು’ ಎಂದು ಭಾರತೀಯ ಪತ್ರಕರ್ತರ ಜತೆ ಮಾತನಾಡುತ್ತ ಹೇಳಿದರು.

‘ಮೋದಿ ಅವರು ಅಂದುಕೊಂಡಿದ್ದನ್ನು ಪೂರೈಸಲು ಅವಕಾಶ ನೀಡದೇ ಇರುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ’ ಎಂದು ‘ಮೋದಿ 2019ರಲ್ಲಿ ಆಯ್ಕೆಯಾಗದೇ ಹೋದರೆ..’ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. 

‘ಮೋದಿ ಅವರು ಧೈರ್ಯಶಾಲಿ. ತಮ್ಮ ದೇಶದ ಭವಿಷ್ಯದ ಬಗ್ಗೆ ಯೋಚಿಸುತ್ತಲೇ ಅವರು ಮುಂಜಾನೆ ನಿದ್ದೆಯಿಂದ ಏಳುತ್ತಾರೆ’ ಎಂದು ಸಿಸ್ಕೋ ಸಿಸ್ಟಮ್ಸ್‌ನ ಮಾಜಿ ಕಾರ್ಯನಿರ್ವಾಹಕ ಅಧ್ಯಕ್ಷರೂ ಆದ ಜಾನ್‌ ಚೇಂಬರ್ಸ್‌ ಪ್ರಶಂಸಿಸಿದರು.