ಕೊಡಗು :  ಪ್ರವಾಹದ ವೇಳೆ ಭಾರಿ ಆಸ್ತಿ ಹಾಗೂ ಜೀವಹಾನಿಗೆ ಕಾರಣವಾದ ಮಣ್ಣು ಕುಸಿತಕ್ಕೆ ಭೂ ಬಳಕೆ ಪರಿವರ್ತನೆ, ಅವೈಜ್ಞಾನಿಕ ಮನೆಗಳ ನಿರ್ಮಾಣ, ರಸ್ತೆಗಳ ಅವೈಜ್ಞಾನಿಕ ನಿರ್ಮಾಣ ಹಾಗೂ ಜಲಾಶಯಗಳಿಂದ ಏಕಾಏಕಿ ನೀರು ಬಿಡುಗಡೆ ಮಾಡಿರುವುದು ಕಾರಣ ಎಂದು ರಾಜ್ಯ ಸರ್ಕಾರವು ಕೇಂದ್ರಕ್ಕೆ ವರದಿ ಸಲ್ಲಿಸಿದೆ. 

ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ ಸಂದರ್ಭ ದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವ ರಿಗೆ ನೀಡಿರುವ ವರದಿಯಲ್ಲಿ ಕೊಡಗು ಸೇರಿ ದಂತೆ ರಾಜ್ಯದಲ್ಲಿ ಉಂಟಾದ ಅತಿವೃಷ್ಟಿಯಿಂದ ಆಗಿರುವ ಹಾನಿಗೆ ಕಾರಣ, ಹಾನಿಯಾದ ವಿವರಗಳನ್ನು ತಿಳಿಸಲಾಗಿದೆ. ಕೊಡಗು ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಆಗಸ್ಟ್ ತಿಂಗಳಲ್ಲಿ ಉಂಟಾದ ಭಾರಿ ಪ್ರವಾಹ ದಿಂದ ಸಾವಿರಾರು ಕೋಟಿ ರು. ಮೌಲ್ಯದ ಸರ್ಕಾರಿ ಹಾಗೂ ಖಾಸಗಿ ಆಸ್ತಿ ನಾಶ ಹಾಗೂ ಪ್ರಾಣ ಹಾನಿ ಉಂಟಾಗಿತ್ತು. ಪ್ರವಾಹದಿಂದ ಉಂಟಾದ ಮಣ್ಣು ಕುಸಿತದಿಂದಾಗಿ ಏಪ್ರಿಲ್ ನಿಂದ ಬರೋಬ್ಬರಿ 67 ಮಂದಿ ಸಾವನ್ನಪ್ಪಿದ್ದಾರೆ. 

ಜತೆಗೆ, ಆಗಸ್ಟ್ ಒಂದೇ ತಿಂಗಳಲ್ಲಿ 23 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಏಪ್ರಿಲ್‌ನಿಂದ ಕೊಡಗು ಜಿಲ್ಲೆಯಲ್ಲಿ 20 , ದಕ್ಷಿಣ ಕನ್ನಡ 11, ಚಿಕ್ಕಮಗಳೂರು 3, ಶಿವ ಮೊಗ್ಗ 9, ಹಾಸನ 5, ಉಡುಪಿ 9, ಉತ್ತರ ಕನ್ನಡ 7, ಮೈಸೂರು ಭಾಗದಲ್ಲಿ 3 ಮಂದಿ ಸೇರಿ 67 ಮಂದಿ ಪ್ರವಾಹದಿಂದಾಗಿ ಮೃತಪಟ್ಟಿ ದ್ದಾರೆ. ಜತೆಗೆ 3,705.87 ಕೋಟಿ ರು. ಖಾಸಗಿ ಹಾಗೂ ಸಾರ್ವಜನಿಕ ಆಸ್ತಿ ನಷ್ಟ ಉಂಟಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ,. 

ಏಕಾಏಕಿ ನೀರು: ನಾಲ್ಕು ಜಿಲ್ಲೆಯಲ್ಲಿ ನಾಲ್ಕು ದಿನದಲ್ಲಿ 120 ಕ್ಕೂ ಹೆಚ್ಚು ಕಡೆ ಮಣ್ಣು ಕುಸಿತ ಉಂಟಾಗಿದೆ. ಇದಕ್ಕೆ ೪ ದಿನದ ಅವಧಿಯಲ್ಲಿ ಕಾವೇರಿ ಕಣಿವೆಯ ಹಾರಂಗಿ, ಕೆಆರ್‌ಎಸ್, ಹೇಮಾವತಿ ಹಾಗೂ ಕಬಿನಿ ಜಲಾಶಯದಿಂದ 346  ಟಿಎಂಸಿ ನೀರನ್ನು ಏಕಾಏಕಿ ಬಿಟ್ಟದ್ದು ಸಹ ಕಾರಣ.  ಈ ವೇಳೆ ಕಾಲುವೆಗಳಲ್ಲಿ ಹರಿಯ ಬೇಕಾಗಿದ್ದ ನೀರು ಭಾರಿ ಪ್ರವಾಹದಿಂದ ತಗ್ಗು ಪ್ರದೇಶ ಹಾಗೂ ರಸ್ತೆಗಳಲ್ಲೇ ಹರಿದು ಮಣ್ಣು ಕುಸಿತ ಉಂಟಾಗಿದೆ. 

ರಸ್ತೆ ನಿರ್ಮಾಣ ನಿರ್ಲಕ್ಷ್ಯ: ಇದರ ಜತೆಗೆ ಮಣ್ಣು ಕುಸಿತಕ್ಕೆ ಕೊಡಗು ಭಾಗದಲ್ಲಿನ ಸೂಕ್ಷ್ಮ ಪರಿಸರ, ಜತೆಗೆ ಸತತ ಮಳೆಯಿಂದಾಗಿ ಭೂಮಿ ಯಲ್ಲಿದ್ದ ಭಾರಿ ತೇವಾಂಶ ಹಾಗೂ ರಸ್ತೆಗಳ ನಿರ್ಮಾಣದ ವೇಳೆ ತೆಗೆದುಕೊಂಡಿರುವ ನಿರ್ಲ ಕ್ಷ್ಯ ಕ್ರಮಗಳೇ ಕಾರಣ ಎಂದು ಕಂದಾಯ ಇಲಾಖೆ ಸಿದ್ಧಪಡಿಸಿರುವ ವರದಿಯಲ್ಲಿ ಹೇಳಲಾಗಿದೆ. ಇದೇ ವರದಿ ಆಧರಿಸಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ನಿಯೋ
ಗವು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪರಿಹಾರಕ್ಕಾಗಿ ಮನವಿ ಮಾಡಿದೆ. 

ರಸ್ತೆ ನಿರ್ಮಾಣದ ವೇಳೆ ಅವೈಜ್ಞಾನಿಕವಾಗಿ ತಡೆಗೋಡೆ ನಿರ್ಮಾಣ ಮಾಡಲಾಗಿದೆ ಜತೆಗೆ ಸೂಕ್ತ ಚರಂಡಿ ವ್ಯವಸ್ಥೆ ಮಾಡಿಲ್ಲ. ಜತೆಗೆ ಕುಸಿತಕ್ಕೆ ಮಣ್ಣಿನ ಗುಣ, ಭೂ ಬಳಕೆ ಪರಿವರ್ತನೆ, ಸ್ಥಳದ ಆಕೃತಿ, ಇಳಿಜಾರು ಪ್ರದೇಶದಲ್ಲಿ ಮಣ್ಣು ತಡೆಯುವ ಸಾಮರ್ಥ್ಯ ಕ್ಕಿಂತ ಹೆಚ್ಚು ಒತ್ತಡದ ಸಂಚಾರ ಮಾಡಿದ್ದರಿಂದ ಮಣ್ಣು ಕುಸಿತ ಉಂಟಾಗಿದೆ. ಜತೆಗೆ ಮನೆಗಳಿಗೆ ಆಗಿರುವ ಹಾನಿಗೆ ಇಳಿಜಾರು ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ಮನೆಗಳನ್ನು ನಿರ್ಮಿಸಿರು ವುದು ಕಾರಣ ಎಂದು ಹೇಳಲಾಗಿದೆ.  ೮ ಜಿಲ್ಲೆಗಳಲ್ಲಿ ಒಟ್ಟು ಹಾನಿ 3,705.87 ಕೋಟಿ
ರು. ನಷ್ಟ ಉಂಟಾಗಿದೆ ಎಂದಿದೆ ವರದಿ.

ಪಂಚ ಕಾರಣಗಳು
1ಅವೈಜ್ಞಾನಿಕ ರೀತಿ ಮನೆಗಳ ನಿರ್ಮಾಣ
2ರಸ್ತೆಗಳಅಭಿವೃದ್ಧಿಯೂ ಅವೈಜ್ಞಾನಿಕ
3 ಜಲಾಶಯಗಳಿಂದ ಏಕಾಏಕಿ ನೀರು ಬಿಡುಗಡೆ
4ಮಳೆಯಿಂದಾಗಿ ಭೂಮಿಯಲ್ಲಿ ಹೆಚ್ಚಿದ್ದ ತೇವಾಂಶ
5 ಮಿತಿಮೀರಿದ ಭೂಬಳಕೆ ಪರಿವರ್ತ