ಮಳೆ ಬೀಳಲಿದೆ ಎಂದು ಇಲಾಖೆ ಹೇಳಿದ್ರೆ ಬೀಳುವ ಸಾಧ್ಯತೆ ಶೇ. 75 ಎಂದರ್ಥ!

Weather Forecasting
Highlights

ಹವಾಮಾನ ಇಲಾಖೆಯು ಮಳೆ ಮುನ್ಸೂಚನೆಗಳನ್ನು ನೀಡುತ್ತಿರುತ್ತದೆ. ‘ಹವಾಮಾನ ಇಲಾಖೆ ಹೇಳಿದರೆ ಮಳೆ ಆಗಲ್ಲ ಬಿಡಿ’ ಎಂದು ಕೆಲವೊಮ್ಮೆ ಜನರು ಹಾಸ್ಯ  ಮಾಡೋದುಂಟು. ಆದರೆ ಹವಾಮಾನ ಇಲಾಖೆ  ಬಳಸುವ ಪದಗಳು ಬಹಳ ಮಹತ್ವದ್ದಾಗಿದ್ದು, ಅದು ಮಳೆ  ಎಷ್ಟರ ಮಟ್ಟಿಗೆ ಬೀಳಬಹುದು ಎಂಬುದನ್ನು  ತೋರಿಸುತ್ತದೆ. 

ನವದೆಹಲಿ (ಏ.24): ಹವಾಮಾನ ಇಲಾಖೆಯು ಮಳೆ ಮುನ್ಸೂಚನೆಗಳನ್ನು ನೀಡುತ್ತಿರುತ್ತದೆ. ‘ಹವಾಮಾನ ಇಲಾಖೆ ಹೇಳಿದರೆ ಮಳೆ ಆಗಲ್ಲ ಬಿಡಿ’ ಎಂದು ಕೆಲವೊಮ್ಮೆ ಜನರು ಹಾಸ್ಯ ಮಾಡೋದುಂಟು. ಆದರೆ ಹವಾಮಾನ ಇಲಾಖೆ ಬಳಸುವ

ಪದಗಳು ಬಹಳ ಮಹತ್ವದ್ದಾಗಿದ್ದು, ಅದು ಮಳೆ ಎಷ್ಟರ ಮಟ್ಟಿಗೆ ಬೀಳಬಹುದು ಎಂಬುದನ್ನು ತೋರಿಸುತ್ತದೆ. ಹೀಗಾಗಿ ಮುನ್ಸೂಚನೆಯಲ್ಲಿರುವ ಈ ಪದಬಳಕೆ ಅರಿಯುವುದು ಮಹತ್ವದ್ದಾಗಿದೆ. ಇಂಗ್ಲಿಷ್'ನಲ್ಲಿ ನೀಡಲಾಗುವ ಪದಬಳಕೆಗಳನ್ನು ಗಮನಿಸಿದಾಗ ‘ಮಳೆ ಬೀಳುವ ಸಾಧ್ಯತೆ ಇದೆ (ಇಟ್ ಕುಡ್ ರೇನ್) ಎಂದರೆ ಶೇ.25 ರಷ್ಟು ಸಾಧ್ಯತೆ ಇದೆ ಎಂದರ್ಥ. 

ಮಳೆ ಬೀಳಬಹುದು (ರೇನ್ ಮೇ ಅಕರ್) ಎಂದರೆ ಶೇ.26 ರಿಂದ ಶೇ.50 ಸಾಧ್ಯತೆ ಎಂದರ್ಥ ಹಾಗೂ ಮಳೆ ಬೀಳಲಿದೆ (ರೇನ್ ವುಡ್ ಅಕರ್) ಶೇ.51 ರಿಂದ ಶೇ.75 ರಷ್ಟು ಸಾಧ್ಯತೆ ಎಂದರ್ಥ ಎಂದು ಭಾರತೀಯ ಹವಾಮಾನ ಇಲಾಖೆ ಮಾಜಿ ಮಹಾನಿರ್ದೇಶಕ ಲಕ್ಷ್ಮಣ ಸಿಂಗ್ ರಾಠೋಡ್ ಹೇಳಿದ್ದಾರೆ.

loader