Asianet Suvarna News Asianet Suvarna News

ಡಿಕೆ ಶಿವಕುಮಾರ್ ಯಾಕೆ ಅರೆಸ್ಟ್ ಆಗ್ತಾರೆ? ಆರೋಪಗಳಾವುವು?

ಇಂದು (ಮಂಗಳವಾರ) ರಾಜ್ಯ ಜಲಸಂಪನ್ಮೂಲ ಸಚಿವ ಡಿ,ಕೆ. ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ ಎಫ್‌ಐಆರ್ ದಾಖಲಿಸಿದೆ. ಹಾಗಾದ್ರೆ ಡಿಕೆಶಿ ಮೇಲಿರುವ ಆರೋಪಗಳಾವುವು ಎನ್ನುವ ಸಂಪೂರ್ಣ ಡಿಟೇಲ್ಸ್ ಇಲ್ಲಿದೆ.

What are the allegations on Minister DK Shivakumar
Author
Bengaluru, First Published Sep 18, 2018, 2:57 PM IST

ಬೆಂಗಳೂರು, (ಸೆ.18): ಇಂದು (ಮಂಗಳವಾರ) ರಾಜ್ಯ ಜಲಸಂಪನ್ಮೂಲ ಸಚಿವ ಡಿ,ಕೆ. ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ ಎಫ್‌ಐಆರ್ ದಾಖಲಿಸಿದೆ.

ಡಿ.ಕೆ.ಶಿವಕುಮಾರ್‌ ಆರೋಪ ಸಾಬೀತಾದ್ರೆ 7 ವರ್ಷ ಜೈಲು
ಆದಾಯ ತೆರಿಗೆ ಕಾಯ್ದೆ 276(ಸಿ), 277ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು,  ಒಂದು ವೇಳೆ ಈ ಆರೋಪ ಸಾಬೀತಾದರೆ 7 ವರ್ಷ ಜೈಲು ಶಿಕ್ಷೆಗೆ ಗುರಿಯಾಗಲಿದ್ದಾರೆ. ಹಾಗಾದ್ರೆ ಡಿಕೆಶಿ ಮೇಲಿರುವ ಆರೋಪಗಳಾವುವು ಎನ್ನುವ ಸಂಪೂರ್ಣ ಡಿಟೇಲ್ಸ್ ಇಲ್ಲಿದೆ.

ಮತ್ತೆ ಬಂಧನದ ಭೀತಿಯಲ್ಲಿ ಡಿ.ಕೆ.ಶಿವಕುಮಾರ್‌
* ಆರೋಪ ನಂ.1:  IT ದಾಳಿ ವೇಳೆ ದೆಹಲಿ ಫ್ಲ್ಯಾಟ್ ನಲ್ಲಿ 8 ಕೋಟಿ 59 ಲಕ್ಷ 69 ಸಾವಿರ 100 ರೂ ದಾಖಲೆ ಇಲ್ಲದ ಹಣ ಪತ್ತೆ.
* ಆರೋಪ ನಂ.2: ದಾಖಲೆ ಇಲ್ಲದ 4 ಕೋಟಿ ರೂ ಹಣದಿಂದ ದೆಹಲಿಯ ಸಫ್ದರ್ ಜಂಗ್ ಎನ್ ಕ್ಲೇವ್ ನಲ್ಲಿ ಫ್ಲ್ಯಾಟ್ ಖರೀದಿ ಆರೋಪ.
* ಆರೋಪ ನಂ.3: 41 ಲಕ್ಷದ 3 ಸಾವಿರದ 600 ರೂಪಾಯಿ ಕೃಷಿ ಆದಾಯದ ಬಗ್ಗೆ ಸುಳ್ಳು ಆರೋಪ.
* ಆರೋಪ ನಂ.4 : ಐಟಿ ಅಧಿಕಾರಿಗಳ ಪ್ರಶ್ನೆಗಳಿಗೆ ಡಿಕೆಶಿ ದಾಖಲೆ ಸಮೇತ ಸೂಕ್ತ ಉತ್ತರ ನೀಡದೆ ದಾರಿ ತಪ್ಪಿಸಲು ಯತ್ನ ಆರೋಪ,
* ಆರೋಪ ನಂ.5 : ಇತರ ಆರೋಪಿಗಳ ಜತೆ ಸೇರಿ ಹವಾಲಾ ವಹಿವಾಟು ಮತ್ತು ಅಕ್ರಮ ಹಣಕಾಸು ದಂಧೆ.

Follow Us:
Download App:
  • android
  • ios