Asianet Suvarna News Asianet Suvarna News

ರಫೆಲ್ ಡೀಲ್ ರಹಸ್ಯ: ಸತ್ಯ ಹೇಳ್ತಿರೋದು ಯಾರು?

36 ಯುದ್ಧ ವಿಮಾನ, 58 ಸಾವಿರ ಕೋಟಿ ರೂ.

ರಫೆಲ್ ಯುದ್ಧ ವಿಮಾನ ಖರೀದಿ ಹಗರಣವೇ?

ರಾಹುಲ್, ಮೋದಿ ಯಾರು ಸತ್ಯ ಹೇಳುತ್ತಿದ್ದಾರೆ?

ರಫೆಲ್ ರಹಸ್ಯ ಬಹಿರಂಗಕ್ಕೆ ಅಡ್ಡಿ ಏನು?

ಬೆಂಗಳೂರು(ಜು.22): ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ಪರ ಭಾಷಣ ಮಾಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪ್ರದಾನಿ ನರೇಂದ್ರ ಮೋದಿ ವಿರುದ್ಧ ತೀಕ್ಷ್ಣ ವಾಗ್ದಾಳಿಯನ್ನೇ ನಡೆಸಿದ್ದರು. 

ತಮ್ಮ ಭಾಷಣದಲ್ಲಿ ಮೋದಿ ಕಾಯರ್ಯವೈಖರಿಯನ್ನು ಟೀಕಿಸಿದ್ದ ರಾಹುಲ್, ಪ್ರಮುಖವಾಗಿ ರಫೆಲ್ ಯುದ್ಧ ವಿಮಾನ ಖರೀದಿ ಹಗರಣದ ಕುರಿತು ಪ್ರಸ್ತಾಪ ಮಾಡಿದ್ದರು. ರಫೆಲ್ ಯುದ್ಧ ವಿಮಾನ ಖರೀದಿ ಕುರಿತು ಫ್ರಾನ್ಸ್ ಜೊತೆಗೆ ಭಾರತ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು.

ಒಟ್ಟು ೫೬ ಸಾವಿರ ಕೋಟಿ ರೂ. ವೆಚ್ಛದಲ್ಲಿ ೩೬ ಯುದ್ಧ ರಫೆಲ್ ಯುದ್ಧ ವಿಮಾನಗಳನ್ನು ಖರೀದಿಸುವ ಒಡಂಬಡಿಕೆಗೆ ಸಹಿ ಮಾಡಲಾಗಿತ್ತು. ಆದರೆ ಲೋಕಸಭೆಯಲ್ಲಿ ಈ ಕುರಿತು ಪ್ರಸ್ತಾಪಸಿದ ರಾಹುಲ್, ಖರೀದಿ ಒಡಂಬಡಿಕೆ ಕುರಿತು ಮಾಹಿತಿ ಬಹಿರಂಗಪಡಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದರು. 

ಈ ವೇಳೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನೇರ ಆರೋಪ ಮಾಡಿದ್ದ ರಾಹುಲ್, ರಫೆಲ್ ಯುದ್ಧ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಇದಕ್ಕೆ ಮೋದಿ ಮತ್ತು ನಿರ್ಮಲಾ ಅವರೇ ಕಾರಣ ಎಂದು ಆರೋಪಿಸಿದ್ದರು.

ರಾಹುಲ್ ಆರೋಪದಿಂದ ಕೆರಳಿರುವ ಬಿಜೆಪಿ, ಸದನದಲ್ಲಿ ಸುಳ್ಳು ಮಾಹಿತಿ ನೀಡಿದ ರಾಹುಲ್ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡನೆಗೆ ಮುಂದಾಗಿದೆ. ಹಾಗಾದರೆ ಏನಿದು ರಫೆಲ್ ಡೀಲ್?. ಈ ಒಪ್ಪಂದದ ಕುರಿತು ಯಾರು ಸತ್ಯ ಹೇಳುತ್ತಿದ್ದಾರೆ?. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ.